BBK10: ಸಂಗೀತಾ ಗೆಲ್ಬೇಕು; ಕಾರ್ತೀಕ್ ಗೆಲ್ತಾರೆ-ಸಿರಿ

Bigg Boss Kannada: ಬಿಗ್‌ಬಾಸ್‌ ಮನೆಯ ಸದಸ್ಯರೆಲ್ಲರೂ ಜಿದ್ದಿಗೆ ಬಿದ್ದವರಂತೆ, ಟಾಸ್ಕ್‌, ಅಗ್ರೆಶನ್‌, ಪಾಲಿಟಿಕ್ಸ್‌, ನಾಮಿನೇಷನ್‌ ಎಂದೆಲ್ಲ ಪರಸ್ಪರ ದೂಷಣೆಯಲ್ಲಿ, ಹಗ್ಗಜಗ್ಗಾಟದಲ್ಲಿ ತೊಡಗಿಕೊಂಡಿದ್ದರೆ, ‘ನನ್ನ ದಾರಿಯೇ ಬೇರೆ’ ಎನ್ನುವಂತೆ ಶಾಂತರಾಗಿ, ಮನೆಯವರಿಗೆಲ್ಲ ಹಿರಿಯಕ್ಕನಾಗಿ, ಎಲ್ಲರಿಗೂ ಬುದ್ಧಿ ಹೇಳಿ ಸಮಾಧಾನ ಮಾಡುತ್ತ, ನಾಮಿನೇಷನ್‌ ಮಾಡುವಾಗಲೂ ಅಷ್ಟೇ ಸಂಯಮದಿಂದ ಅಭಿಪ್ರಾಯ ತಿಳಿಸುತ್ತ ಬಂದವರು ಸಿರಿ.   

Written by - Savita M B | Last Updated : Jan 1, 2024, 11:52 AM IST
  • ನಾನು ಸ್ವಲ್ಪ ಜಾಸ್ತಿನೇ ಪಾಸಿಟೀವ್ ಆಗಿ ಯೋಚನೆ ಮಾಡುವವಳು.
  • ಫಿನಾಲೆಗೆ ಇಷ್ಟ ಹತ್ತಿರ ಬಂದ ಮೇಲೆ ಬಿಟ್ಟು ಹೋಗ್ತಿದ್ದೀನಲ್ವಾ ಅಂತ.
  • ಈ ಪ್ರಯಾಣವನ್ನು ಆ ದಿಕ್ಕಿನಿಂದ ನೋಡಿ ಖುಷಿಪಡೋಣ ಅಂದುಕೊಳ್ಳುತ್ತಿದ್ದೇನೆ.
BBK10: ಸಂಗೀತಾ ಗೆಲ್ಬೇಕು; ಕಾರ್ತೀಕ್ ಗೆಲ್ತಾರೆ-ಸಿರಿ title=

BBK10: ‘ಬಿಗ್‌ಬಾಸ್‌ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್‌ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್‌ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿದ್ದಾರೆ ಸಿರಿ. 

ತಮ್ಮ ಸಂಯಮ, ಸಮತೂಕದ ವ್ಯಕ್ತಿತ್ವದಿಂದ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲ ಸ್ಪರ್ಧಿಗಳ ನೆಚ್ಚಿನ ‘ಅಕ್ಕ’ನಾಗಿದ್ದ ಸಿರಿ, ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಪ್ರಯಾಣ ಮುಗಿಸಿದ ತಕ್ಷಣ JioCinemaಗೆ ನೀಡಿದ್ದ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ಅವರು ಈ ಪ್ರಯಾಣದ ಬಗ್ಗೆ ಮನಬಿಚ್ಚಿ  ಮಾತಾಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ: ನಮಸ್ತೆ, ನಾನು ನಿಮ್ಮ ಪ್ರೀತಿಯ ಸಿರಿ. ಬಿಗ್‌ಬಾಸ್‌ ಕನ್ನಡ ಸೀಸನ್‌ 10ನಲ್ಲಿ ನೀವು ನನ್ನನ್ನು ನೋಡಿದ್ದೀರಿ. ಈಗಷ್ಟೇ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದೀನಿ. 

ಇದನ್ನೂ ಓದಿ-ದಳಪತಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌: ವಿಜಯ್‌ 68ನೇ ಚಿತ್ರದ ಪೋಸ್ಟರ್‌ ಔಟ್‌!

ಹಿಂದಿನ ವಾರಗಳಲ್ಲಿ ನಾನು ನಾಮಿನೇಷನ್‌ ಪಟ್ಟಿಯಲ್ಲಿದ್ದಾಗ, ‘ಈ ಸಲ ನಾನು ಹೋಗ್ತೀನಿ’ ಎಂದು ಹೇಳಿಲ್ಲ. ‘ಹೋದ್ರೆ ಇಟ್ಸ್‌ ಓಕೆ’ ಅನ್ನುವ ರೀತಿಯಲ್ಲಿಯೇ ಇದ್ದೆ. ಈ ಸಲ ಹೊರಗೆ ಬಂದೆ. ನನ್ನಂಥ ವ್ಯಕ್ತಿತ್ವದವಳಿಗೆ ಇದೇನೂ ಸಣ್ಣ ಜರ್ನಿ ಅಲ್ಲ. ಎಕ್ಸ್‌ಪೆಕ್ಟೇಷನ್‌ ಇರಲಿಲ್ಲ. ಆಕ್ಸಪ್ಟ್‌ ಮಾಡಿಕೊಂಡಿದ್ದೇನಷ್ಟೆ. 

ಬೇಜಾರು ಇದ್ದೇ ಇದೆ!
ನಾನು ಸ್ವಲ್ಪ ಜಾಸ್ತಿನೇ ಪಾಸಿಟೀವ್ ಆಗಿ ಯೋಚನೆ ಮಾಡುವವಳು. ಹಾಗಾಗಿ ಖಂಡಿತ ಸ್ವಲ್ಪ ಬೇಜಾರು ಇದ್ದೇ ಇಎ. ಫಿನಾಲೆಗೆ ಇಷ್ಟ ಹತ್ತಿರ ಬಂದ ಮೇಲೆ ಬಿಟ್ಟು ಹೋಗ್ತಿದ್ದೀನಲ್ವಾ ಅಂತ. ಆದರೆ ಇಷ್ಟು ವಾರ ಮನೆಯೊಳಗಿದ್ದೆನಲ್ಲ. ಈ ಪ್ರಯಾಣವನ್ನು ಆ ದಿಕ್ಕಿನಿಂದ ನೋಡಿ ಖುಷಿಪಡೋಣ ಅಂದುಕೊಳ್ಳುತ್ತಿದ್ದೇನೆ. 

ಬಿಗ್‌ಬಾಸ್ ಅಂದ್ರೆ ಕಿತ್ತಲಾಡಲೇಬೇಕು, ಎಲ್ಲರೂ ಪ್ರವೋಕ್‌ ಮಾಡ್ತಾರೆ ಎಂದೆಲ್ಲ ನಂಬಿಕೆ ಇದ್ದೇ ಇದೆ. ಆದರೆ ಹಾಗೇನಿಲ್ಲ. ಎಲ್ಲೋ ಒಂದ್ಕಡೆ ನಾನು ನನ್ನ ಕಂಫರ್ಟ್‌ ಝೋನ್‌ನಿಂದ ಹೊರಗೆ ಬರಲು ಸ್ವಲ್ಪ ಟೈಮ್ ತಗೊಂಡೆ. ಆದರೆ ನಾನು ಇರೋದೇ ಹಾಗೆ. 

ತಪ್ಪೆಲ್ಲಾಯ್ತು ಎಂದು ನನಗೆ ಗೊತ್ತಿಲ್ಲ. ನಾನು ನನ್ನತನವನ್ನು ಬಿಟ್ಟುಕೊಡಬಾರದು. ಅದೇ ರೀತಿ ಉತ್ತರವನ್ನೂ ಸರಿಯಾಗಿ ಕೊಡಬೇಕು ಅಂದುಕೊಂಡಿದ್ದೆ. ಅದೇ ರೀತಿ ಇದ್ದೀನಿ ಕೂಡ. ಹಾಗಾಗಿ ಆ ಸಿರಿ ಜನರಿಗೆ ಇಷ್ಟವಾಗಿದ್ದರೂ ಪ್ರತಿವಾರ ನಾಮಿನೇಟ್ ಆದ್ರೂ ಸೇವ್ ಆಗ್ತಾ ಬಂದಿದ್ದೀನಿ. ಆ ಸಿರಿ ಕೂಡ ಜನರಿಗೆ ಇಷ್ಟವಾಗಿದಾಳೆ.
 
ಎಲ್ಲರೂ ನನಗೆ ಸೇಫ್‌ ಜೋನಲ್ಲಿದ್ದಾರೆ ಎನ್ನುತ್ತಿದ್ದರು. ಆದರೆ ಅವರು ಸೇಫ್‌ ಜೋನಲ್ಲಿದ್ದು ನನಗೆ ಹೇಳ್ತಿದ್ರು ಅನಿಸತ್ತೆ. ನಾನು ನನ್ನ ಅಭಿಪ್ರಾಯ ಹೇಳುವಲ್ಲಿ ಯಾವತ್ತೂ ಹಿಂಜರಿದಿಲ್ಲ. ನಾನೂ ಪ್ರತಿವಾರ ನಾಮಿನೇಟ್ ಮಾಡ್ತಿದ್ದೆ. ಹಾಗಾಗಿ ಈ ಸೇಫ್ ಅನ್ನೋ ಮಾತನ್ನು ನಾನು ಒಪ್ಪಿಕೊಳ್ಳುವುದೇ ಇಲ್ಲ. 

ಹೌದು, ನಾನು ಡಿಪ್ಲೋಮೆಟಿಕ್!
ನಾನು ಡಿಪ್ಲೋಮೆಟಿಕ್ ಅಂದ್ರೆ ಒಪ್ಕೋತೀನಿ. ಯಾಕಂದರೆ ನಾನು ಇರೋದೇ ಹಾಗೆ. ಈವತ್ತು ನಾನು ಹೊರಗೆ ಬಂದಾಗ, ನನಗೋಸ್ಕರ ಮನೆಯೊಳಗೆ ಇಬ್ಬರು ಮೂವರು ಕಣ್ಣೀರು ಹಾಕ್ತಿದ್ದಾರೆ ಅಂದರೆ ಅರ್ಥ ಮಾಡ್ಕೊಳ್ಳಿ. ಹಾಗೆಯೇ ಹೊರಗೆ ನನ್ನ ಅಭಿಮಾನಿಗಳಿರಬಹುದು. ನನಗೆ ಓಟ್ ಹಾಕಿರುವವರು ಇರಬಹುದು. ಅವರ ಮನಸ್ಸನ್ನು ನಾನು ಗೆದ್ದಿದೀನಿ. 

ಬಿಗ್‌ಬಾಸ್ ಮನೆಯೊಳಗೆ ಎಲ್ಲರೂ ನನ್ನನ್ನು ಡಿಪ್ಲೋಮೆಟಿಕ್ ಅಂದಿರಬಹುದು, ಸೇಫ್‌ ಝೋನ್ ಅಂದಿರಬಹುದು. ಆದರೆ ನಾನು ಮನೆಯಿಂದ ಹೊರಗೆ ಬರುವಾಗ ಹಾಗೆ ಹೇಳಿದವರು ಕಣ್ಣಲ್ಲೂ ನೀರು ನೋಡ್ದೆ. ಹಾಗಾಗಿ ಅವರ ಮನಸ್ಸನ್ನೂ ನಾನು ಗೆದ್ದಿದೀನಿ ಅಂದ್ಕೊಂಡಿದೀನಿ. ಯಾರ ಮನಸ್ಸನ್ನು ನೋವಾದಾಗ, ಸಮಾಧಾನ ಮಾಡಿದೀನಲ್ಲಾ, ಅವರೆಲ್ಲರೂ ನನಗೆ ಅಕ್ಕನ ಸ್ಥಾನ ಕೊಟ್ಟಿದಾರಲ್ಲಾ. ಅದರ ಬಗ್ಗೆ ಖುಷಿಯಿದೆ.

ಕ್ಯಾಪ್ಟನ್ಸಿ ಟಾಸ್ಕ್‌ ಕನಸು
ಕ್ಯಾಪ್ಟನ್ಸಿ ಟಾಸ್ಕ್‌ಗೆ ನಾನು ಬಹಳ ಹತ್ತಿರ ಹೋಗಿದ್ದೆ. ಎರಡು ಸಲ ಹೋಗಿದ್ದೆ. ಆದರೆ ಕ್ಯಾಪ್ಟನ್ ಆಗಲು ಆಗಲಿಲ್ಲ. ಕ್ಯಾಪ್ಟನ್ ಬೆಡ್ ಮೇಲೆ ಮಲಗುವ ಅವಕಾಶ ಸಿಗಲಿಲ್ಲ. ಆದರೆ ಕ್ಯಾಪ್ಟನ್‌ಗೆ ಸಿಗುವ ಸೌಲಭ್ಯಗಳನ್ನೆಲ್ಲ ಕಳೆದ ವಾರಗಳಲ್ಲಿ ನಾನು ತೆಗೆದುಕೊಂಡಿದೀನಿ. ಹಾಗಾಗಿ ಸುದೀಪ್ ಅವರೇ ನನಗೆ ಮನೆಯನ್ನು ನಿಭಾಯಿಸುವ ಜವಾಬ್ದಾರಿ ಕೊಟ್ರು. ಇಮ್ಯೂನಿಟಿ ಸಿಗುತ್ತದೆ ಕ್ಯಾಪ್ಟನ್ ಆದವರಿಗೆ. 

ವೈಲ್ಡ್ ಕಾರ್ಡ್‌ ಎಂಟ್ರಿ ಆದವರು ಆ ವಾರ ನನ್ನನ್ನು ಸೇವ್ ಮಾಡಿ ಆ ಸೌಲಭ್ಯವೂ ಸಿಗುವಂತೆ ಮಾಡಿದರು. ಮನೆಯವರು ಫೋಟೊ ಬರುತ್ತದೆ ಕ್ಯಾಪ್ಟನ್ ಆದವರಿಗೆ. ನನಗೆ ಮನೆಯಿಂದ ಪತ್ರ ಬಂದಾಗಲೇ ನನ್ನದು ನನ್ನ ತಂದೆಯವರದ್ದು ಫೋಟೊ ಬಂದಿತ್ತು. ಹಾಗಾಗಿ, ಕ್ಯಾಪ್ಟನ್ ಆಗಿ ಸಿಗುವ ಸೌಲಭ್ಯಗಳಲ್ಲಿ ಬಹುತೇಕ ನನಗೆ ಸಿಕ್ಕಿದೆ. ಆದರೆ ಕ್ಯಾಪ್ಟನ್ ಕೋಣೆ ಎಂಟರ್ ಆಗಿಲ್ಲ ನಾನು.

ಕಾರ್ತಿಕ್ ಜೆನ್ಯೂನ್
ಈ ಸೀಸನ್‌ನಲ್ಲಿ ಅತ್ಯಂತ ಜೆನ್ಯೂನ್‌ ಅನಿಸುವುದು ಕಾರ್ತಿಕ್‌. ತುಂಬ ಕಷ್ಟಪಟ್ಟು, ತುಂಬ ಇಷ್ಟಪಟ್ಟು ಆಟ ಆಡ್ತಾ ಇದ್ದಾರೆ. ಫೇಕ್‌ ಅಂತ ನಾನು ಹೇಳೋದಿಲ್ಲ. ಆದರೆ ಆಟಕ್ಕೆ ಏನು ಬೇಕೋ, ಹೇಗೆ ಬೇಕೋ ಹಾಗೆ ತಿರುಗೋದು ಅಂದ್ರೆ ಅದು ತುಕಾಲಿ ಸಂತೋಷ್‌. 

ಟಾಪ್‌ 5ನಲ್ಲಿ ಕಾರ್ತೀಕ್, ವಿನಯ್‌, ವಿನಯ್, ತುಕಾಲಿ ಸಂತೋಷ್ ಮತ್ತು ತನಿಷಾ ಇರಬೇಕು. ಹುಡುಗಿ ವಿನ್ನರ್ ಆದ್ರೆ ನನಗೆ ಖುಷಿಯಾಗುತ್ತದೆ. ಹಾಗೆ ನೋಡಿದ್ರೆ ಸಂಗೀತಾ ಗೆಲ್ಲಬೋದು ಅನಿಸುತ್ತದೆ. ಆದರೆ ಈಗಿನ ಸನ್ನಿವೇಶ ನೋಡಿದ್ರೆ ಕಾರ್ತೀಕ್ ಗೆಲ್ಲಬಹುದು ಅನ್ನಿಸತ್ತೆ. ಮುಂದಿನ ವಾರ ಡೇಂಜರ್‍ ಝೋನ್‌ನಲ್ಲಿ ಮೈಕಲ್ ಇರ್ತಾರೆ ಅಂದ್ಕೊತೀನಿ.

ಜಿಯೊಸಿನಿಮಾ ಫನ್‌ ಫ್ರೈಡೆ
ಜಿಯೊ ಸಿನಿಮಾ ಫನ್ ಫ್ರೈಡೇ ಅಂತ ಬಂದಾಗ ನಾವೆಲ್ಲರೂ ಫನ್ ಆಗಿಯೇ ತಗೋತಿದ್ವಿ. ನಿನ್ನೆ ಕೂಡ ಬ್ರೆಡ್ ತಿನ್ನುವ ಫನ್ ಟಾಸ್ಕ್ ಇತ್ತು. ನಾನು ಸುಮಾರು ವಾರ ಗೆದ್ದಿದೀನಿ. ಖುಷಿಯಾಗಿರುತ್ತದೆ. 

ಇದನ್ನೂ ಓದಿ-ಕಾಟೇರಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯ ಮೆಚ್ಚುಗೆ! ದರ್ಶನ್‌ ಅಭಿನಯಕ್ಕೆ ಬಿಜೆಪಿ ನಾಯಕರು ಹೇಳಿದ್ದೇನು?

ಸುಮಾರು ವರ್ಷಗಳ ಹಿಂದೆ ‘ಚಂದು’ ಸಿನಿಮಾದಲ್ಲಿ ಸುದೀಪ್ ಅವರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದೆ. ಬಿಗ್‌ಬಾಸ್ ಅಂತ ಬಂದಾಗ, ನಮಗೆ ಒಬ್ಬ ವ್ಯಕ್ತಿ ಪ್ರತಿವಾರ ಒಬ್ಬ ವ್ಯಕ್ತಿ ಸಿಕ್ಕು, ನಮ್ಮ ಕೊರತೆಗಳನ್ನು ಹೇಳಿ ಮುಂದೆ ಹೋಗಲು ಪ್ರೋತ್ಸಾಹಿಸುತ್ತಾರೆ ಅಂದ್ರೆ ಅದು ಸುದೀಪ್‌. ಆಗ ಒಬ್ಬ ಸ್ಟಾರ್‍ನ ನೋಡ್ತಿದ್ದೆ. ಈಗ ನಾನೂ ಸುದೀಪ್ ಅವರ ಫ್ಯಾಮಿಲಿ ಮೇಂಬರ್ ಅನ್ನೋ ಫೀಲ್ ಬಂದಿದೆ. 

ಮಿಸ್‌ ಮಾಡ್ಕೋಳ್ಳೋದು…
ಬೆಳಗಿನ ಹೊತ್ತಿನ ಹಾಡನ್ನು ಖಂಡಿತ ಮಿಸ್ ಮಾಡ್ಕೋತೀನಿ. ಮತ್ತು ಮೈಕ್ ಅನ್ನೂ ಮಿಸ್ ಮಾಡ್ಕೋತೀನಿ. ನನ್ನ ಬಿಗ್‌ಬಾಸ್‌ ಪ್ರಯಾಣ ತುಂಬ ಚೆನ್ನಾಗಿತ್ತು. ಸಾಕಷ್ಟು ಏರಿಳಿತಗಳು ಇದ್ದರೂ ಇಷ್ಟು ದೂರ ಬಂದಿರುವುದು ಖುಷಿಕೊಟ್ಟಿದೆ. ಬದುಕಿನಲ್ಲಿ ಒಮ್ಮೆ ಮಾತ್ರ ಇಂಥ ಅನುಭವ ಸಿಗಲು ಸಾಧ್ಯ. ಅದು ನನಗೆ ಸಿಕ್ಕಿದೆ. ಅದಕ್ಕೆ ಖುಷಿಯಿದೆ. ಪ್ರತಿ ಟಾಸ್ಕ್‌, ಸೆಫ್ಟಿ, ಚಟುವಟಿಕೆಗಳು, ತಂತ್ರಜ್ಞರು ಎಲ್ಲರೂ ಎಷ್ಟು ಶ್ರಮಪಡುತ್ತಿದ್ದಾರೆ…. ಅವರೆಲ್ಲರಿಗೂ ನಾನು ಥ್ಯಾಂಕ್ಸ್ ಹೇಳ್ತೀನಿ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News