Alia Bhat: ಕಪೂರ್ ಕುಟುಂಬದ ಸೊಸೆ ಆಲಿಯಾ ಭಟ್ ಓದಿದ್ದೆಷ್ಟು ಗೊತ್ತಾ?

Alia Bhat Education: ಕಪೂರ್ ಕುಟುಂಬದ ಸೊಸೆ, ಬಾಲಿವುಡ್‌ ನಟಿ ಆಲಿಯಾ ಭಟ್ ತನ್ನ ಅದ್ಭುತ ನಟನೆಯಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.. ಇದೀಗ 31 ವರ್ಷದ ಈ ನಟಿಯ ವಿದ್ಯಾಭ್ಯಾಸದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..   

Written by - Savita M B | Last Updated : Mar 16, 2024, 02:30 PM IST
  • ಆಲಿಯಾ ಭಟ್ ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಮಗಳು
  • . ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ನಾಯಕಿಯಾಗಿ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
 Alia Bhat: ಕಪೂರ್ ಕುಟುಂಬದ ಸೊಸೆ ಆಲಿಯಾ ಭಟ್ ಓದಿದ್ದೆಷ್ಟು ಗೊತ್ತಾ?  title=

Alia Bhat: ಆಲಿಯಾ ಭಟ್ ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಮಗಳು.. ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ನಾಯಕಿಯಾಗಿ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.  

ಇದಾದ ನಂತರ ಆಲಿಯಾ ಭಟ್ ತಮ್ಮ ನಟನಾ ಕೌಶಲ್ಯವನ್ನು ಸುಧಾರಿಸಿಕೊಂಡು.. ಇಂದು ಜನರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದಾರೆ... ಅಷ್ಟೇ ಅಲ್ಲ ಇಂದು ಬಾಲಿವುಡ್ ನ ದುಬಾರಿ ನಾಯಕಿಯರ ಪಟ್ಟಿಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಆಲಿಯಾ ಭಟ್ ಹೆಸರು ಸೇರಿಕೊಂಡಿದೆ.

ಇದನ್ನೂ ಓದಿ-Yuva: ʻಯುವʼ ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರಕಥೆ ರಿವೀಲ್‌ ಮಾಡಿದ ನಿರ್ದೇಶಕ!

ಆಲಿಯಾ ಭಟ್ ಚಿಕ್ಕ ವಯಸ್ಸಿನಲ್ಲೇ ಕಷ್ಟಪಟ್ಟು ಇಂದಿನ ಸ್ಥಾನಕ್ಕೆ ಬರುವುದಲ್ಲದೇ, ಕೋಟಿಗಟ್ಟಲೆ ಆಸ್ತಿಯ ಒಡತಿಯಾಗಿದ್ದಾಳೆ. ಆದರೆ ಆಲಿಯಾ ಭಟ್ ನಟನೆಯ ಕಾರಣದಿಂದ 12ನೇ ತರಗತಿಯಲ್ಲೇ ಓದು ಬಿಟ್ಟಿದ್ದರು... 12ನೇ ತರಗತಿ ಪರೀಕ್ಷೆಗೂ ಈಕೆ ಹಾಜರಾಗಿಲ್ಲ. ಹೀಗಾಗಿ ಆಲಿಯಾ ಭಟ್ 10ನೇ ಪಾಸ್ ಆಗಿದ್ದಾರೆ ಎನ್ನಬಹುದು.

 ಆಲಿಯಾ 10ನೇ ತರಗತಿಯಲ್ಲಿ ಶೇಕಡಾ 71 ಅಂಕಗಳನ್ನು ಪಡೆದಿದ್ದಳು. ಮಾಧ್ಯಮ ವರದಿಗಳ ಪ್ರಕಾರ ಆಲಿಯಾ ಭಟ್ ಬಾಲ್ಯದಿಂದಲೂ ಅಭ್ಯಾಸದಲ್ಲಿ ಕಡಿಮೆ ಆಸಕ್ತಿಯನ್ನು ಹೊಂದಿದ್ದರು... ಅವರು ಮುಂಬೈನ ಜಮ್ನಾಬಾಯಿ ನರ್ಸೀ ಶಾಲೆಯಲ್ಲಿ ಓದಿದರು.  ಸಿನಿರಂಗದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು. ಇನ್ನು ನಟನೆ, ನಿರ್ಮಾಣ, ನಿರ್ದೇಶನದ ಗುಣಗಳು ಈಗಾಗಲೇ ಅವರ ರಕ್ತದಲ್ಲಿದ್ದು.. ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ ಅವರ ನಟನಾ ಕೌಶಲ್ಯಕ್ಕೆ ಎಲ್ಲರೂ ಅಭಿಮಾನಿಗಳಾಗಿದ್ದಾರೆ.

ಇದನ್ನೂ ಓದಿ-Samantha: ಹಿರೋಯಿನ್‌ ಆಗಿ ಅಲ್ಲ... ಸಮಂತಾ ಮೊದಲು ಕೆಲಸ ಮಾಡಿದ್ದು ಇಲ್ಲಿ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News