ರಶ್ಮಿಕಾ ಮಂದಣ್ಣ ಬದಲು ಅನಿಮಲ್‌ ನಲ್ಲಿ ನಟಿಸಬೇಕಿತ್ತು ಈ ಬಾಲಿವುಡ್‌ ಬ್ಯೂಟಿ.!

Rashmika Mandanna : ರಣಬಿರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.  

Written by - Chetana Devarmani | Last Updated : Dec 1, 2023, 04:32 PM IST
  • ಅನಿಮಲ್‌ ಸಿನಿಮಾಗೆ ರಶ್ಮಿಕಾ ಮೊದಲ ಆಯ್ಕೆಯಲ್ಲ
  • ಅನಿಮಲ್‌ ನಲ್ಲಿ ನಟಿಸಬೇಕಿತ್ತು ಈ ಬಾಲಿವುಡ್‌ ಬ್ಯೂಟಿ.!
  • ಆದರೆ ಪ್ರೊಜೆಕ್ಟ್‌ನಿಂದ ಹೊರ ಹೋಗಿದ್ದು ಇದೇ ಕಾರಣಕ್ಕೆ.!
ರಶ್ಮಿಕಾ ಮಂದಣ್ಣ ಬದಲು ಅನಿಮಲ್‌ ನಲ್ಲಿ ನಟಿಸಬೇಕಿತ್ತು ಈ ಬಾಲಿವುಡ್‌ ಬ್ಯೂಟಿ.! title=

Rashmika Mandanna Was Not First Choice For Animal : ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ರಿಲೀಸ್‌ ಆಗಿದೆ. ಚಿತ್ರದಲ್ಲಿ ರಣಬಿರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಈ ಸಿನಿಮಾದ ನಾಯಕಿ ಪಾತ್ರಕ್ಕೆ ಮೊದಲ ಆಯ್ಕೆ ಅಲ್ಲ ಎಂಬ ವಿಚಾರ ಚರ್ಚೆ ಆಗುತ್ತಿದೆ. 

ಅನಿಮಲ್‌ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಕೆಲವು ಕಾರಣಗಳಿಂದ ಈ ಪಾತ್ರಕ್ಕಾಗಿ ಆ ನಟಿಯೊಂದಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ರಶ್ಮಿಕಾ ಮಂದಣ್ಣ ಅವರನ್ನು ಸೆಲೆಕ್ಟ್‌ ಮಾಡಲಾಯಿತು ಎಂದು ವರದಿಯಾಗಿದೆ. 

ಇದನ್ನೂ ಓದಿ: ದರ್ಶನ್‌ ಕಾಟೇರ ರಿಲೀಸ್‌ ಡೇಟ್‌ ಫಿಕ್ಸ್‌..‌ ಪ್ರಭಾಸ್‌ - ಶಾರುಖ್‌ ಎದುರು ʻಚಾಲೆಂಜಿಂಗ್‌ʼ ಸ್ಟಾರ್!

ಸಂದೀಪ್ ರೆಡ್ಡಿ ವಂಗಾ ಅವರು ಅನಿಮಲ್‌ ಸಿನಿಮಾದಲ್ಲಿರುವ ʻಗೀತಾಂಜಲಿʼ ಪಾತ್ರಕ್ಕಾಗಿ ಮೊದಲಿಗೆ ಪರಿಣಿತಿ ಚೋಪ್ರಾ ಅವರನ್ನು ಆಯ್ಕೆ ಮಾಡಿದ್ದರು. ಆದರೆ ಆ ನಂತರ ಕೆಲವು ಕಾರಣಗಳಿಂದ ಪರಿಣಿತಿ ಚೋಪ್ರಾ ಈ ಪಾತ್ರಕ್ಕೆ ಸೂಕ್ತವಲ್ಲ ಎಂದು ಸಂದೀಪ್‌ ಭಾವಿಸಿದರಂತೆ. ಇದೇ ಕಾರಣಕ್ಕೆ ಅವರನ್ನು ಕೈ ಬಿಡಲಾಯಿತು ಎನ್ನಲಾಗಿದೆ.   

ಆ ಸಮಯದಲ್ಲಿ ಗೀತಾಂಜಲಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಲಾಗಿತ್ತು. ಪರಿಣಿತಿ ಚೋಪ್ರಾ ಅವರ ವೇಳಾಪಟ್ಟಿ ಸರಿ ಹೊಂದದ ಕಾರಣ ಅವರನ್ನು ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. 

ಇದನ್ನೂ ಓದಿ: Pooja Gandhi: ಹೇಗಿದೆ ನೋಡಿ ಪೂಜಾ ಗಾಂಧಿ ಮದುವೆ ಸಂಭ್ರಮ.. Exclusive Photos ಇಲ್ಲಿವೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News