Amitabh Bachchan: ಶ್ರೀದೇವಿ ಮನವೊಲಿಸಲು ಅಮಿತಾಬ್ ಒಂದು ಟ್ರಕ್ ಗುಲಾಬಿ ಹೂವು ಕಳಿಸಿದ್ದಂತೆ!

Amitabh Bachchan Floral tribute to Sridevi:ಬಾಲಿವುಡ್‌ ನಟಿ ಶ್ರೀದೇವಿ, ಆ ದಿನಗಳಲ್ಲಿ ದಕ್ಷಿಣದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಬಹಳ ಜನಪ್ರಿಯರಾಗಿದ್ದರು. ಆ ಕಾಲದ ಅತ್ಯಂತ ಜನಪ್ರಿಯ ನಟಿ ಎಂದು ಹೇಳಲಾಗುತ್ತದೆ.

Written by - Chetana Devarmani | Last Updated : Feb 2, 2024, 10:56 AM IST
  • ಬಾಲಿವುಡ್‌ ನಟಿ ಶ್ರೀದೇವಿ
  • ಶ್ರೀದೇವಿ ಮನವೊಲಿಸಲು ಹೂಮಳೆ ಸುರಿಸಿದ್ದ ಬಿಗ್‌ ಬಿ
  • 'ಖುದಾ ಗವಃ' ಸಿನಿಮಾಗೆ ಸಂಬಂಧಿಸಿದ ಘಟನೆ
Amitabh Bachchan: ಶ್ರೀದೇವಿ ಮನವೊಲಿಸಲು ಅಮಿತಾಬ್ ಒಂದು ಟ್ರಕ್ ಗುಲಾಬಿ ಹೂವು ಕಳಿಸಿದ್ದಂತೆ!  title=

Amitabh Bachchan and Sridevi connection:ಬಾಲಿವುಡ್‌ ನಟಿ ಶ್ರೀದೇವಿ, ಆ ದಿನಗಳಲ್ಲಿ ದಕ್ಷಿಣದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಬಹಳ ಜನಪ್ರಿಯರಾಗಿದ್ದರು. ಆ ಕಾಲದ ಅತ್ಯಂತ ಜನಪ್ರಿಯ ನಟಿ ಎಂದು ಹೇಳಲಾಗುತ್ತದೆ. ಆ ಯುಗದಲ್ಲಿ ಅವರು ದೊಡ್ಡ ಸ್ಟಾರ್ ಅಮಿತಾಬ್ ಬಚ್ಚನ್‌ಗಿಂತಲೂ ಹೆಚ್ಚು ಸಂಭಾವನೆ ವಿಧಿಸುತ್ತಿದ್ದರಂತೆ. ಹೀಗಿರುವಾಗ ಈ ಇಬ್ಬರು ಸ್ಟಾರ್ ಜೋಡಿಗಳು ತೆರೆ ಮೇಲೆ ಬಂದಾಗಲೆಲ್ಲ ಅಭಿಮಾನಿಗಳು ರೋಮಾಂಚನಗೊಳ್ಳುತ್ತಿದ್ದರು. ಇಬ್ಬರೂ ತಮ್ಮದೇ ಆದ ಚಾರ್ಮ್ ಹೊಂದಿದ್ದರು. ಅಮಿತಾಬ್ ಮತ್ತು ಶ್ರೀದೇವಿ ಇಬ್ಬರೂ ಕೆಲವು ಪ್ರಸಿದ್ಧ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.ಇಂದು ನಾವು ನಿಮಗೆ 'ಖುದಾ ಗವಃ' ಸಿನಿಮಾಗೆ ಸಂಬಂಧಿಸಿದ ಘಟನೆಯೊಂದನ್ನು ಹೇಳಲಿದ್ದೇವೆ. 

ಅನೇಕ ನಟಿಯರು ಅಮಿತಾಬ್ ಬಚ್ಚನ್ ಅವರೊಂದಿಗೆ ಜೋಡಿಯಾಗಿದ್ದರು. ಆದರೆ ಶ್ರೀದೇವಿಯೊಂದಿಗಿನ ಅವರ ಜೋಡಿಯು ಹೆಚ್ಚು ಜನರಿಗೆ ಇಷ್ಟವಾಯಿತು. 'Sridevi: The Eternal Screen Goddess' ಪುಸ್ತಕದಲ್ಲಿ ಅಮಿತಾಬ್‌ ಮತ್ತು ಶ್ರೀದೇವಿಗೆ ಸಂಬಂಧಿಸಿದ ಘಟನೆಯನ್ನು ಉಲ್ಲೇಖಿಸಲಾಗಿದೆ. ಶ್ರೀದೇವಿಯನ್ನು ಮನವೊಲಿಸಲು ಅಮಿತಾಬ್‌ ಬಚ್ಚನ್ ಗುಲಾಬಿ ಹೂವು ತುಂಬಿದ್ದ ಒಂದು ಟ್ರಕ್ ಅನ್ನು ಕಳುಹಿಸಿದ್ದರಂತೆ. ಆದರೆ ಶ್ರೀದೇವಿ ಅದನ್ನು ತಿರಸ್ಕರಿಸಿದರಂತೆ. 

ಇದನ್ನೂ ಓದಿ: Dhanush: ಭಿಕ್ಷುಕನಂತೆ ಸುತ್ತಾಡಿದ ಸ್ಟಾರ್‌ ನಟ.. ಟ್ರಾಫಿಕ್‌ ಜಾಮ್‌, ತಿರುಪತಿ ಭಕ್ತರ ಹಿಡಿಶಾಪ! 

ಈ ಘಟನೆಯ ಬಗ್ಗೆ ಪುಸ್ತಕದಲ್ಲಿ ಸರೋಜ್ ಖಾನ್ ಹೇಳಿದ್ದಾರೆ. ಶ್ರೀದೇವಿ ಅವರೊಂದಿಗೆ ಹಾಡನ್ನು ಮಾಡುತ್ತಿದ್ದೆ. ಈ ಸಮಯದಲ್ಲಿ ಟ್ರಕ್ ಬಂದು ನಟಿಯ ಬಳಿ ನಿಂತಿತು, ಇಡೀ ಕ್ಯಾರಿಯರ್ ಅವಳ ಕಡೆಗೆ ವಾಲಿತು ಮತ್ತು ಅವಳ ಮೇಲೆ ಗುಲಾಬಿ ಹೂವಿನ ಮಳೆಯಾಯಿತು. ನಾನು ಏನಾಯಿತು ಎಂದು ನೋಡಿ ಆಶ್ಚರ್ಯಗೊಂಡೆ. ಆದರೆ ಅದು ಶ್ರೀದೇವಿಯ ಮೇಲೆ ಯಾವುದೇ ವಿಶೇಷ ಪರಿಣಾಮ ಬೀರಲಿಲ್ಲ ಎಂದಿದ್ದಾರೆ. 

ಖುದಾ ಗವಃ ಚಿತ್ರದ ನಿರ್ಮಾಪಕರು ಶ್ರೀದೇವಿ ತಮ್ಮ ಚಿತ್ರದಲ್ಲಿ ನಟಿಸಬೇಕೆಂದು ಬಯಸಿದ್ದರು ಮತ್ತು ಇದಕ್ಕಾಗಿ ಅವರು ಎಲ್ಲಾ ಷರತ್ತುಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗಿದ್ದರು. ಹೀಗಿರುವಾಗ ಶ್ರೀದೇವಿ ಅವರು ಅಮಿತಾಬ್‌ ಜೊತೆ ನಾಯಕಿಯಾಗಿ ನಟಿಸಿದರೆ ಮಾತ್ರ ಚಿತ್ರಕ್ಕೆ ಸಹಿ ಹಾಕುವುದಾಗಿ ಷರತ್ತನ್ನು ಹಾಕಿದ್ದರು. ಮನೋಜ್ ದೇಸಾಯಿ ಮತ್ತು ಮುಕುಂದ್ ಆನಂದ್ ಅವರ ಷರತ್ತನ್ನು ಒಪ್ಪಿಕೊಂಡರು, ಈ ಮೂಲಕ ಶ್ರೀದೇವಿ ಖುದಾ ಗವಃ ಚಿತ್ರತಂಡ ಸೇರಿಕೊಂಡರು. ಈ ಸಿನಿಮಾಗೆ ಒಪ್ಪಿಕೊಳ್ಳಬೇಕೆಂದೇ ಅಮಿತಾಬ್‌ ಬಚ್ಚನ್‌ ಶ್ರೀದೇವಿಯ ಮೇಲೆ ಹೋವಿನ ಮಳೆ ಸುರಿಸಿದ್ದರು. 

ಇದನ್ನೂ ಓದಿ: ಒಟಿಟಿಯಲ್ಲೂ 'Animal' ರಾಕ್, 3 ದಿನದಲ್ಲೇ ಹೊಸ ದಾಖಲೆ ಬರೆದ ರಣಬೀರ್ ಕಪೂರ್ ಚಿತ್ರ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News