Women Saftey in Train: ಮಹಿಳಾ ಸುರಕ್ಷೆಗಾಗಿ ಹೈಟೆಕ್ಕಾಗುತ್ತಿದೆ ನಮ್ಮ ರೈಲು.! ಈ ಕಾರಣಕ್ಕೆ ನೀವಿನ್ನು ಸೇಫ್

 ಮಹಿಳೆಯರ ಸುರಕ್ಷತೆಗಾಗಿ ಬದಲಾಗುತ್ತಿದೆ ಭಾರತೀಯ ರೈಲ್ವೆ. ಹೈಟೆಕ್ಕಾಗಿ ಬದಲಾಗುತ್ತಿದೆ  ನಮ್ಮ ರೈಲು.

Written by - Ranjitha R K | Last Updated : Feb 11, 2021, 01:46 PM IST
  • ಮಹಿಳೆಯರ ಸುರಕ್ಷೆಗಾಗಿ ಹೈಟಕ್ ಆಗುತ್ತಿದೆ ಭಾರತೀಯ ರೈಲು
  • ಮಹಿಳಾ ಕಂಪಾರ್ಟಮೆಂಟಿನಲ್ಲಿ ಇನ್ನು ಮುಂದೆ ಸಿಸಿಟಿವಿ
  • ಸೋಶಿಯಲ್ ಮೀಡಿಯಾದ ಮೇಲೂ ರೈಲ್ವೆ ಕಣ್ಣು
Women Saftey in Train: ಮಹಿಳಾ ಸುರಕ್ಷೆಗಾಗಿ ಹೈಟೆಕ್ಕಾಗುತ್ತಿದೆ ನಮ್ಮ ರೈಲು.!  ಈ ಕಾರಣಕ್ಕೆ ನೀವಿನ್ನು ಸೇಫ್ title=
ಮಹಿಳೆಯರ ಸುರಕ್ಷೆಗಾಗಿ ಹೈಟಕ್ ಆಗುತ್ತಿದೆ ಭಾರತೀಯ ರೈಲು (file photo)

ನವದೆಹಲಿ : ಮಹಿಳೆಯರ ಸುರಕ್ಷತೆಗಾಗಿ ಬದಲಾಗುತ್ತಿದೆ ಭಾರತೀಯ ರೈಲ್ವೆ. ಹೈಟೆಕ್ಕಾಗಿ ಬದಲಾಗುತ್ತಿದೆ (Hi-tech touch) ನಮ್ಮ ರೈಲು. ಪ್ರಯಾಣಿಕರ ಅದರಲ್ಲೂ ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೈಲಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಬದಲಾಗುತ್ತಿರುವ ರೈಲಿನ ಮಾಹಿತಿ ನೀಡಿದ್ದು ಸ್ವಯಂ ರೈಲ್ವೇ ಸಚಿವ ಪಿಯೂಶ್ ಗೋಯಲ್ (Piyush Goyal). 

ಈ ಸಂಬಂಧ ಸಂಸತ್ತಿಗೆ ಮಾಹಿತಿ ನೀಡಿರುವ ಪಿಯೂಶ್ ಗೋಯಲ್ (Piyush Goyal). , ಹೊಸ ರೈಲ್ವೆ ಕೋಚಿನ ಮಹಿಳೆಯರ ಕಂಪಾರ್ಟ್ಮೆಂನಟಿನಲ್ಲಿ (women compartment) ಸಿಸಿಟಿವಿ (CCTV) ವ್ಯವಸ್ಥೆ ಇರಲಿದೆ. ಜೊತೆಗೆ ಟಾಕ್ ಬ್ಯಾಕ್  ಸಿಸ್ಟಮ್ ಕೂಡಾ ಹಾಕಲಾಗುತ್ತದೆ.  ಕಂಪಾರ್ಟಮೆಂಟಿನ ಎಲ್ಲಾ ಚಟುವಟಿಕೆಗಳ ಮೇಲೆ ಸಿಸಿಟಿವಿ ಕಾವಲು ಇರುತ್ತದೆ. ಇದಲ್ಲದೆ ಕೊಲ್ಕತ್ತ ಮೆಟ್ರೋ ರೈಲಿನ ಎಸಿ ಕೋಚಿನಲ್ಲಿ ಸಿಸಿಟಿವಿ ಕೆಮೆರಾ ಕಣ್ಗಾವಲಿಡಲಿದೆ. ಇಲ್ಲಿಯ ತನಕ 2391 ಹೊಸ ಬೋಗಿ ಮತ್ತು 668 ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಮೂಲಕ ಸುರಕ್ಷೆಯನ್ನು ಬಲಗೊಳಿಸಲಾಗಿದೆ. 

ಇದನ್ನೂ ಓದಿ : IRCTC : ಇನ್ಮೇಲೆ ರೈಲಿನಲ್ಲಿ ಸಿಗುತ್ತೆ ಊಟ ತಿಂಡಿ, ಆದರೆ ಇದೆ ಕೆಲವು ಕಂಡೀಷನ್ಸ್..!

ಪ್ರಯಾಣದ ವೇಳೆ ಸಮಸ್ಯೆಯಾದರೆ 139ಕ್ಕೆ ಡಯಲ್ ಮಾಡಿ :
ರೈಲ್ವೆ Helpline ನಂಬರ್ ಜಾರಿ ಮಾಡಿದೆ. ಪಯಣದ ವೇಳೆ ಸಮಸ್ಯೆಯುಂಟಾದರೆ 139 ನಂಬರಿಗೆ ಡಯಲ್ ಮಾಡಬಹುದು. 139 ನಂಬರ್ 24 ಗಂಟೆ ಕಾರ್ಯನಿರ್ವಹಣೆಯಲ್ಲಿರುತ್ತದೆ. 

ಸೋಶಿಯಲ್ ಮೀಡಿಯಾ (Social Media) ಮೇಲೂ ರೈಲ್ವೆ ಕಣ್ಣು:
ಪ್ರಯಾಣಿಕರು ತಮ್ಮ ಸಮಸ್ಯೆಗಳನ್ನು ಸೋಶಿಯಲ್ ಮೀಡಿಯಾಗಳಲ್ಲೂ ಶೇರ್ ಮಾಡಬಹುದು. ರೈಲ್ವೆ ತಕ್ಷಣದಲ್ಲಿ ಅದಕ್ಕೆ ಸ್ಪಂದಿಸುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಫೇಸ್ ಬುಕ್ (Facebook), ಟ್ವಿಟರ್ (Twitter) ಸೌಲಭ್ಯ ಕೂಡಾ ನೀಡಲಾಗಿದೆ. ಈ ಎಲ್ಲ ಸೌಲಭ್ಯ ಎಲ್ಲಾ ಪ್ರಯಾಣಿಕರಿಗೆ ಲಭ್ಯವಿದೆ. ಆದರೂ, ಮಹಿಳೆಯರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ರೈಲ್ವೆ ಆದ್ಯತೆ ನೀಡುತ್ತದೆ. 

ಇದನ್ನೂ ಓದಿ : ರೈಲಿನಲ್ಲಿ ಬರಲಿದೆ smart window, ಪ್ರಯಾಣಿಕರ ಪ್ರೈವೆಸಿಗೆ ರೈಲ್ವೆ ಇಲಾಖೆ ಒತ್ತು

ಅಪಾಯವಿರುವ ಮಾರ್ಗಗಳಲ್ಲಿ ಸುರಕ್ಷತೆಗೆ ಆದ್ಯತೆ :
ರೈಲ್ವೆಯು ಎಲ್ಲಾ ಮಾರ್ಗಗಳ ಸುರಕ್ಷತೆಯ ಸಮೀಕ್ಷೆ ಮಾಡಿದೆ. ಅದರಲ್ಲಿ ಪ್ರಯಾಣಿಕರಿಗೆ ಅದರಲ್ಲೂ ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಅಪಾಯವಿರುವ ಮಾರ್ಗ ಯಾವುದು ಎನ್ನುವುದನ್ನು ಗುರುತಿಸಿದೆ. ಆ ಮಾರ್ಗಗಳಲ್ಲಿ ಓಡುವ ರೈಲುಗಳಲ್ಲಿ ರೈಲ್ವೆ ರಕ್ಷಣಾ ಬಲದ (RPF) ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ಆ ಮಾರ್ಗಗಳಲ್ಲಿ ಎದುರಾಗಬಹುದಾದ ಅಪಾಯ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪ್ರತಿ ಹಂತದಲ್ಲೂ  ಮೈಕ್ ಗಳಲ್ಲಿ ರೈಲ್ವೆ (Railway) ಅನೌನ್ಸ್ ಮಾಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News