BBK 10 : ಸಂಗೀತಾ ಜೊತೆಗೆ ವಿನಯ್ ಪತ್ನಿ ರಹಸ್ಯ ಮಾತು..! ಗಂಡನ ತಂಟೆಗೆ ಬರ್ಬೇಡ ಅಂತ ವಾರ್ನಿಂಗ್‌ ಕೊಟ್ರಾ..?

Vinay Sangeetha Bigg boss : ವಿನಯ್‌ ಮುಸುಕಿನೊಳಗೆ ಮಲಗಿದ್ದಾಗಲೇ ಅವರ ಪತ್ನಿಯ ತೋಳು ಬಂದು ಅವರನ್ನು ತಬ್ಬಿ ಎಬ್ಬಿಸಿದೆ. ಬೆಳಿಗಿನೊಟ್ಟಿಗೆ ಬಂದ ಹೆಂಡತಿಯನ್ನು ನೋಡಿ ವಿನಯ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಆದರೆ ಸಂಗೀತಾ ಜೊತೆ ವಿನಯ್‌ ಪತ್ನಿ ರಹಸ್ಯವಾಗಿ ಮಾತನಾಡಿದ್ದು, ಕುತೂಹಲ ಮೂಡಿಸುತ್ತಿದೆ.

Written by - Krishna N K | Last Updated : Dec 28, 2023, 06:35 PM IST
  • ಬಿಗ್‌ಬಾಸ್‌ ಮನೆಗೆ ವಿನಯ್‌ ಗೌಡ ಪತ್ನಿ ಎಂಟ್ರಿ.
  • ಸಂಗೀತಾ ಜೊತೆ ವಿನಯ್‌ ಪತ್ನಿ ರಹಸ್ಯ ಮಾತು.
  • ವಿನಯ್‌ ಪತ್ನಿ ಸಂಗೀತಾಗೆ ಏನ್‌ ಹೇಳಿದ್ರು ಗೊತ್ತೆ..?
BBK 10 : ಸಂಗೀತಾ ಜೊತೆಗೆ ವಿನಯ್ ಪತ್ನಿ ರಹಸ್ಯ ಮಾತು..! ಗಂಡನ ತಂಟೆಗೆ ಬರ್ಬೇಡ ಅಂತ ವಾರ್ನಿಂಗ್‌ ಕೊಟ್ರಾ..? title=

Bigg Boss Kannada 10 : ಪ್ರತಿದಿನವನ್ನೂ ಬಿಗ್‌ಬಾಸ್‌ ಒಂದು ಹಾಡಿನೊಂದಿಗೆ ಶುರುಮಾಡುತ್ತಾರೆ. ಆ ಹಾಡಿಗೆ ಖುಷಿಯಿಂದ ಕುಣಿಯುತ್ತ ಸ್ಪರ್ಧಿಗಳು ಬೆಳಗನ್ನು ಬರಮಾಡಿಕೊಳ್ಳುತ್ತಾರೆ. ಇದು ವಾಡಿಕೆ, ಆದರೆ ಬಿಗ್‌ಬಾಸ್‌ ಮನೆಯಲ್ಲಿ ಈ ಬೆಳಗು ಬರೀ ಹಾಡಿನ ಬೆಳಗಾಗಿರಲಿಲ್ಲ. ಅದೇನು ಎಂಬುದು ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಜಾಹೀರಾಗಿದೆ.

ಉಳಿದ ಸ್ಪರ್ಧಿಗಳಿಗಿಂತ ವಿನಯ್‌ ಗೌಡ ಅವರಿಗಂತೂ ಈ ಬೆಳಗು ತುಂಬ ವಿಶೇಷವೂ ಸ್ಮರಣೀಯವೂ ಆಗಿದೆ. ಏಕೆಂದರೆ ಬೆಳಗಿನ ಹಾಡಿಗೆ ಮುಸುಕಿನೊಳಗೆ ಮಲಗಿದ್ದಾಗಲೇ ಅವರ ಪತ್ನಿಯ ತೋಳು ಬಂದು ಅವರನ್ನು ತಬ್ಬಿ ಎಬ್ಬಿಸಿದೆ. ಬೆಳಿಗಿನೊಟ್ಟಿಗೆ ಬಂದ ಹೆಂಡತಿಯನ್ನು ನೋಡಿ ವಿನಯ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅವರು ಮುಖ ನಗುವಿನಿಂದ ಅರಳಿದೆ. ‘ವಿಲನ್‌ ಮುಖದಲ್ಲೀಗ ಹೀರೊ ಕಳೆ ಬಂದಿದೆ’ ಎಂದು ತನಿಷಾ ಛೇಡಿಸಿದ್ದಾರೆ.

ಇದನ್ನೂ ಓದಿ: ಬದುಕಿರುವಾಗಲೇ ವಿಶ್ವ ಪ್ರಸಿದ್ಧ ಗಾಯಕಿ ಶಕೀರಾ ಪ್ರತಿಮೆ ನಿರ್ಮಾಣ.!

ಮನೆಯ ಸ್ಪರ್ಧಿಗಳನ್ನೆಲ್ಲ ಮಾತಾಡಿಸಿದ ವಿನಯ್ ಪತ್ನಿ ಸಂಗೀತಾ ಅವರ ಬಳಿ ಪ್ರತ್ಯೇಕವಾಗಿ ಮಾತಾಡಬೇಕು ಎಂದು ಕರೆದಿದ್ದಾರೆ. ಹಾಗಾದರೆ ಅವರು ಸಂಗೀತಾ ಬಳಿ ಏನು ಮಾತಾಡಿದ್ದಾರೆ? ಅದಕ್ಕ ಸಂಗೀತಾ ಹೇಗೆ ಪ್ರತಿಕ್ರಿಯಿಸುತ್ತಾರೆ? ಸಂಗೀತಾ-ವಿನಯ್ ಜಗಳ ಎರಡನೇ ವಾರದಿಂದಲೇ ಶುರುವಾಗಿ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಹಲವು ಸಲ ಇದು ಅತಿರೇಕಕ್ಕೂ ಹೋಗಿದೆ. 

ಈ ಬಗ್ಗೆ ವಿನಯ್‌ ಪತ್ನಿ ಮನೆಯ ಹೊರಗಡೆಯೂ ನೋವು ತೋಡಿಕೊಂಡಿದ್ದರು. ಈ ವಿಷಯದ ಬಗ್ಗೆ ಅವರು ಸಂಗೀತಾ ಬಳಿ ಮಾತಾಡುತ್ತಾರಾ? ವಿನಯ್ ಪತ್ನಿ ಜೊತೆಗಿನ ಮಾತುಕತೆ ಸಂಗೀತಾ ಅವರನ್ನು ಕುಗ್ಗಿಸುತ್ತದೆಯೇ? ಈ ವಾರದಲ್ಲಿ ಅನ್ಯೋನ್ಯವಾಗಿಯೇ ಇದ್ದ ವಿನಯ್-ಸಂಗೀತಾ ಮಧ್ಯೆ ಮತ್ತೆ ಬಿರುಕು ಮೂಡಲಿದೆಯೇ? ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಬಿಗ್‌ಬಾಸ್‌ ಅನ್ನು ವೀಕ್ಷಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News