ಸಲಾರ್ 2 ಗೆ ಹೊಸ ವಿಲನ್ ಎಂಟ್ರಿ..! ಮತ್ತೊಬ್ಬ ಪ್ಯಾನ್ ಇಂಡಿಯನ್ ನಟನೊಂದಿಗೆ ಪ್ರಭಾಸ್..

Salaar 2 : ಪ್ರಭಾಸ್ ಅಭಿನಯದ ಸಲಾರ್ 2 ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದ ತಾರಾಗಣವಿರುವ ಈ ಚಿತ್ರ ಪ್ರೇಕ್ಷಕರ ಕಣ್ಣಿಗೆ ಹಬ್ಬ ಮಾಡಲಿದೆ. ಸದ್ಯದ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ವಿಲನ್ ಪಾತ್ರಕ್ಕೆ ಮತ್ತೊಬ್ಬ ಪ್ಯಾನ್ ಇಂಡಿಯಾ ನಟ ಆಯ್ಕೆಯಾಗಿದ್ದಾರೆ. 

Written by - Krishna N K | Last Updated : May 19, 2024, 05:49 PM IST
    • ಪ್ರಭಾಸ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ ಸಲಾರ್ 2
    • ಪ್ಯಾನ್‌ ಇಂಡಿಯಾ ಮಟ್ಟದ ತಾರಾಗಣವಿರುವ ಚಿತ್ರ ಸಲಾರ್‌ 2
    • ಸಲಾರ್‌ ಮೊದಲನೇ ಭಾಗ ಹಿಟ್‌, ಭಾಗ 2 ಶೀಘ್ರವೇ ತೆರೆಗೆ
ಸಲಾರ್ 2 ಗೆ ಹೊಸ ವಿಲನ್ ಎಂಟ್ರಿ..! ಮತ್ತೊಬ್ಬ ಪ್ಯಾನ್ ಇಂಡಿಯನ್ ನಟನೊಂದಿಗೆ ಪ್ರಭಾಸ್.. title=

Shine Tom Chacko in Salaar 2 : ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ದೊಡ್ಡ ಬ್ಲಾಕ್ ಬಸ್ಟರ್ ಆಯಿತು ಎಂದು ಹೇಳಬೇಕಾಗಿಲ್ಲ. ಈ ಚಿತ್ರದ ಮುಂದುವರಿದ ಭಾಗವಾಗಿ, ಶೀಘ್ರದಲ್ಲೇ ತೆರೆಗೆ ಬರಲಿರುವ ಸಲಾರ್ ಶೌರ್ಯಾಂಗ ಪರ್ವಂ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ. 

ಸಲಾರ್ 2 ಚಿತ್ರವು ಸಲಾರ್ ಚಿತ್ರದ ಎರಡನೇ ಭಾಗವಾಗಿದೆ. ಸಲಾರ್‌ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 700 ಕೋಟಿ ಗಳಿಕೆ ಕಂಡಿತ್ತು. ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಸಂಬಂಧಿಸಿದ ಕುತೂಹಲಕಾರಿ ಅಪ್‌ಡೇಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಹಾಸಿಗೆಯ ಮೇಲೆ ಬೆಳದಿಂಗಳ ಬಾಲೆ..! ʼಖುಷಿʼ ಫೊಟೋಸ್‌ ನೋಡಿ

ಸಲಾರ್ ಚಿತ್ರದಂತೆಯೇ ಸಲಾರ್ 2 ಚಿತ್ರ ಕೂಡ ಬಹು ತಾರಾ ಬಳಗದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಇದೀಗ ಈ ಚಿತ್ರತಂಡಕ್ಕೆ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್‌ ಆಯ್ಕೆಯಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ ಶೈನ್ ಟಾಮ್ ಚಾಕೋ. ಮಲಯಾಳಂ ನಟ ಶೈನ್ ಟಾಮ್ ಚಾಕೊ ಅವರು ನಾನಿ ದಸರಾ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೃು. ಈ ಚಿತ್ರದಲ್ಲಿ ಶೈನ್‌ ಪ್ರಭಾಸ್ ಎದುರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್‌ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದೆ. ರವಿ ಬಸ್ರೂರು ಸಂಗೀತ ನೀಡುತ್ತಿರುವ ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಬಾಬಿ ಸಿಂಹ, ಜಗಪತಿ ಬಾಬು, ಶ್ರೀಯಾ ರೆಡ್ಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News