Bigg Boss Kannada Drone Prathap: ಬಿಗ್‌ಬಾಸ್ ಡ್ರೋನ್ ಪ್ರತಾಪ್‌ನ ಮತ್ತೊಂದು ಮಹಾನ್ ದೋಖಾ ಬಯಲು..! 

Cheating claims against Drone Prathap: ಡ್ರೋನ್‌ ಪ್ರತಾಪ್‌ ವಿರುದ್ಧ ಪುಣೆಯ ಕ್ಯಾಸ್ಪರ್‌ ಡ್ರೊನೊಟಿಕ್ಸ್‌ ಸಂಸ್ಥೆಯ ಸಿಇಓ ಸಾರಂಗ್‌ ಮಾನೆ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಡ್ರೋನ್ ಪ್ರತಾಪ್‌ಗೆ 8 ಡ್ರೋನ್​ಗಳನ್ನು ಒದಗಿಸುವಂತೆ ಒಪ್ಪಂದ ಮಾಡಿ ಅಡ್ವಾನ್ಸ್ ನೀಡಿದ್ದರಂತೆ. ಆದರೆ ಕೇವಲ 4 ಡ್ರೋನ್​ಗಳನ್ನಷ್ಟೆ ನೀಡಿದ ಪ್ರತಾಪ್ ಬಾಕಿ 4 ಡ್ರೋನ್‌ಗಳನ್ನು ನೀಡಿಲ್ಲ. ಇದಲ್ಲದೇ ಈಗಾಗಲೇ ಆತ ನೀಡಿರುವ 4 ಡ್ರೋನ್‌ಗಳು ಕಳಪೆ ಗುಣಮಟ್ಟ ಹೊಂದಿವೆ. ಯಾವುದೂ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಸಾರಂಗ್‌ ಆರೋಪ ಮಾಡಿದ್ದಾರೆ. 

Written by - Puttaraj K Alur | Last Updated : Jan 25, 2024, 01:15 PM IST
  • ಬಿಗ್‌ಬಾಸ್ ಡ್ರೋನ್ ಪ್ರತಾಪ್‌ನ‌ ಮತ್ತೊಂದು ಮಹಾನ್ ದೋಖಾ ಬಟಾಬಯಲು
  • ಪುಣೆ ಮೂಲದ ಬ್ಯುಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಮಹಾಮೋಸ
  • ಕಳಪೆ ದರ್ಜೆಯ ಡ್ರೋನ್‌ ವಿತರಿಸಿ ೮೪ ಲಕ್ಷ ರೂ. ನಷ್ಟ ಮಾಡಿರುವ ಆರೋಪ
Bigg Boss Kannada Drone Prathap: ಬಿಗ್‌ಬಾಸ್ ಡ್ರೋನ್ ಪ್ರತಾಪ್‌ನ ಮತ್ತೊಂದು ಮಹಾನ್ ದೋಖಾ ಬಯಲು..!  title=
ಡ್ರೋನ್ ಪ್ರತಾಪ್‌ನ ಮತ್ತೊಂದು ದೋಖಾ!

ಬೆಂಗಳೂರು: ಬಿಗ್‌ಬಾಸ್ ಡ್ರೋನ್ ಪ್ರತಾಪ್‌ನ ಮತ್ತೊಂದು ಮಹಾನ್ ದೋಖಾ ಬಟಾಬಯಲಾಗಿದೆ. ವಿವಿಧ ರೀತಿಯ ಡ್ರೋನ್‌ಗಳನ್ನು ಕಂಡುಹಿಡಿದಿರುವುದಾಗಿ ಹೇಳಿ ದೇಶ-ವಿದೇಶಗಳಿಂದ ಭಾರೀ ಗೌರವ-ಮನ್ನಣೆಗೆ ಪಾತ್ರನಾಗಿದ್ದ ಪ್ರತಾಪ್‌ ಹಸಿ ಹಸಿ ಸುಳ್ಳುಗಳನ್ನು ಹೇಳಿ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದ. ಇದಾದ ಬಳಿಕ ನಾನು ನಿಜವನ್ನೇ ಹೇಳಿದ್ದೇನೆ, ನಾನು ವಿವಿಧ ರೀತಿಯ ಡ್ರೋನ್‌ಗಳನ್ನು ತಯಾರಿಸಿ ಪ್ರೂವ್‌ ಮಾಡುತ್ತೇನೆ ಅಂತಾ ಹೇಳಿದ್ದ ಪ್ರತಾಪ್‌,  ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ʼ ಎಂಬ ಡ್ರೋನ್‌ ಸಂಸ್ಥೆಯನ್ನು ಪ್ರಾರಂಭಿಸಿದ್ದ. ರೈತರಿಗೆ ಅನುಕೂಲಕರವಾಗುವಂತೆ ಡ್ರೋನ್‌ಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವಾಗಿ ಹೇಳಿ ಹಲವಾರು ವಿಡಿಯೋಗಳನ್ನು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ.  

ಇದೀಗ ಡ್ರೋನ್‌ ಪ್ರತಾಪ್‌ ವಿರುದ್ಧ ಪುಣೆಯ ಕ್ಯಾಸ್ಪರ್‌ ಡ್ರೊನೊಟಿಕ್ಸ್‌ ಸಂಸ್ಥೆಯ ಸಿಇಓ ಸಾರಂಗ್‌ ಮಾನೆ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಡ್ರೋನ್ ಪ್ರತಾಪ್‌ಗೆ 8 ಡ್ರೋನ್​ಗಳನ್ನು ಒದಗಿಸುವಂತೆ ಒಪ್ಪಂದ ಮಾಡಿ ಅಡ್ವಾನ್ಸ್ ನೀಡಿದ್ದರಂತೆ. ಆದರೆ ಕೇವಲ 4 ಡ್ರೋನ್​ಗಳನ್ನಷ್ಟೆ ನೀಡಿದ ಪ್ರತಾಪ್ ಬಾಕಿ 4 ಡ್ರೋನ್‌ಗಳನ್ನು ನೀಡಿಲ್ಲ. ಇದಲ್ಲದೇ ಈಗಾಗಲೇ ಆತ ನೀಡಿರುವ 4 ಡ್ರೋನ್‌ಗಳು ಕಳಪೆ ಗುಣಮಟ್ಟ ಹೊಂದಿವೆ. ಯಾವುದೂ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಸಾರಂಗ್‌ ಆರೋಪ ಮಾಡಿದ್ದಾರೆ. 

ಇದನ್ನೂ ಓದಿ:  ವೇಟ್‌ಲಾಸ್‌ ಮಾಡ್ಕೊಂಡ್ರಾ ಮೊಹಕ ತಾರೆ? ರಮ್ಯ ವರ್ಕೌಟ್ ವಿಡಿಯೋ ವೈರಲ್!

 
 
 
 

 
 
 
 
 
 
 
 
 
 
 

A post shared by Prathap N M (@droneprathap)

ತಮಗೆ ಆಗಿರುವ ವಂಚನೆ ಬಗ್ಗೆ ಮಾತನಾಡಿರುವ ಸಾರಂಗ್ ಮಾನೆ, ಕಳೆದ ವರ್ಷ ನಾಸಿಕ್ ಡ್ರೋನ್ ಎಕ್ಸಿಬಿಷನ್​ನಲ್ಲಿ ಡ್ರೋನ್​ ಪ್ರತಾಪ್‌ನ ಡ್ರೋನ್​ಗಳನ್ನು ನೋಡಿದ್ದೆ. ಬಳಿಕ ಧುಲಿಯಾನಲ್ಲಿ ಪ್ರತಾಪ್ ಸಿಎ ಸಾಗರ್ ಮೂಲಕ ಅವರ ಕಚೇರಿಗೆ ಹೋಗಿ ಭೇಟಿ ಮಾಡಿದೆ. ಒಟ್ಟು 8 ಡ್ರೋನ್ ನೀಡುವಂತೆ ಮಾತುಕತೆ ನಡೆಸಿ 35.75 ಲಕ್ಷ ರೂ. ಹಣ ಪಾವತಿಸಿದ್ದೇವು. ನಾವು ರೈತರಿಂದ ಅಡ್ವಾನ್ಸ್ ಹಾಗೂ ಬ್ಯಾಂಕ್​ನಿಂದ ಪಡೆದ ಸಾಲ ಸೇರಿ ಆತನಿಗೆ ಹಣ ನೀಡಲಾಗಿತ್ತು. ಮೊದಲ 2 ಡ್ರೋನ್​ಗಳನ್ನು ನೀಡಲು ಪ್ರತಾಪ್ 2 ತಿಂಗಳು ತಡ ಮಾಡಿದ್ದ. ಇದಾದ ಬಳಿಕ ೪ ತಿಂಗಳ ಬಳಿಕ ಮತ್ತೆ 2 ಡ್ರೋನ್​ಗಳನ್ನು ನೀಡಿದ್ದ. ನಂತರ ಆತ ನಮಗೆ ಯಾವುದೇ ಡ್ರೋನ್‌ಗಳನ್ನು ನೀಡಲಿಲ್ಲ. ಆತ ನಮಗೆ ಇನ್ನೂ 4 ಡ್ರೋನ್‌ಗಳನ್ನು ನೀಡಬೇಕಿದೆ ಅಂತಾ ಹೇಳಿದ್ದಾರೆ.

ಪ್ರತಾಪ್ ನಮಗೆ ನೀಡಿರುವ ಡ್ರೋನ್​ಗಳು ಕಳಪೆಯಾಗಿವೆ. ಕೆಲವು ಡ್ರೋನ್​ಗಳ ಬ್ಯಾಟರಿ ಸರಿಯಿಲ್ಲ. ಒಂದು ಡ್ರೋನ್‌ನಲ್ಲಿ ತಪ್ಪು ಜಿಪಿಎಸ್ ತೋರಿಸುತ್ತಿದೆ. ಡ್ರೋನ್​ಗಳ ಬಿಡಿ ಭಾಗಗಳನ್ನು ವಿದೇಶಗಳಿಂದ ತರಿಸುವ ಪ್ರತಾಪ್‌, ಬಳಿಕ ಅವುಗಳನ್ನು ಜೋಡಿಸಿ ಮಾರಾಟ ಮಾಡುತ್ತಾನೆ. ಈ ಹಿಂದೆ ಹಣ ಕೇಳಿದಾಗ ಸ್ವಲ್ಪ ಸಮಯ ಕಾಯಲು ಹೇಳಿದ್ದ. ಆತನ ಸಹಾಯಕ ರವಿಯಿಂದ ಕಾರು ಮಾರಾಟ ಮಾಡಿರುವುದಾಗಿ ಸುಳ್ಳು ಹೇಳಿಸಿದ್ದ. ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಆತ ನಮಗೆ ಡ್ರೋನ್ ಕೊಡುತ್ತಾನೆಂಬ ನಂಬಿಕೆ ಇಲ್ಲ. ಆತನ ಬಳಿ ತಂತ್ರಜ್ಞಾನದ ಯಾವುದೇ ರೀತಿಯ ಮಾಹಿತಿ ಇಲ್ಲ. ಆತನ ಬಳಿ ಇರುವುದೇ ೪ ಜನ ಸಿಬ್ಬಂದಿ. ಈ ಪೈಕಿ ಒಬ್ಬಾತ ಡ್ರೋನ್‌ ಪ್ರತಾಪ್‌ ಫೋಟೋ ತೆಗೆಯುತ್ತಾನೆ. ಇನ್ನೊಬ್ಬ ಪ್ರತಾಪ್‌ನ ಮ್ಯಾನೇಜರ್, ಒಬ್ಬ ವಾಚ್​ಮ್ಯಾನ್ ಇದ್ದಾನೆ ಅಷ್ಟೇ.

ಇದನ್ನೂ ಓದಿ: ದರ್ಶನ್‌ ಸಂಸಾರದಲ್ಲಿ ಮತ್ತೆ ಬಿರುಕಿನ ಬಿರುಗಾಳಿ..?

ಕೇವಲ ಈ ೪ ಜನರನ್ನು ಇಟ್ಟುಕೊಂಡು ಆತ ನಮಗೆ ಡ್ರೋನ್‌ ಮಾಡಿಕೊಡುತ್ತೇನೆಂಬ ನಂಬಿಕೆ ಇಲ್ಲ. ಇದೀಗ ನಾವು ಬಿಗ್‌ಬಾಸ್‌ ಮನೆಯಿಂದ ಆತ ಹೊರಗೆ ಬರುವವರೆಗೂ ಕಾಯುತ್ತೇವೆ. ಬಂದ ಬಳಿಕ ಆತನೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸರಿಯಾದ ಸಮಯಕ್ಕೆ ನಮಗೆ ಡ್ರೋನ್‌ ನೀಡದ ಕಾರಣ ೮೩ ಲಕ್ಷ ರೂ. ನಷ್ಟವಾಗಿದೆ. ಇದಿಷ್ಟೂ ಹಣವನ್ನು ಡ್ರೋನ್‌ ಪ್ರತಾಪ್‌ ನಮಗೆ ನೀಡಬೇಕು. ಇಲ್ಲವಾದರೆ ನಾವು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು ಸಾರಂಗ್‌ ಮಾನೆ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News