Car sales: ಏಪ್ರಿಲ್‌ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಇವೇ ನೋಡಿ

ಏಪ್ರಿಲ್‍ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್‌ನಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿ ವ್ಯಾಗನ್‌ಆರ್‌ ಹೊಂದಿದೆ. ಇದೇ ವೇಳೆ ಮಾರಾಟದಲ್ಲಿ ಮತ್ತೆ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಂಪನಿಯ ಕಾರು ಕೂಡ ಇದೆ.

Written by - Puttaraj K Alur | Last Updated : May 7, 2023, 05:16 PM IST
  • 20 ಸಾವಿರಕ್ಕೂ ಹೆಚ್ಚು ಯುನಿಟ್‌ ಮಾರಾಟ ಮಾಡಿದ ಮಾರುತಿ ಸುಜುಕಿ ವ್ಯಾಗನ್‌ಆರ್ ಮೊದಲ ಸ್ಥಾನ
  • 18,573 ಯುನಿಟ್‌ ಮಾರಾಟ ಮಾಡಿದ ಮಾರುತಿ ಸುಜುಕಿ ಸ್ವಿಫ್ಟ್ 2ನೇ ಸ್ಥಾನದಲ್ಲಿದೆ
  • 16,180 ಯುನಿಟ್‌ ಮಾರಾಟ ಮಾಡಿದ ಮಾರುತಿ ಸುಜುಕಿ ಬಲೆನೊ 3ನೇ ಸ್ಥಾನದಲ್ಲಿದೆ
Car sales: ಏಪ್ರಿಲ್‌ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಇವೇ ನೋಡಿ title=
ಅತಿಹೆಚ್ಚು ಮಾರಾಟವಾದ ಕಾರುಗಳು

ನವದೆಹಲಿ: ಬಹುತೇಕ ಕಾರು ಕಂಪನಿಗಳಿಗೆ ಏಪ್ರಿಲ್ ತಿಂಗಳು ಉತ್ತಮವಾಗಿಲ್ಲ. ಬಹಳ ಸಮಯದ ನಂತರ ವಾರ್ಷಿಕ ಆಧಾರದ ಮೇಲೆ ಕಂಪನಿಗಳ ಕಾರು ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಆದರೆ ಕೆಲವು ಕಾರುಗಳನ್ನು ಹೆಚ್ಚಾಗಿ ಖರೀದಿಸಲಾಗುತ್ತಿದೆ. ಏಪ್ರಿಲ್‌ನಲ್ಲಿ ಟಾಪ್ 10 ಅತ್ಯುತ್ತಮ ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿಯದ್ದೇ 6 ಕಾರುಗಳನ್ನು ಹೊಂದಿದೆ. 20 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ ವ್ಯಾಗನ್‌ಆರ್ ಹೆಚ್ಚು ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ 2ನೇ ಸ್ಥಾನದಲ್ಲಿದ್ದು, ಮಾರುತಿ ಸುಜುಕಿ ಬಲೆನೊ 3ನೇ ಸ್ಥಾನದಲ್ಲಿದೆ. ಇದೇ ವೇಳೆ ಅತ್ಯಂತ ವೇಗವಾಗಿ ಮಾರಾಟವಾಗುವ ಮೂಲಕ ಮತ್ತೆ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇದೇ ಕಂಪನಿಯ ಕಾರು ಕೂಡ ಇದೆ. ನಾವು ಮಾತನಾಡುತ್ತಿರುವ ಕಾರು ಮಾರುತಿ ಸುಜುಕಿ ಆಲ್ಟೊ, ಇದು ಇನ್ನೂ ಕುಟುಂಬದ ನೆಚ್ಚಿನ ಕಾರಾಗಿದೆ. ಮಾರ್ಚ್ ತಿಂಗಳಲ್ಲಿ ಈ ಕಾರಿನ ಮಾರಾಟ ಕುಸಿತದಿಂದ 14ನೇ ಸ್ಥಾನಕ್ಕೆ ತಲುಪಿದ್ದು, ಏಪ್ರಿಲ್ ನಲ್ಲಿ ಮತ್ತೆ 7ನೇ ಸ್ಥಾನಕ್ಕೇರಿದೆ.

ಇದನ್ನೂ ಓದಿ: Super Earning Idea: 60 ದಿನಗಳ ತರಬೇತಿಯಲ್ಲಿ ಸಿಕ್ತು ಸೂಪರ್ ಐಡಿಯಾ, ಒಂದೇ ವರ್ಷದಲ್ಲಿ 10 ಲಕ್ಷ ಗಳಿಕೆ!

ಏಪ್ರಿಲ್ 2023ರ ಕೊನೆಯ ತಿಂಗಳಲ್ಲಿ ಮಾರುತಿ ಸುಜುಕಿ ಆಲ್ಟೊದ 11,548 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಆದರೆ ಇದಕ್ಕೂ 1 ವರ್ಷದ ಮೊದಲು ಅಂದರೆ ಏಪ್ರಿಲ್ 2022ರಲ್ಲಿ ಇದು 10,443 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಆಲ್ಟೊ ಮಾರಾಟವು ಶೇ.10ಕ್ಕಿಂತ ಹೆಚ್ಚಾಗಿದೆ. ಮತ್ತೊಂದೆಡೆ ಮಾರ್ಚ್‌ಗೆ ಹೋಲಿಸಿದರೆ ಈ ಅಂತರವು ಇನ್ನಷ್ಟು ಹೆಚ್ಚಾಗುತ್ತದೆ, ಏಕೆಂದರೆ ಮಾರ್ಚ್‌ನಲ್ಲಿ ಕೇವಲ 9,139 ಯುನಿಟ್‌ಗಳು ಮಾರಾಟವಾಗಿವೆ.

ಮಾರಾಟದಲ್ಲಿ ಕುಸಿತ ಏಕೆ?  

ವಾಸ್ತವವಾಗಿ ಮಾರುತಿ ಸುಜುಕಿ ಆಲ್ಟೊ ಇದುವರೆಗೆ ಕೇವಲ 2 ಮಾದರಿಗಳಲ್ಲಿ ಲಭ್ಯವಿತ್ತು. ಮಾರುತಿ ಆಲ್ಟೊ 800 ಮತ್ತು ಮಾರುತಿ ಆಲ್ಟೊ ಕೆ10. ಆದರೆ ಕಂಪನಿಯು ಈಗ ಆಲ್ಟೊ 800ನ್ನು ಸ್ಥಗಿತಗೊಳಿಸಿದೆ. ಇದಕ್ಕೆ ಮುಖ್ಯ ಕಾರಣ BS6 ಹಂತ 2 ಹೊರಸೂಸುವಿಕೆಯ ಮಾನದಂಡಗಳು. ಆದ್ದರಿಂದ ಇದೀಗ ಆಲ್ಟೊ ಹೆಸರಿನಲ್ಲಿ ಆಲ್ಟೊ ಕೆ10 ಒಂದೇ ಒಂದು ಮಾದರಿ ಉಳಿದಿದೆ.

ಇದನ್ನೂ ಓದಿ: Dollar VS Rupees: ಜಾಗತಿಕ ಮೀಸಲಿನಲ್ಲಿ ಡಾಲರ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ರೂಪಾಯಿ!

ಏಪ್ರಿಲ್‌ನಲ್ಲಿ 10 ಹೆಚ್ಚು ಮಾರಾಟವಾದ ಕಾರುಗಳು

ಮಾರುತಿ ಸುಜುಕಿ ವ್ಯಾಗನ್ಆರ್ - 20,879 ಯುನಿಟ್‌ಗಳು

ಮಾರುತಿ ಸುಜುಕಿ ಸ್ವಿಫ್ಟ್ - 18,573 ಯುನಿಟ್‌ಗಳು

ಮಾರುತಿ ಸುಜುಕಿ ಬಲೆನೊ - 16,180 ಯುನಿಟ್‌ಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News