BiggBoss: ಶೇರ್ ಕೊಡೋಕೇ ರೆಡಿ ಇಲ್ಲ: ಕ್ಯಾಪ್ಟನ್ ಮೇಲೆ ಮೈಕಲ್ ಅಸಮಾಧಾನ

BBK 10: ಇಂದು ಎರಡೂ ತಂಡದ ಕ್ಯಾಪ್ಟನ್ ಗಳನ್ನು ಕೂಡಿಸಿಕೊಂಡು, ಅವರ ತಂಡದ ಸದಸ್ಯರಿಂದಲೇ ಅಭಿಪ್ರಾಯ ಹಂಚಿಕೊಳ್ಳಲು ಬಿಗ್ ಬಾಸ್ ಸೂಚಿಸಿದ್ದಾರೆ. 

Written by - Yashaswini V | Last Updated : Dec 21, 2023, 10:45 AM IST
  • ಯಾರಿಗೆ ಎಷ್ಟು ಗಣ ಕೊಡಲಾಗಿದೆ
  • ಟಾಸ್ಕ್ ಗಳಲ್ಲಿ ಗೆದ್ದಾಗ ಎಷ್ಟು ಶೇರ್ ಕೊಡಲಾಗುತ್ತಿದೆ
  • ಈ ಕುರಿತು ಎರಡೂ ಗುಂಪುಗಳ ಸದಸ್ಯರಲ್ಲಿ ಅಸಮಾಧಾನ
BiggBoss: ಶೇರ್ ಕೊಡೋಕೇ ರೆಡಿ ಇಲ್ಲ: ಕ್ಯಾಪ್ಟನ್ ಮೇಲೆ ಮೈಕಲ್ ಅಸಮಾಧಾನ title=

BBK 10: ಸಂಗೀತಾ ಮತ್ತು ತನಿಷಾ ಎರಡು ಗುಂಪುಗಳಲ್ಲಿ ಮನೆಯ ಸದಸ್ಯರೆಲ್ಲ ವಿಂಗಡಣೆಗೊಂಡು ಕ್ಯಾಪ್ಟನ್ಸಿಗಾಗಿ ಸ್ಪರ್ಧಿಸುತ್ತಿದ್ದಾರೆ. ಈ ಸಲ ಬಿಗ್ ಬಾಸ್ ನಾಯಕಿಯರಿಗೆ ತಮ್ಮ ಮನೆಯ ಒಳ್ಳೆಯ ಸದಸ್ಯರ‌ನ್ನು ಹಣ ಕೊಟ್ಟು ಖರೀದಿಸುವ ಅವಕಾಶ ನಡೆದಿತ್ತು. 

ಯಾರಿಗೆ ಎಷ್ಟು ಗಣ ಕೊಡಲಾಗಿದೆ, ಟಾಸ್ಕ್ ಗಳಲ್ಲಿ ಗೆದ್ದಾಗ ಎಷ್ಟು ಶೇರ್ ಕೊಡಲಾಗುತ್ತಿದೆ ಎಂಬುದರ ಕುರಿತು ಎರಡೂ ಗುಂಪುಗಳ ಸದಸ್ಯರಲ್ಲಿ ಅಸಮಾಧಾನಗಳಿವೆ. ಈ ಅಸಮಾಧಾನ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸ್ಪಷ್ಟವಾಗಿ ಕಾಣಿಸಿದೆ.

ಇದನ್ನೂ ಓದಿ- BBK 10: ಬಿಗ್‌ಬಾಸ್‌ನಲ್ಲಿ ಪಾಸಿಟೀವ್-‌ನೆಗೆಟೀವ್‌ ಎನರ್ಜಿ ಬಗ್ಗೆ ಪಾಠ: ವೀಕ್ಷಕರಿಂದ ಸಂಗೀತಾಗೆ ಬೆಸ್ಟ್‌ ಟೀಚರ್‌ ಅರ್ವಾಡ್!

ಇಂದು ಎರಡೂ ತಂಡದ ಕ್ಯಾಪ್ಟನ್ ಗಳನ್ನು ಕೂಡಿಸಿಕೊಂಡು, ಅವರ ತಂಡದ ಸದಸ್ಯರಿಂದಲೇ ಅಭಿಪ್ರಾಯ ಹಂಚಿಕೊಳ್ಳಲು ಬಿಗ್ ಬಾಸ್ ಸೂಚಿಸಿದ್ದಾರೆ. ಈ ಸಮಯದಲ್ಲಿ ಮೈಕಲ್ ನೇರವಾಗಿಯೇ 'ಸಂಗೀತಾ ಟಾಸ್ಕ್ ಗೆದ್ದಾಗ ಸದಸ್ಯರ ಜೊತೆಗೆ ಬಂದ ಹಣದಲ್ಲಿ ಶೇರ್ ಸರಿಯಾಗಿ ಕೊಡುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಂಗೀತಾ ಕೂಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರ ಮಧ್ಯ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ- ಹಳ್ಳಿಕಾರ್‌ ಒಡೆಯ ವರ್ತೂರ್‌ ಸಂತೋಷ್‌ ನಿಜವಾದ ವಿದ್ಯಾಭ್ಯಾಸ ಎಷ್ಟಾಗಿದೆ ಗೊತ್ತೇ!

ತಂಡದೊಳಗೆ ಕಾಣಿಸಿಕೊಂಡಿರುವ ಈ ಬಿರುಕು ಗೆಲುವಿಗೆ ಅಡ್ಡಗಾಲಾಗಬಹುದಾ? ಉಳಿದ ಸದಸ್ಯರೂ ತಮ್ಮ ತಂಡದ ನಾಯಕರ ವಿರುದ್ಧ ಮಾತಾಡಬಹುದಾ? ಈ ಕುತೂಹಲ ತಣಿಯಲು ಬಿಗ್ ಬಾಸ್ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News