Biggest Bank Scam: 28 ಬ್ಯಾಂಕ್‌ಗಳಿಗೆ 22,842 ಕೋಟಿ ವಂಚಿಸಿದ ಕಂಪನಿ! ಸಿಬಿಐ ಪ್ರಕರಣ ದಾಖಲು

SBI ಮಾಹಿತಿ ಪ್ರಕಾರ, 2015ರಲ್ಲಿ ಈ ಕಂಪನಿಯ ಉದ್ಯಮ ಕುಸಿತ ಕಂಡಿದ್ದರಿಂದ ವಾಣಿಜ್ಯ ಹಡುಗಗಳಿಗೆ ಬೇಡಿಕೆ ತಗ್ಗಿತು. ಇದರಿಂದ ಕಂಪನಿಗೆ ಸಾಲ ಮರುಪಾವತಿ ಕಷ್ಟವಾಯಿತು ಎಂದು ಹೇಳಿದೆ.

Written by - Zee Kannada News Desk | Last Updated : Feb 13, 2022, 09:16 AM IST
  • ಎಬಿಜಿ ಶಿಪ್‌ಯಾರ್ಡ್ ಕಂಪನಿ ಬರೋಬ್ಬರಿ 22,842 ಕೋಟಿ ರೂ. ಬ್ಯಾಂಕ್ ವಂಚನೆ ಮಾಡಿದೆ
  • ಕಂಪನಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಉನ್ನತ ತನಿಖೆ ಕೈಗೊಂಡಿದೆ
  • ಕಂಪನಿಯು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ವ್ಯವಹಾರದಲ್ಲಿ ತೊಡಗಿಸಿಕೊಂಡಿತ್ತು
Biggest Bank Scam: 28 ಬ್ಯಾಂಕ್‌ಗಳಿಗೆ 22,842 ಕೋಟಿ ವಂಚಿಸಿದ ಕಂಪನಿ! ಸಿಬಿಐ ಪ್ರಕರಣ ದಾಖಲು title=
ದೇಶದ ಅತಿದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣ ಬೆಳಕಿಗೆ

ನವದೆಹಲಿ: ಇಲ್ಲಿಯವರೆಗಿನ ದೇಶದ ಅತಿದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾವಿರಾರು ಕೋಟಿ ವಂಚಿಸಿರುವ ಕಂಪನಿ ವಿರುದ್ಧ ಇದೀಗ ಕೇಂದ್ರೀಯ ತನಿಖಾ ದಳ (CBI) ಎಫ್‌ಐಆರ್ ದಾಖಲಿಸಿದೆ. ಮಾಹಿತಿ ಪ್ರಕಾರ ಎಬಿಜಿ ಶಿಪ್ ಯಾರ್ಡ್(ABG Shipyard) ವಿರುದ್ಧ ಈ ಪ್ರಕರಣ ದಾಖಲಾಗಿದೆ. ಸುಮಾರು 22 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಎಬಿಜಿ ಶಿಪ್‌ಯಾರ್ಡ್ ಮತ್ತು ಅದರ ನಿರ್ದೇಶಕರ ವಿರುದ್ಧ 28 ಬ್ಯಾಂಕ್‌ಗಳಿಗೆ 22,842 ಕೋಟಿ ರೂ. ವಂಚಿಸಿದ್ದಕ್ಕಾಗಿ ಎಫ್‌ಐಆರ್(FIR) ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಕಂಪನಿಯು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಇದರ ಹಡಗುಕಟ್ಟೆಗಳು ಗುಜರಾತ್‌ನ ದಹೇಜ್ ಮತ್ತು ಸೂರತ್‌ನಲ್ಲಿವೆ.

ಏನಿದು ವಂಚನೆ ಪ್ರಕರಣ..?

ಎಬಿಜಿ ಶಿಪ್‌ಯಾರ್ಡ್ ಮತ್ತು ಅದರ ನಿರ್ದೇಶಕರು 28 ಬ್ಯಾಂಕ್‌ಗಳಿಗೆ 22,842 ಕೋಟಿ ರೂ.ಗೆ ವಂಚಿಸಿದ್ದಾರೆ(India's Biggest Bank Fraud) ಎಂದು ಆರೋಪಿಸಲಾಗಿದೆ. ಎಬಿಜಿ ಶಿಪ್‌ಯಾರ್ಡ್ ಮತ್ತು ಅದರ ನಿರ್ದೇಶಕರಾದ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಅಗರ್ವಾಲ್ ಅವರು ಬ್ಯಾಂಕ್‌ಗಳಿಗೆ 22,000 ಕೋಟಿ ರೂ.ಗೂ ಹೆಚ್ಚು ವಂಚಿಸಿದ್ದಾರೆ ಎಂದು ಕೇಂದ್ರ ತನಿಖಾ ದಳ ಹೇಳಿದೆ.

ಇದನ್ನೂ ಓದಿDriving Licence: ಡ್ರೈವಿಂಗ್ ಲೈಸೆನ್ಸ್ ಕಳೆದುಹೋದರೆ ಚಿಂತಿಸಬೇಡಿ, ನಿಮಿಷಗಳಲ್ಲಿ ಹೊಸ DLಗೆ ಹೀಗೆ ಅರ್ಜಿ ಸಲ್ಲಿಸಿ

ಹಲವು ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚನೆ

ಎಸ್‌ಬಿಐ ದೂರಿನ ಪ್ರಕಾರ, ಕಂಪನಿಯು 2,925 ಕೋಟಿ ರೂ. ಸಾಲ(Bank Fraud ABG Company)ವನ್ನು ಪಡೆದುಕೊಂಡಿದೆ. ICICI ಯಿಂದ 7,089 ಕೋಟಿ, IDBI ನಿಂದ 3,634 ಕೋಟಿ, ಬ್ಯಾಂಕ್ ಆಫ್ ಬರೋಡಾ (BOB)1,614 ಕೋಟಿ, PNB ಯಿಂದ 1,244 ಕೋಟಿ ಮತ್ತು IOB ನಿಂದ 1228 ಕೋಟಿ ರೂ. ಸಾಲ ಬಾಕಿಯಿದೆ ಎಂದು ತಿಳಿದುಬಂದಿದೆ.

ನೀರವ್ ಮೋದಿಗಿಂತ ದೊಡ್ಡ ವಂಚನೆ

ಈ ಪ್ರಕರಣದಲ್ಲಿ ಸಿಬಿಐ ಇದೀಗ ಹೆಚ್ಚಿನ ತನಿಖೆ ಆರಂಭಿಸಿದೆ. ಎಲ್ಲಾ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಿಂದೆ ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (PNB Bank Fraud) 14 ಸಾವಿರ ಕೋಟಿ ರೂ. ವಂಚಿಸಿ ದೇಶಬಿಟ್ಟು ಎಸ್ಕೇಪ್ ಆಗಿದ್ದ. ನೀರವ್ ಮೋದಿ(Nirav Modi)ಗೆ ಸೇರಿದ ಹಲವು ಆಸ್ತಿಗಳನ್ನು ದೇಶ ಮತ್ತು ವಿದೇಶಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವರನ್ನು ಲಂಡನ್‌ನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಯತ್ನವೂ ನಡೆಯುತ್ತಿದೆ. ಅದೇ ರೀತಿ ಉದ್ಯಮಿ ವಿಜಯ್ ಮಲ್ಯ(Vijay Mallya) ಕೂಡ ವಿವಿಧ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಎಸ್ಕೇಪ್ ಆಗಿದ್ದಾರೆ. ಇವರನ್ನೂ ಭಾರತಕ್ಕೆ ಹಸ್ತಾಂತರಿಸುವ ಕಸರತ್ತು ಅಂತಿಮ ಹಂತದಲ್ಲಿದೆ. ಎಬಿಜಿ ಶಿಪ್ ಯಾರ್ಡ್ ಪ್ರಕರಣವನ್ನು ದೊಡ್ಡ ವಂಚನೆ ಎಂದು ಪರಿಗಣಿಸಲಾಗಿದೆ. SBI ಮಾಹಿತಿ ಪ್ರಕಾರ, 2015ರಲ್ಲಿ ಈ ಕಂಪನಿಯ ಉದ್ಯಮ ಕುಸಿತ ಕಂಡಿದ್ದರಿಂದ ವಾಣಿಜ್ಯ ಹಡುಗಗಳಿಗೆ ಬೇಡಿಕೆ ತಗ್ಗಿತು. ಇದರಿಂದ ಕಂಪನಿಗೆ ಸಾಲ ಮರುಪಾವತಿ ಕಷ್ಟವಾಯಿತು ಎಂದು ಹೇಳಿದೆ.

ಇದನ್ನೂ ಓದಿ: 13-02-2022 Today Gold Price:ಆಭರಣ ಪ್ರಿಯರಿಗೆ ಶಾಕ್, 50 ಸಾವಿರ ಗಡಿ ದಾಟಿದ ಚಿನ್ನದ ಬೆಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News