Lok Sabha Election 2024: ಮತಗಟ್ಟೆಯಲ್ಲಿ ಪತಿಯ ಜೊತೆಗೆ ಅರ್ಧ ಗಂಟೆ ಕಾದು ಮತದಾನ ಮಾಡಿದ ಗೋಲ್ಡನ್‌ ಕ್ವೀನ್!

‌Amulya: ಗೋಲ್ಡನ್‌ ಕ್ವೀನ್‌ ನಟಿ ಅಮೂಲ್ಯ ತಮ್ಮ ಪತಿ ಜಗದೀಶ್‌ ಜೊತೆಗೆ ಮತಗಟ್ಟೆಗೆ ಆಗಮಿಸಿ ಅರ್ಧ ಗಂಟೆಗೂ ಹೆಚ್ಚು ಸಮಯ ಕಾದು ನಂತದ ಮತದಾನದ ಹಕ್ಕನ್ನು ಚಲಾಯಸಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 26, 2024, 10:02 AM IST
  • ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್‌ ಇಂದು ಬೆಳಗ್ಗೆ ವೋಟಿಂಗ್‌ ಬೂತ್‌ಗೆ ಬಂದಾಗ ಅರ್ಧ ಗಂಟೆ ಮತದಾದರ ಸಾಲಿನಲ್ಲಿ ನಿಂತು ತದನಂತರ ಈ ನಟಿ ವೋಟ್‌ ಹಾಕಿದ್ದಾರೆ.
  • ನಟಿ ಅಮೂಲ್ಯ ಮತ್ತು ಜಗದೀಶ್‌ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಬಿಇಟಿ ಕಾನ್ವೆಂಟ್ ಬೂತ್‌ಗೆ ಬಂದಾಗ ಮತದಾನ ಮಾಡಿದ್ದಾರೆ.
  • ಅಮೂಲ್ಯ ಸುಮಾರು ಏಳು ವರ್ಷಗಳಿಂದ ಚಿತ್ರರಂಗದಿಂದ ದೂರವಿರುವ ನಟಿ, ಮದುವೆ ಮಕ್ಕಳು ಎಂದು ಬ್ಯುಸಿಯಾಗಿದ್ದಾರೆ.
Lok Sabha Election 2024: ಮತಗಟ್ಟೆಯಲ್ಲಿ ಪತಿಯ ಜೊತೆಗೆ ಅರ್ಧ ಗಂಟೆ ಕಾದು ಮತದಾನ ಮಾಡಿದ ಗೋಲ್ಡನ್‌ ಕ್ವೀನ್! title=

Amulya At Voting Booth: ಸ್ಯಾಂಡಲ್‌ವುಡ್‌ ಗೋಲ್ಡನ್‌ ಕ್ವೀನ್‌ ನಟಿ ಅಮೂಲ್ಯ ತಮ್ಮ ಪತಿ ಜಗದೀಶ್‌ ಜೊತೆಗೆ ಮತಗಟ್ಟೆಗೆ ಆಗಮಿಸಿ ಮತದಾವ ಹಕ್ಕು ಚಲಾಯಿಸಿದ್ದಾರೆ. ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್‌ ಇಂದು ಬೆಳಗ್ಗೆ ವೋಟಿಂಗ್‌ ಬೂತ್‌ಗೆ ಬಂದಾಗ ಅರ್ಧ ಗಂಟೆ ಮತದಾದರ ಸಾಲಿನಲ್ಲಿ ನಿಂತು ತದನಂತರ ಈ ನಟಿ ವೋಟ್‌ ಹಾಕಿದ್ದಾರೆ.

ನಟಿ ಅಮೂಲ್ಯ ಮತ್ತು ಜಗದೀಶ್‌ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಬಿಇಟಿ ಕಾನ್ವೆಂಟ್ ಬೂತ್‌ಗೆ ಬಂದಾಗ ಮತದಾರರ ಸಾಲಿನಲ್ಲಿ ಅತಿ ಹೆಚ್ಚು ಜನರು ಇದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಸಮಯ ಕಾದ ಬಳಿಕ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗನೆ ಮತದಾನ ಮಾಡಿ ಬಂದಿದ್ದಾರೆ. 

ಇದನ್ನೂ ಓದಿ: ನನ್ನ ಸಿನಿಮಾಗಳು ನಷ್ಟ ಅನುಭವಿಸಿದರೆ ಯಾರನ್ನೂ ಬಿಡುವುದಿಲ್ಲ.! ನಟ ವಿಶಾಲ್ ವಾರ್ನಿಂಗ್‌

ಮತದಾನ ಮಾಡಿದ ನಂತರ ಮಾತನಾಡಿದ ನಟಿ ಅಮೂಲ್ಯ "ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ" ಎಂದರು.

ಅಮೂಲ್ಯ ಸುಮಾರು ಏಳು ವರ್ಷಗಳಿಂದ ಚಿತ್ರರಂಗದಿಂದ ದೂರವಿರುವ ನಟಿ, ಮದುವೆ ಮಕ್ಕಳು ಎಂದು ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಈ ನಟಿ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್‌ ಮಾಡುವುದರ ಬಗ್ಗೆಯೂ ಕೂಡ ಮಾತನಾಡಿದ್ದರು. ಈಕೆ ಕರಾವಳಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಬಣ್ಣದ ಲೋಕದ ಕಡೆ ಮುಖ ಮಾಡಲಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News