ನೀವು ಬ್ಯಾಂಕ್ ನಲ್ಲಿ ಇಟ್ಟಿರುವ ಹಣ ಸುರಕ್ಷಿತವಾಗಿದೆಯೆಂದು ನಿಶ್ಚಿಂತೆಯಿಂದ ಇದ್ದೀರಾ ? ಇರಲಿ ಎಚ್ಚರ !

ನಿಮ್ಮ ಪಿನ್ ಸಂಖ್ಯೆ ಬೇರೆಯವರಿಗೆ ತಿಳಿಯದಂತೆ ಅಥವಾ ಯಾವುದೇ ರೀತಿಯ ಸುರಕ್ಷತಾ  ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾದರೆ ಈ ಕೆಳಗಿನ ಸುರಕ್ಸತಾ ಕ್ರಮಗಳನ್ನು ಅನುಸರಿಸಬೇಕು. 

Written by - Ranjitha R K | Last Updated : Jul 14, 2023, 12:44 PM IST
  • ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಗ್ಗೆ ತಿಳಿದಿರಬೇಕಾದ ಮಾಹಿತಿ
  • ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಿನ್ ಸಂಖ್ಯೆಗಳನ್ನು ಹೇಗೆ ಸೆಟ್ ಮಾಡಿಕೊಳ್ಳಬೇಕು
  • ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಿನ್ ಹೇಗಿರಬೇಕು
ನೀವು ಬ್ಯಾಂಕ್ ನಲ್ಲಿ ಇಟ್ಟಿರುವ ಹಣ ಸುರಕ್ಷಿತವಾಗಿದೆಯೆಂದು ನಿಶ್ಚಿಂತೆಯಿಂದ ಇದ್ದೀರಾ ? ಇರಲಿ ಎಚ್ಚರ ! title=

ಬೆಂಗಳೂರು : ಬಹಳ ಕಾಲದಿಂದ ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಿನ್ ಸಂಖ್ಯೆಗಳನ್ನು  ಬದಲಾಯಿಸದೆ ಇದ್ದೀರಾ? ಹೌದು ಎಂದಾದರೆ ಅದು ಸರಿಯಾದ ಮತ್ತು ಸುರಕ್ಷಿತ ಅಭ್ಯಾಸವಲ್ಲ. ನಿಮ್ಮ ಪಿನ್ ಸಂಖ್ಯೆ ಬೇರೆಯವರಿಗೆ ತಿಳಿಯದಂತೆ ಅಥವಾ ಯಾವುದೇ ರೀತಿಯ ಸುರಕ್ಷತಾ  ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾದರೆ ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಪಿನ್ ಅನ್ನು ಪದೇ ಪದೇ ಬದಲಾಯಿಸುತ್ತಾ ಇರಬೇಕು. 

ನೀವು ಯಾವ ಸ್ಥಳಗಳು ಮತ್ತು ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ನಿಮ್ಮ ಪಿನ್ ಅನ್ನು ನಮೂದಿಸಿದ್ದೀರಿ ಎಂಬುದು  ನಿಮಗೆ  ನೆನಪಿರುವುದಿಲ್ಲ. ಆದ್ದರಿಂದ ನಿಮ್ಮ ಪಿನ್ ಅನ್ನು ಸರಿಯಾಗಿ ಹೊಂದಿಸುವುದು ಮತ್ತು ಸಾಧ್ಯವಾದರೆ ಪ್ರತಿ ಮೂರು ತಿಂಗಳಿಗೊಮ್ಮೆ ಅದನ್ನು ಬದಲಾಯಿಸುವುದು ಬಹಳ ಮುಖ್ಯವಾಗಿರುತ್ತದೆ. 

ಇದನ್ನೂ ಓದಿ : ಕುಳಿತಲ್ಲಿಂದಲೇ PVC Aadhaar Cardಗೆ ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಹಳ ಮುಂದುವರೆದಿದೆ. ಆದ್ದರಿಂದ ಸಂಭವನೀಯ ಬೆದರಿಕೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ಬಹುತೇಕ ಎಲ್ಲರೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಆದ್ದರಿಂದ ಯಾವುದೇ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮ್ಮ ಕಾರ್ಡ್‌ಗೆ ಪಿನ್ ಸಂಖ್ಯೆಯನ್ನು ಸರಿಯಾಗಿ ಹೊಂದಿಸುವುದು ಮುಖ್ಯವಾಗಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿರಿಸಲು ಪಿನ್ ಸಂಖ್ಯೆಯನ್ನು ಹೊಂದಿಸಲು ಕೆಲವು ಹಂತಗಳು ಇಲ್ಲಿವೆ. 

- ಯುನಿಕ್   ಪಿನ್ ಆಯ್ಕೆಮಾಡಿ: ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಪಿನ್ ಸಂಖ್ಯೆಯು ನಿಮ್ಮ ಮೊಬೈಲ್ ಲಾಕ್ ಸಂಖ್ಯೆ ಅಥವಾ ಇಮೇಲ್ ಪಾಸ್‌ವರ್ಡ್‌ನಂತಹ ನಿಮ್ಮ ದೈನಂದಿನ ಜೀವನದಲ್ಲಿ ನೀವು ಬಳಸುವ ಪಿನ್ ಸಂಖ್ಯೆಯನ್ನು ಹೋಲುವಂಟೆ ಇರಬಾರದು. 

- ಸುಲಭ ಸಂಖ್ಯೆಯನ್ನು ಕಾರ್ಡ್ ಪಿನ್ ಆಗಿ ಇಟ್ಟು ಕೊಳ್ಳಬೇಡಿ :  '1234' ಅಥವಾ '0000' ನಂತಹ ಸಂಖ್ಯೆಗಳನ್ನು ನಿಮ್ಮ ಪಿನ್ ಆಗಿ ಬಳಸಬೇಡಿ.  ಇವುಗಳನ್ನೂ ತುಂಬಾ ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ.

ಇದನ್ನೂ ಓದಿ : ಓಲಾ ಊಬರ್‌ಗೆ ಸೆಡ್ಡು ಹೊಡೆದ‌ ನಮ್ಮ ಯಾತ್ರಿ ಆಟೋ ಆ್ಯಪ್

- ದೀರ್ಘವಾದ ಪಿನ್ ರಚಿಸಿ: ನಿಮ್ಮ ಭದ್ರತಾ ಪಿನ್ ಉದ್ದವಿದ್ದರೆ, ಹ್ಯಾಕರ್‌ಗಳಿಗೆ ಅದನ್ನು ಸುಲಭವಾಗಿ ಕಂಡುಹಿಡಿಯುವುದು  ಸಾಧ್ಯವಾಗುವುದಿಲ್ಲ. 

- ಪಿನ್ ಬದಲಾಯಿಸಿ: ನಿಮ್ಮ ಭದ್ರತಾ ಪಿನ್ ಅನ್ನು ನಿಯಮಿತವಾಗಿ ಬದಲಾಯಿಸಿ. ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ನಿಮ್ಮ ಪಿನ್ ಅನ್ನು ಬದಲಾಯಿಸುವುದು ಉತ್ತಮ ಅಭ್ಯಾಸ. ನೀವು ಬಹಳಷ್ಟು ವಹಿವಾಟುಗಳನ್ನು ನಡೆಸುತ್ತಿದ್ದರೆ  ಖಂಡಿತವಾಗಿಯೂ ನಿಮ್ಮ ಕಾರ್ಡ್ ಪಿನ್ ಅನ್ನು ಪದೇ ಪದೇ ಬದಲಾಯಿಸಿಕೊಳ್ಳಿ. 

- ನಿಮ್ಮ ಪಿನ್ ನೆನಪಿಡಿ: ನಿಮ್ಮ ಕಾರ್ಡ್‌ನಲ್ಲಿ ಪಿನ್ ಸಂಖ್ಯೆಯನ್ನು ಎಂದಿಗೂ ಬರೆಯಬೇಡಿ ಅಥವಾ ಪಿನ್ ಸಂಖ್ಯೆಯನ್ನು ಚೀಟಿಯಲ್ಲಿ ಬರೆದುಕೊಂಡು ಅದನ್ನು ನಿಮ್ಮ ವ್ಯಾಲೆಟ್‌ನಲ್ಲಿ ಇರಿಸಬೇಡಿ.  

ಯಾರೊಂದಿಗೂ ಶೇರ್ ಮಾಡಬೇಡಿ : ನಿಮ್ಮ ಕಾರ್ಡ್ ಮತ್ತು ಪಿನ್ ಸಂಖ್ಯೆಯನ್ನು ಸುರಕ್ಷಿತವಾಗಿರಿಸಿ ಮತ್ತು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬ್ಯಾಂಕ್‌ನಿಂದ  ಎಂದು ಹೇಳಿಕೊಂಡು ಕರೆ ಮಾಡಿ ಕೇಳಿದರೂ ನಿಮ್ಮ ಪಿನ್ ಅನ್ನು ಶೇರ್ ಮಾಡಬೇಡಿ. 

- ಸಾರ್ವಜನಿಕ ಸ್ಥಳಗಳಲ್ಲಿ ಎಟಿಎಂ ಯಂತ್ರಗಳನ್ನು ಬಳಸುವುದನ್ನು ತಪ್ಪಿಸಿ: ಜನಸಂದಣಿ ಇರುವ ಪ್ರದೇಶಗಳಲ್ಲಿ ಅಥವಾ ಅಸುರಕ್ಷಿತ  ಸ್ಥಳಗಳಲ್ಲಿ ಎಟಿಎಂಗಳನ್ನು ಬಳಸಬೇಡಿ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ! ಈ ತಿಂಗಳಿನಿಂದಲೇ ವೇತನ ಹೆಚ್ಚಳ

- ನಿಮ್ಮ ಫೋನ್ ಅನ್ನು ಲಾಕ್ ಮಾಡಿ: ನೀವು ಮೊಬೈಲ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ಹೆಚ್ಚುವರಿ ಭದ್ರತೆಗಾಗಿ ಪಿನ್ ಅಥವಾ ಫಿಂಗರ್‌ಪ್ರಿಂಟ್ ಗುರುತಿಸುವಿಕೆ ವೈಶಿಷ್ಟ್ಯವನ್ನು ಹೊಂದಿಸಲು ಮರೆಯಬೇಡಿ.

- ಫಿಶಿಂಗ್ ಸ್ಕ್ಯಾಮ್‌ಗಳ ಬಗ್ಗೆ ಎಚ್ಚರದಿಂದಿರಿ: ನಿಮ್ಮ ಕಾರ್ಡ್ ವಿವರಗಳು ಅಥವಾ ಪಿನ್ ಕೇಳುವ ಇಮೇಲ್‌ಗಳು ಅಥವಾ ಸಂದೇಶಗಳ ಬಗ್ಗೆ  ಎಚ್ಚರದಿಂದ ಇರಿ. ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು  ಆ ಇಮೇಲ್ ಹಿಂದಿನ ಸತ್ಯವನ್ನು ತಿಳಿದುಕೊಳ್ಳಿ.  

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಭದ್ರತಾ ಪಿನ್ ಅನ್ನು ಹೊಂದಿಸುವುದು ಸಂಭಾವ್ಯ ವಂಚನೆಯಿಂದ ನಿಮ್ಮ ಹಣಕಾಸುಗಳನ್ನು ರಕ್ಷಿಸುವಲ್ಲಿ ಪ್ರಮುಖ ಹಂತವಾಗಿದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ, ಹ್ಯಾಕರ್‌ಗಳು ಭೇದಿಸಲು ಸಾಧ್ಯವಾಗದಂತಹ ಬಲವಾದ ಮತ್ತು ಸುರಕ್ಷಿತ ಪಿನ್ ಅನ್ನು ಸೆಟ್ ಮಾಡಿಕೊಳ್ಳಿ.  ಈ ಡಿಜಿಟಲ್ ಯುಗದಲ್ಲಿ ನಮ್ಮ ಹಣಕಾಸಿನ ಡೇಟಾವನ್ನು ರಕ್ಷಿಸಲು ನಾವು ಜಾಗರೂಕರಾಗಿರಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News