BBK10: ಕಾರ್ತಿಕ್‌ - ತನಿಷಾ ಜೊತೆ ಮುನಿಸು.. ವಿನಯ್‌ ಟೀಮ್‌ ಸೇರಿದ್ರಾ ಸಂಗೀತಾ!

Sangeetha Sringeri: ಇದೀಗ ಸಡನ್‌ ಆಗಿ ಸಂಗೀತಾ ವಿನಯ್‌ ಜೊತೆ ಸೇರಿಕೊಂಡಿದ್ದಾರೆ. ತನಿಷಾ ಮತ್ತು ಕಾರ್ತಿಕ್‌ ರಿಂದ ಡಿಸ್ಟನ್ಸ್‌ ಕಾಯ್ದುಕೊಳ್ಳುತ್ತಿರುವ ಸಂಗೀತಾ ವಿನಯ್‌ ಜೊತೆ ಆತ್ಮೀಯರಾಗುತ್ತಿದ್ದಾರೆ. 

Written by - Chetana Devarmani | Last Updated : Nov 21, 2023, 09:05 AM IST
  • ಬಿಗ್ ಬಾಸ್ ಕನ್ನಡ ಸೀಸನ್ 10
  • ಕಾರ್ತಿಕ್‌ - ತನಿಷಾ ಜೊತೆ ಸಂಗೀತಾ ಮುನಿಸು
  • ವಿನಯ್‌ ಟೀಮ್‌ ಜೊತೆ ಆತ್ಮೀಯರಾದ ಸಂಗೀತಾ
BBK10: ಕಾರ್ತಿಕ್‌ - ತನಿಷಾ ಜೊತೆ ಮುನಿಸು.. ವಿನಯ್‌ ಟೀಮ್‌ ಸೇರಿದ್ರಾ ಸಂಗೀತಾ!  title=
Sangeetha Sringeri

Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾದ ದಿನದಿಂದಲೂ ಕಾರ್ತಿಕ್, ಸಂಗೀತಾ, ತನಿಷಾ ಆತ್ಮೀಯವಾಗಿದ್ದವರು. ಅಸಮರ್ಥರಾಗಿ ಒಂದೇ ಟೀಮ್‌ನಲ್ಲಿದ್ದ ದಿನದಿಂದ ಇವರ ನಡುವೆ ಒಂದು ಅನ್ಯೋನ್ಯತೆ ಬೆಳೆದಿತ್ತು. ಯಾರು ಏನೇ ಹೇಳಲಿ ಒಬ್ಬರಿಗೊಬ್ಬರು ಬಿಟ್ಟುಕೊಡುವ ಮಾತೇ ಇರಲಿಲ್ಲ. ಆದರೆ ಇದೀಗ ಸಡನ್‌ ಆಗಿ ಸಂಗೀತಾ ವಿನಯ್‌ ಜೊತೆ ಸೇರಿಕೊಂಡಿದ್ದಾರೆ. ತನಿಷಾ ಮತ್ತು ಕಾರ್ತಿಕ್‌ ರಿಂದ ಡಿಸ್ಟನ್ಸ್‌ ಕಾಯ್ದುಕೊಳ್ಳುತ್ತಿರುವ ಸಂಗೀತಾ ವಿನಯ್‌ ಜೊತೆ ಆತ್ಮೀಯರಾಗುತ್ತಿದ್ದಾರೆ. 

ಇದನ್ನೂ ಓದಿ: ಆ ಘಟನೆಯೇ ಸಿರಿ ಮದುವೆ ರಿಜೆಕ್ಟ್‌ ಮಾಡಲು ಕಾರಣ.. ಸತ್ಯ ಬಿಚ್ಚಿಟ್ಟ ಸಹೋದರಿ! 

ಈ ವಾರ ಆರಂಭದಲ್ಲಿಯೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ಹೊತ್ತಲ್ಲಿ ಬಿಗ್‌ ಬಾಸ್‌ ಮನೆಗೆ ಬ್ರಹ್ಮಾಂಡ ಗುರೂಜಿ ಎಂಟ್ರಿ ಕೊಟ್ಟಿದ್ದಾರೆ. ಮಡಕೆ ಒಡೆಯುವ ಮೂಲಕ ನಾಮಿನೇಷನ್ ಮಾಡುವ ಟಾಸ್ಕ್‌ ನೀಡಲಾಗಿದೆ. ಮನೆಯ ಕ್ಯಾಪ್ಟನ್ ಆದ ಕಾರ್ತಿಕ್ ಹಾಗೂ ನೇರವಾಗಿ ನಾಮಿನೇಟ್ ಆದ ನೀತೂ ಬಿಟ್ಟು ಉಳಿದವರನ್ನು ನಾಮಿನೇಟ್‌ ಮಾಡಬಹುದಾಗಿತ್ತು. 

ಅದರಲ್ಲಿ ಇಬ್ಬರನ್ನು ಮೊದಲೇ ಸೇವ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಆದರೆ ಕಾರ್ತಿಕ್‌ ಸಂಗೀತಾ ಬದಲು ಮೈಕೆಲ್‌ನ ಸೇವ್ ಮಾಡಿದರು. ಇದು ಸಂಗೀತಾ ಅಸಮಾಧಾನಕ್ಕೆ ಕಾರಣವಾಯ್ತು. ಮೊದಲೆ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

 

 

ಇದಾದ ಬಳಿಕ ಸಂಗೀತಾ ಇಡೀ ದಿನ ವಿನಯ್ ತಂಡದಲ್ಲಿಯೇ ಕಾಣಿಸಿಕೊಂಡರು. ಅದರಲ್ಲೂ ನಮ್ರತಾ ಆತ್ಮೀಯರಾಗಿದ್ದಾರೆ. ಇದು ತನಿಷಾ ಮತ್ತು ಸಂಗೀತಾ ನಡುವಿನ ಬಿರುಕು ದೊಡ್ಡದಾಗುವುದಕ್ಕೆ ಕಾರಣವಾಗಿದೆ. ನಾಮಿನೇಷನ್ ಮಾಡುವಾಗಲೂ ಅಷ್ಟೇ ಸಂಗೀತಾ ಹೆಸರನ್ನು ತನಿಷಾ ತೆಗೆದುಕೊಂಡಿದ್ದಾರೆ. ಅಡುಗೆ ಮನೆಯಲ್ಲೂ ತನಿಷಾ ಹಾಗೂ ಕಾರ್ತಿಕ್ ಅಷ್ಟೇ ಜೊತೆಯಾಗಿದ್ದಾರೆ. ಅತ್ತ ಸಂಗೀತಾ ವಿನಯ್‌ ಟೀಮ್‌ ಜೊತೆ ಸೇರಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್ ಮನೆ ಮುಂದೆ ರೈತನ ಧರಣಿ.. ಬಿಗ್​ ಬಾಸ್‌ಗೆ ಕಳಿಸುವಂತೆ ಪಟ್ಟು! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News