Job Alert: ಭಾರತೀಯ ಸೇನೆಯಲ್ಲಿ ನೇಮಕಾತಿ, PUC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

Indian Army Recruitment 2024: ಭಾರತೀಯ ಸೇನೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ​ ಪೂರ್ಣಗೊಳಿಸಿರಬೇಕು.

Written by - Puttaraj K Alur | Last Updated : May 18, 2024, 10:45 PM IST
  • ಭಾರತೀಯ ಸೇನೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಒಟ್ಟು 90 10+2 ಟೆಕ್ನಿಕಲ್ ಎಂಟ್ರಿ ಸ್ಕೀಂ- 52 ಹುದ್ದೆಗಳು ಖಾಲಿ ಇವೆ
  • ಜೂನ್ 13 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಿ
Job Alert: ಭಾರತೀಯ ಸೇನೆಯಲ್ಲಿ ನೇಮಕಾತಿ, PUC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ title=
Indian Army Recruitment 2024

Indian Army Recruitment 2024: ಭಾರತೀಯ ಸೇನೆಯು ಖಾಲಿಯಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 90 10+2 ಟೆಕ್ನಿಕಲ್ ಎಂಟ್ರಿ ಸ್ಕೀಂ- 52 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 13 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆಸಕ್ತರು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಈ ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

ಶೈಕ್ಷಣಿಕ ಅರ್ಹತೆ: ಭಾರತೀಯ ಸೇನೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ​ ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: Pune : ಏರ್ ಇಂಡಿಯಾ ವಿಮಾನಕ್ಕೆ ಟ್ರ್ಯಾಕ್ಟರ್ ಡಿಕ್ಕಿ: ಹಾರಾಟ ರದ್ದು

ಉದ್ಯೋಗದ ಸ್ಥಳ: ಕರ್ನಾಟಕ ಸೇರಿದಂತೆ ಭಾರದಾದ್ಯಂತ  

ವೇತನ: ಲೆಫ್ಟಿನೆಂಟ್‌ಗೆ ಮಾಸಿಕ ₹56,100-1,77,500, ಕ್ಯಾಪ್ಟನ್‌ಗೆ ₹61,300-1,93,900, ಮೇಜರ್‌ಗೆ ₹69,400-2,07,200, ಲೆಫ್ಟಿನೆಂಟ್ ಕರ್ನಲ್‌ಗೆ ₹1,21,200-2,12,400, ಕರ್ನಲ್‌ಗೆ ₹1,30,600-2,15,900, ಬ್ರಿಗೇಡಿಯರ್‌ಗೆ ₹1,39,600-2,17,600, ಮೇಜರ್ ಜನರಲ್‌ಗೆ ₹1,44,200-2,18,200, ಲೆಫ್ಟಿನೆಂಟ್ ಜನರಲ್ HAG ಸ್ಕೇಲ್ ₹1,82,200-2,24,100, ಲೆಫ್ಟಿನೆಂಟ್ ಜನರಲ್ HAG+ಸ್ಕೇಲ್ ₹2,05,400-2,24,400, VCOAS/ಆರ್ಮಿ Cdr/ಲೆಫ್ಟಿನೆಂಟ್ ಜನರಲ್ (NFSG) ₹2,25,000 ಮತ್ತು COAS ₹2,50,000 ವೇತನ ನೀಡಲಾಗುತ್ತದೆ. 

ವಯೋಮಿತಿ: ಕೋರ್ಸ್ ಪ್ರಾರಂಭವಾಗುವ ತಿಂಗಳ ಮೊದಲ ದಿನದಂದು ಅಭ್ಯರ್ಥಿಯು 16½ ವರ್ಷಕ್ಕಿಂತ ಕಡಿಮೆ ಮತ್ತು 19½ ವರ್ಷಕ್ಕಿಂತ ಮೇಲ್ಪಟ್ಟಿರಬಾರದು. ಅಂದರೆ ಅಭ್ಯರ್ಥಿಯು ಜುಲೈ 2, 2005ಕ್ಕಿಂತ ಮೊದಲು ಮತ್ತು ಜುಲೈ 1, 2008ರ ನಂತರ ಜನಿಸಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Daily GK Quiz: ಅತಿಹೆಚ್ಚು ಫುಟ್ಬಾಲ್ ವಿಶ್ವಕಪ್ ಗೆದ್ದ ದೇಶ ಯಾವುದು?‌

ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಆನ್​ಲೈನ್ ಮೂಲಕ ಸಲ್ಲಿಸಬಹುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇರವಾಗಿ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News