Credit Card ಬಳಕೆದಾರರೇ ಎಚ್ಚರ, ನೀವೂ ಈ ತಪ್ಪುಗಳನ್ನು ಮಾಡಿದರೆ ಸಂಕಷ್ಟಕ್ಕೆ ಸಿಲುಕಬಹುದು

ಪ್ರಸ್ತುತ, ಜೀವನ ಶೈಲಿಯಲ್ಲಿ ಪ್ರತಿಯೊಬ್ಬರೂ ಕೂಡ ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ನಾವು ಬೇರೆಯವರಿಂದ ಸಾಲ ಪಡೆಯುವ ಬದಲಿಗೆ ಕ್ರೆಡಿಟ್ ಕಾರ್ಡ್ ಅನ್ನು ಬಳಲಿ ತಮ್ಮ ಆಕಸ್ಮಿಕ ಖರ್ಚು ವೆಚ್ಚಗಳನ್ನು ನಿಭಾಯಿಸಬಹುದು. ಆದರೆ, ಎಚ್ಚರ! ನೀವು ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ತಪ್ಪಿನಿಂದಾಗಿ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Mar 20, 2023, 03:52 PM IST
  • ಅನಿವಾರ್ಯ ಸಂದರ್ಭಗಳಲ್ಲಿ ಬೇರೆಯವರಿಂದ ಸಾಲ ಪಡೆಯುವ ಬದಲಿಗೆ ಕ್ರೆಡಿಟ್ ಕಾರ್ಡ್ ಮೂಲಕ ನಾವು ನಮ್ಮ ಖರ್ಚು-ವೆಚ್ಚಗಳನ್ನು ನಿಭಾಯಿಸಬಹುದು.
  • ಇದಲ್ಲದೆ, ಶಾಪಿಂಗ್ ಮಾಡುವಾಗಲೂ ಕೂಡ ಕ್ರೆಡಿಟ್ ಕಾರ್ಡ್‌ನಿಂದಲೇ ಪಾವತಿಸಬಹುದು.
  • ಆದರೆ, ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿನ ನಿರ್ಲಕ್ಷ್ಯವು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು.
Credit Card ಬಳಕೆದಾರರೇ ಎಚ್ಚರ, ನೀವೂ ಈ ತಪ್ಪುಗಳನ್ನು ಮಾಡಿದರೆ  ಸಂಕಷ್ಟಕ್ಕೆ ಸಿಲುಕಬಹುದು title=
Credit Card Mistakes

ಬೆಂಗಳೂರು: ನೀವೂ ಕೂಡ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಯೋಚಿಸುತ್ತಿದ್ದರೆ ಇದಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ತಿಳಿದಿರುವುದು ಬಹಳ ಮುಖ್ಯ. ಕ್ರೆಡಿಟ್ ಕಾರ್ಡ್ ಬಲಸುವಾಗ ಕೆಲವು ವಿಷಯಗಳನ್ನು ನಿರ್ಲಕ್ಷಿಸಿದರೆ ಶ್  ಹಾಗಾಗಿ, ಕ್ರೆಡಿಟ್ ಕಾರ್ಡ್ ಅನ್ನು ಬಳಸುವಾಗ ಯಾವ ವಿಷಯಗಳ ಬಗ್ಗೆ ಜಾಗೃತರಾಗಿರಬೇಕು. ನಿಮ್ಮಿಂದ ಎಂತಹ ತಪ್ಪುಗಳಾಗುವುದನ್ನು ತಪ್ಪಿಸಬೇಕು ಎಂದು ತಿಳಿಯಿರಿ.

ಕ್ರೆಡಿಟ್ ಕಾರ್ಡ್ ಬಳಸುವಾಗ ಈ ವಿಷಯಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ:-
* ಬಜೆಟ್ ಮೇಲೆ ನಿಗಾವಹಿಸಿ:

ಪ್ರಸ್ತುತ, ಜೀವನ ಶೈಲಿಯಲ್ಲಿ ಪ್ರತಿಯೊಬ್ಬರೂ ಕೂಡ ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಇದರಿಂದಾಗಿ, ಶಾಪಿಂಗ್ ಮಾಡುವಾಗಲೂ ಕೂಡ ಜನರು ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಂತ ನೀವು ಶಾಪಿಂಗ್ ಮಾಡುವಾಗ  ಕ್ರೆಡಿಟ್ ಕಾರ್ಡ್‌ನಿಂದ ಸಿಕ್ಕಾಪಟ್ಟೆ ಖರ್ಚು ಮಾಡಿದರೆ ಅದು ನಿಮ್ಮ ಬಜೆಟ್ ಅನ್ನು ಹಾಳು ಮಾಡಬಹುದು.

ಇದನ್ನೂ ಓದಿ- ಪ್ಯಾನ್‌ ಕಾರ್ಡ್‌ದಾರರೇ ಗಮನಿಸಿ ಮಾರ್ಚ್ 31ರವರೆಗೆ ಈ ಕೆಲಸ ಮಾಡದಿದ್ದರೆ ಭಾರೀ ನಷ್ಟ

* ಕ್ರೆಡಿಟ್ ಕಾರ್ಡ್ ಪಾವತಿ: 
ಅನಿವಾರ್ಯ ಸಂದರ್ಭಗಳಲ್ಲಿ ಬೇರೆಯವರಿಂದ ಸಾಲ ಪಡೆಯುವ ಬದಲಿಗೆ ಕ್ರೆಡಿಟ್ ಕಾರ್ಡ್ ಮೂಲಕ ನಾವು ನಮ್ಮ ಖರ್ಚು-ವೆಚ್ಚಗಳನ್ನು ನಿಭಾಯಿಸಬಹುದು. ಇದಲ್ಲದೆ, ಶಾಪಿಂಗ್ ಮಾಡುವಾಗಲೂ ಕೂಡ ಕ್ರೆಡಿಟ್ ಕಾರ್ಡ್‌ನಿಂದಲೇ ಪಾವತಿಸಬಹುದು. ಆದರೆ, ನಿಗದಿತ ಸಮಯಾದೊಳಗೆ ನೀವು ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಪೂರ್ಣಗೊಳಿಸದಿದ್ದರೆ ವಿಳಂಬ ಶುಲ್ಕವನ್ನು ಪಾವತಿಸಬೇಕಾಗಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರಬಹುದು. 

* ಕ್ರೆಡಿಟ್ ಮಿತಿಗಿಂತ ಹೆಚ್ಚು ಖರ್ಚು ಮಾಡಬೇಡಿ:
ಯಾವುದೇ ಕ್ರೆಡಿಟ್ ಕಾರ್ಡ್ ಪಡೆಯುವಾಗ ಅದರಲ್ಲಿ ಕ್ರೆಡಿಟ್ ಮಿತಿಯನ್ನು ಕೂಡ ನೀಡಲಾಗಿರುತ್ತದೆ. ಪ್ರತಿ ತಿಂಗಳು ನೀವು ಕ್ರೆಡಿಟ್ ಕಾರ್ಡ್‌ನಲ್ಲಿ ಮಿತಿಯವರೆಗೆ ಮಾತ್ರ ಖರ್ಚು ಮಾಡಲು ಅನುಮತಿಸಲಾಗಿದೆ. ಒಂದೊಮ್ಮೆ ನೀವು ಕ್ರೆಡಿಟ್ ಮಿತಿಗಿಂತ ಹೆಚ್ಚು ಖರ್ಚು ಮಾಡಿದರೆ ಅಂತಹ ಸಂದರ್ಭದಲ್ಲಿ ಬ್ಯಾಂಕ್ ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು.

ಇದನ್ನೂ ಓದಿ- ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು ? ಏನು ಹೇಳುತ್ತದೆ ಹೊಸ ತೆರಿಗೆ ನಿಯಮ

* ಕ್ರೆಡಿಟ್ ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡುವುದನ್ನು ತಪ್ಪಿಸಿ:
ಕೆಲವರು ಡೆಬಿಟ್ ಕಾರ್ಡ್‌ನಂತೆಯೇ ಕ್ರೆಡಿಟ್ ಕಾರ್ಡ್ ಮೂಲಕವೂ ಎಟಿಎಂ ಮೂಲಕ ಹಣವನ್ನು ವಿತ್ ಡ್ರಾ ಮಾಡುತ್ತಾರೆ. ಆದರೆ, ಕ್ರೆಡಿಟ್ ಕಾರ್ಡ್‌ನಿಂದ ನಗದು ಹಿಂಪಡೆಯಲು ಕ್ರೆಡಿಟ್ ಅವಧಿ ಲಭ್ಯವಿಲ್ಲ. ನೀವು ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಿದ ದಿನದಿಂದ ನಿಮ್ಮ ಕಾರ್ಡ್‌ಗೆ ವಿಧಿಸಲಾದ ಬಡ್ಡಿಯು ಪ್ರಾರಂಭವಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News