BBK10: ʼನಮಸ್ಕಾರ, ಬಿಗ್‌ಬಾಸ್‌ ನ್ಯೂಸ್‌ಗೆ ಸ್ವಾಗತ ಸುಸ್ವಾಗತʼ.. ದೊಡ್ಮನೆ ಈಗ ನ್ಯೂಸ್‌ ರೂಮ್!

Bigg Boss Kannada: ಭಾನುವಾರದ ‘ಸೂಪರ್‍ ಸಂಡೆ ವಿತ್‌ ಸುದೀಪ್‌’ ಎಪಿಸೋಡಿನಲ್ಲಿ ಮಡಿಕೆ ಒಡೆಯುವ ‘ಅಗ್ರೆಸಿವ್‌’ ಆಕ್ಟಿವಿಟಿ ನಡೆಸಿದ್ದ ಸ್ಪರ್ಧಿಗಳ ಕಿಚ್ಚು ಇನ್ನೂ ಆರಿದಂತಿಲ್ಲ. ಬದಲಿಗೆ ಹೊಸ ವಾರದ ಮೊದಲ ದಿನ ಅದು ಜೊರಾಗೇ ಭಗಭಗಿಸುತ್ತಿದೆ.   

Written by - Savita M B | Last Updated : Dec 18, 2023, 11:41 AM IST
  • ಬಿಗ್‌ಬಾಸ್‌ ಮನೆಯ ಸುದ್ದಿಗಳು ನ್ಯೂಸ್‌ ಚಾನಲ್‌ಗಳಲ್ಲಿ ಪ್ರಸಾರವಾಗುವುದು, ಚರ್ಚೆಯಾಗುವುದನ್ನು ದಿನವೂ ನೋಡುತ್ತೇವೆ.
  • ಆದರೆ ಈ ವಾರ ಬಿಗ್‌ಬಾಸ್‌ ಮನೆಯೊಳಗೇ ಒಂದು ಸ್ಪೆಷಲ್‌ ಇದೆ.
BBK10: ʼನಮಸ್ಕಾರ, ಬಿಗ್‌ಬಾಸ್‌ ನ್ಯೂಸ್‌ಗೆ ಸ್ವಾಗತ ಸುಸ್ವಾಗತʼ.. ದೊಡ್ಮನೆ ಈಗ ನ್ಯೂಸ್‌ ರೂಮ್!  title=

BBK10: ಬಿಗ್‌ಬಾಸ್‌ ಮನೆಯ ಸುದ್ದಿಗಳು ನ್ಯೂಸ್‌ ಚಾನಲ್‌ಗಳಲ್ಲಿ ಪ್ರಸಾರವಾಗುವುದು, ಚರ್ಚೆಯಾಗುವುದನ್ನು ದಿನವೂ ನೋಡುತ್ತೇವೆ. ಆದರೆ ಈ ವಾರ ಬಿಗ್‌ಬಾಸ್‌ ಮನೆಯೊಳಗೇ ಒಂದು ಸ್ಪೆಷಲ್‌ ಇದೆ. ‘ನಮಸ್ಕಾರ, ಬಿಗ್‌ಬಾಸ್‌ ನ್ಯೂಸ್‌ಗೆ ಸ್ವಾಗತ ಸುಸ್ವಾಗತ… ಹೆಡ್‌ಲೈನ್ಸ್‌…’ ಎಂಬ ಧ್ವನಿ ಬಿಗ್‌ಬಾಸ್ ಮನೆಯೊಳಗೇ ಮೊಳಗಿದೆ. 

ಇದನ್ನೂ ಓದಿ-BBK 10: ಸ್ನೇಹಿತ್ ಲೋಟದಲ್ಲಿಯೇ ಕಾಫಿ ಕುಡಿಯುವ ನಮ್ರತಾ!

ಅಂದಹಾಗೆ, ಇದು ಈ ವಾರ ಬಿಗ್‌ಬಾಸ್‌, ಮನೆಯ ಸದಸ್ಯರಿಗೆ ನೀಡಿದ ಹೊಸ ಟಾಸ್ಕ್‌. ಈ ಟಾಸ್ಕ್‌ನ ಅನ್ವಯ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗಳು, ಸ್ಪರ್ಧಿಗಳ ವರ್ತನೆಗಳು, ಅವರ ಕುರಿತಾದ ಅಭಿಪ್ರಾಯಗಳನ್ನು ಸುದ್ದಿರೂಪದಲ್ಲಿ ಓದುತ್ತಾರೆ. 

ಇದನ್ನೂ ಓದಿ-Bigg Boss: ಖ್ಯಾತ ಬಿಗ್‌ಬಾಸ್‌ ಸ್ಪರ್ಧಿ ಕಾರಿನ ಮೇಲೆ ಅನಿರೀಕ್ಷಿತ ದಾಳಿ..! ಅಸಲಿಗೆ ನಡೆದಿದ್ದೇನು?

ಅದರ ಬಗ್ಗೆ ಪ್ಯಾನಲ್ ಡಿಸ್ಕಶನ್‌ಗಳು ನಡೆಯಲಿವೆ. ತಮ್ಮ ಹೇಳಿಕೆಗಳಿಗೆ ಸ್ಪರ್ಧಿಗಳು ಸ್ಪಷ್ಟೀಕರಣ ನೀಡುತ್ತಾರೆ. ಅದರ ವಿರುದ್ಧವಾಗಿರುವವರು ಅದಕ್ಕೆ ಕೌಂಟರ್ ಕೊಡುತ್ತಾರೆ. ಒಟ್ಟಾರೆ ಇಷ್ಟು ದಿನ ಬಿನ್‌ ಬ್ಯಾಗ್‌ಗಳಲ್ಲಿ, ಕಿಚನ್‌ನಲ್ಲಿ, ಬೆಡ್‌ರೂಮ್‌ನಲ್ಲಿ, ಜೈಲ್‌ ಬಾಗಿಲಲ್ಲಿ ನಡೆಯುತ್ತಿದ್ದ ಗುಸುಗುಸು ಪಿಸಪಿಸ ಮಾತುಗಳನ್ನು, ಚರ್ಚೆಗಳನ್ನು ಸ್ಪರ್ಧಿಗಳು ಉಳಿದ ಸ್ಪರ್ಧಿಗಳ ಎದುರಿಗೇ ಆಡಬೇಕಿದೆ. ವಾದ ವಾಗ್ವಾದ ಮಾಡಬೇಕಿದೆ. ಏನಿದು ಟಾಸ್ಕ್‌? ಇದರ ಪರಿಣಾಮಗಳೇನು? ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗೆ ಇದುಹೇಗೆ ಪೂರಕವಾಗಲಿದೆ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News