Anushka Sharma Birthday: 3 Idiots ನಲ್ಲಿ ಕರೀನಾ ಪಾತ್ರಕ್ಕೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್‌!

Anushka Sharma Birthday: ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಆಡಿಷನ್ ಕ್ಲಿಪ್‌ಗಳಲ್ಲಿ ಒಂದು ವೈರಲ್ ಆಗುತ್ತಿದೆ. ಅದನ್ನು ಅವರು '3 ಈಡಿಯಟ್ಸ್' ಚಿತ್ರಕ್ಕಾಗಿ ರೆಕಾರ್ಡ್ ಮಾಡಿದ್ದರು. 3 Idiots ನಲ್ಲಿ ಕರೀನಾ ಪಾತ್ರಕ್ಕೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್‌ ಆಗುತ್ತಿದೆ.   

Written by - Chetana Devarmani | Last Updated : May 1, 2023, 04:13 PM IST
  • ಅನುಷ್ಕಾ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ
  • 3 Idiots ಸಿನಿಮಾಗೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್
  • ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್‌
Anushka Sharma Birthday: 3 Idiots ನಲ್ಲಿ ಕರೀನಾ ಪಾತ್ರಕ್ಕೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್‌!  title=
Anushka Sharma

Anushka Sharma First Audition Video: ಬಾಲಿವುಡ್‌ನ ಟಾಪ್ ಹೀರೋಯಿನ್‌ಗಳ ಸಾಲಿನಲ್ಲಿರುವ ನಟಿ ಅನುಷ್ಕಾ ಶರ್ಮಾ ಇಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳು ಬರುತ್ತಿವೆ. ಈ ಎಲ್ಲದರ ನಡುವೆ, ಅವರ ಹಳೆಯ ದಿನಗಳ ಕ್ಲಿಪ್ ಕೂಡ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ಬ್ಲಾಕ್‌ಬಸ್ಟರ್ ಚಿತ್ರಕ್ಕಾಗಿ ಆಡಿಷನ್ ಕೊಟ್ಟಿದ್ದರು. ಅನುಷ್ಕಾ ಈ ಚಿತ್ರದಿಂದ ತಿರಸ್ಕರಿಸಲ್ಪಟ್ಟರು. ಆದರೆ ಅಭಿಮಾನಿಗಳು ಆಡಿಷನ್‌ನಲ್ಲಿ ಅವರ ಅವರ ನಟನೆಯಿಂದ ಪ್ರಭಾವಿತರಾಗಿದ್ದಾರೆ. ವರ್ಷಗಳ ನಂತರ ಸ್ವತಃ ಅನುಷ್ಕಾ ಈ ಕ್ಲಿಪ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಟಾಪ್‌ ನಟಿ ಮಾತ್ರವಲ್ಲ.. ಸ್ಟಾರ್‌ ಕ್ರಿಕೆಟಿಗನ ಪತ್ನಿ ಈ ಫೋಟೋದಲ್ಲಿರುವ ಪುಟ್ಟ ಬಾಲಕಿ

ವಾಸ್ತವವಾಗಿ, ಅನುಷ್ಕಾ ಶರ್ಮಾ 2008 ರಲ್ಲಿ 'ರಬ್ ನೆ ಬನಾ ದಿ ಜೋಡಿ' ಚಿತ್ರಕ್ಕಿಂತ ಮೊದಲು ರಾಜ್‌ಕುಮಾರ್ ಹಿರಾನಿ ಅವರ '3 ಈಡಿಯಟ್ಸ್' ಚಿತ್ರಕ್ಕಾಗಿ ಆಡಿಷನ್ ನೀಡಿದರು. ಆಗ ರಾಜ್‌ಕುಮಾರ್‌ ನಟರನ್ನು ಹುಡುಕುತ್ತಿದ್ದರು. ಈ ವೇಳೆ ಅನುಷ್ಕಾ ಕೂಡ ತನ್ನ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅನುಷ್ಕಾ ಈ ಚಿತ್ರಕ್ಕಾಗಿ ಆಡಿಷನ್ ಕೊಟ್ಟಿದ್ದರು ಮತ್ತು ಈ ಆಡಿಷನ್‌ನಲ್ಲಿ ಅವರು 'ಮುನ್ನಾಭಾಯಿ ಎಂಬಿಬಿಎಸ್' ಸಂಭಾಷಣೆಯನ್ನು ಹೇಳುತ್ತಿದ್ದರು. ಆದರೆ ಈ ಆಡಿಷನ್‌ನಲ್ಲಿ ಅವರು ರಿಜೆಕ್ಟ್‌ ಆದರು. ಅಂತಿಮವಾಗಿ ಕರೀನಾ ಕಪೂರ್ '3 ಈಡಿಯಟ್ಸ್' ಚಿತ್ರದಲ್ಲಿ ನಟಿಸಿದರು. ವೈರಲ್ ಆಗುತ್ತಿರುವ ಅನುಷ್ಕಾ ಆಡಿಯೋ ಕ್ಲಿಪ್ ಇಲ್ಲಿದೆ ನೋಡಿ-

ರಾಜ್‌ಕುಮಾರ್ ಹಿರಾನಿ ಅವರ ಎರಡನೇ ಚಿತ್ರ ಪಿಕೆ ಚಿತ್ರೀಕರಣದ ವೇಳೆ ಅನುಷ್ಕಾ ಈ ಆಡಿಷನ್ ಕ್ಲಿಪ್ ತೋರಿಸಿದರು. ಈ ಚಿತ್ರದ ಸೆಟ್‌ನಲ್ಲಿ ಅವರು ಈ ಕ್ಲಿಪ್ ಅನ್ನು ತೋರಿಸಿದ ತಕ್ಷಣ, ಎಲ್ಲರೂ ಆಶ್ಚರ್ಯಚಕಿತರಾದರು. ಈ ಕ್ಲಿಪ್ ತನಗೆ ತಲುಪಲೇ ಇಲ್ಲ ಎಂದು ಸ್ವತಃ ರಾಜ್‌ಕುಮಾರ್ ಹಿರಾನಿ ವಿಷಾದ ವ್ಯಕ್ತಪಡಿಸಿದ್ದಾರೆ. ಅಮೀರ್ ಖಾನ್ ಕೂಡ ಅನುಷ್ಕಾ ನಟನೆಯಿಂದ ತುಂಬಾ ಪ್ರಭಾವಿತರಾಗಿದ್ದರು. ಗ್ಲಿಸರಿನ್ ಸಹಾಯವಿಲ್ಲದೆ ಭಾವನಾತ್ಮಕ ದೃಶ್ಯವನ್ನು ನೀಡಿದ್ದಕ್ಕಾಗಿ ಅಮೀರ್ ಆಕೆಯನ್ನು ಹೊಗಳಿದರು. 

ಇದನ್ನೂ ಓದಿ: ಶ್ರೀದೇವಿಗೆ ಸ್ಟಾರ್ ಪಟ್ಟ ಬಂದಿದ್ದು ಈ ನಟಿ ಮಾಡಿದ ಆ ಒಂದು ತಪ್ಪಿನಿಂದ!

'3 ಈಡಿಯಟ್ಸ್' ಬದಲಿಗೆ, ಅನುಷ್ಕಾ 2008 ರಲ್ಲಿ 'ರಬ್ ನೆ ಬನಾ ದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಶಾರುಖ್‌ ಖಾನ್‌ ಜೊತೆ ನಟಿಸಿದ್ದಾರೆ. ಅವರ ಮೊದಲ ಚಿತ್ರವು ಬ್ಲಾಕ್‌ಬಸ್ಟರ್ ಹಿಟ್‌ ಕೊಟ್ಟಿತು. ನಂತರ ಬ್ಯಾಂಡ್ ಬಾಜಾ ಬಾರಾತ್, ಸುಲ್ತಾನ್, ದಿಲ್ ಧಡಕ್ನೆ ದೋ, ಏ ದಿಲ್ ಹೈ ಮುಷ್ಕಿಲ್, ಸುಯಿ ಧಾಗಾ ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿನ ಪಾತ್ರಗಳೊಂದಿಗೆ ಬಹುಮುಖ ನಟಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. 2013 ರಲ್ಲಿ, ಅವರು ತಮ್ಮ ಸಹೋದರ ಕರ್ಣೇಶ್ ಶರ್ಮಾ ಅವರೊಂದಿಗೆ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಎಂಬ ನಿರ್ಮಾಣ ಕಂಪನಿಯನ್ನು ಸಹ-ಸ್ಥಾಪಿಸಿದರು ಮತ್ತು NH10, ಪರಿ ಮತ್ತು ಫಿಲೌರಿಯಂತಹ ಚಲನಚಿತ್ರಗಳನ್ನು ನಿರ್ಮಿಸಿದರು. ಜೊತೆಗೆ ಪಾತಾಲ್ ಲೋಕ್, ಬಲ್‌ಬುಲ್ ಮತ್ತು ಕ್ಲಾ ಮುಂತಾದ ಸ್ಟ್ರೀಮಿಂಗ್ ಕಂಟೆಂಟ್‌ಗಳನ್ನು ನಿರ್ಮಿಸಿದರು. ಅನುಷ್ಕಾ ಕ್ರಿಕೆಟಿಗ ವಿರಾಟ್ ಕೊಹ್ಲಿಯವರನ್ನು ವಿವಾಹವಾಗಿದ್ದಾರೆ ಮತ್ತು ದಂಪತಿಗಳು ತಮ್ಮ ಮಗಳು ವಾಮಿಕಾ ಅವರನ್ನು ಜನವರಿ 2021 ರಲ್ಲಿ ಸ್ವಾಗತಿಸಿದರು. 

ಇದನ್ನೂ ಓದಿ: ಅಬ್ಬಬ್ಬಾ.! ನಟಿ ಸಮಂತಾ ಒಂದು ಚಿತ್ರಕ್ಕೆ ಪಡೆವ ಸಂಭಾವನೆ ಇಷ್ಟು ಕೋಟಿನಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News