Priyamani : ದುಡ್ಡು ಕೊಟ್ಟು ಕರೆಸಿಕೊಂಡು...! ಬಿಟೌನ್‌ ಸೆಲೆಬ್ರೆಟಿಗಳ ರಹಸ್ಯ ಬಯಲು ಮಾಡಿದ ಪ್ರಿಯಾ ಮಣಿ

Priyamani about bollywood : ನಟ ನಟಿಯರು ಬಾಲಿವುಡ್‌ನ ಕರಾಳ ಮುಖವನ್ನು ಬಹಿರಂಗ ಪಡಿಸುತ್ತಿದ್ದಾರೆ. ಈ ಪೈಕಿ ಇದೀಗ ಬಹುಭಾಷಾ ನಟಿ ಪ್ರಿಯಾ ಮಣಿ ಸೇರಿಕೊಂಡಿದ್ದು, ಹಿಂದಿ ಸಿನಿ ಸೆಲೆಬ್ರೆಟಿಗಳ ತಂತ್ರಗಾರಿಕೆಯೊಂದನ್ನು ಬಯಲಿಗೆಳೆದಿದ್ದಾರೆ.

Written by - Krishna N K | Last Updated : Mar 9, 2024, 06:26 PM IST
  • ಬಾಲಿವುಡ್‌ನ ಕರಾಳ ಮುಖವನ್ನು ಬಹಿರಂಗ ಪಡಿಸಿದ ನಟಿ ಪ್ರಿಯಾ ಮಣಿ
  • ಪ್ರಿಯಾಮಣಿ ನೀಡಿರುವ ಹೇಳಿಕೆಯೊಂದು ಬಾಲಿವುಡ್​ನ ಕರಾಳ ಮುಖವನ್ನು ಹೊರಹಾಕಿದೆ.
  • ಪ್ರಿಯಾ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ.
Priyamani : ದುಡ್ಡು ಕೊಟ್ಟು ಕರೆಸಿಕೊಂಡು...! ಬಿಟೌನ್‌ ಸೆಲೆಬ್ರೆಟಿಗಳ ರಹಸ್ಯ ಬಯಲು ಮಾಡಿದ ಪ್ರಿಯಾ ಮಣಿ title=
Priyamani

Priyamani : ಪ್ರತಿಬಾರಿಯೂ ನಟ-ನಟಿಯರು ತಮಗಾದ ಕಹಿ ಅನುಭವವನ್ನು ಬಿಚ್ಚಿಡುತ್ತಿದ್ದಾರೆ. ಇದೀಗ ಬಹುಭಾಷಾ ನಟಿ ಪ್ರಿಯಾಮಣಿ ನೀಡಿರುವ ಹೇಳಿಕೆಯೊಂದು ಬಾಲಿವುಡ್​ನ ಕರಾಳ ಮುಖವನ್ನು ಹೊರಹಾಕಿದೆ. ಹಾಗಿದ್ರೆ ಪ್ರಿಯಾ ಮಣಿ ನೀಡಿರುವ ಹೇಳಿಕೆ ಏನು..? ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ ನೋಡಿ.. 

ಹೌದು.. ಮದುವೆ ಬಳಿಕ ನಟಿ ಪ್ರಿಯಾ ಮಣಿ ಟಿವಿ ಕಾರ್ಯಕ್ರಮ ಮತ್ತು ವೆಬ್ ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಭಾಮಕಲಾಪ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾ ಓಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಪ್ರಿಯಾ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ.

ಇದನ್ನೂ ಓದಿ:  ನಿತೀಶ್ ತಿವಾರಿ ʼರಾಮಾಯಣʼದಲ್ಲಿ ಸಾಯಿ ಪಲ್ಲವಿ ʼಸೀತೆʼ ರಣಬೀರ್‌ ʼರಾಮʼ..! ಯಶ್‌ ರಾವಣ..?

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಮಣಿ, ಬಾಲಿವುಡ್‌ ನಟ- ನಟಿಯರನ್ನು ಪಾಪರಾಜಿಗಳು ಮುತ್ತಿಕೊಳ್ಳುವ ವಿಚಾರವಾಗಿ ಸತ್ಯವೊಂದನ್ನು ಬಯಲಿಗೆಳೆದಿದ್ದಾರೆ.. ಅಲ್ಲದೆ, ಪಾಪರಾಜಿಗಳು ಮುತ್ತಿಕೊಳ್ಳೋದು ಕೂಡ ಒಂದು ರೀತಿ ಪಬ್ಲಿಸಿಟಿ ತಂತ್ರ. ಅಲ್ಲದೆ, ಪಾಪರಾಜಿಗಳೇ ಸೆಲೆಬ್ರೆಟಿಗಳ ಹಿಂದೆ ಓಡಾಡ್ತಿರುತ್ತಾರೆ ಎಂದು ಜನ ಸಾಮಾನ್ಯರು ಊಹಿಸಿರುತ್ತಾರೆ. ಆದ್ರೆ, ಪ್ರಚಾರ ಪ್ರಿಯ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ ಅಂತ ಸೆಲೆಬ್ರೆಟಿಗಳ ಪ್ರಚಾರದ ಗಿಮಿಕ್‌ ಅನ್ನು ಹೊರ ಹಾಕಿದ್ದಾರೆ.

ಅಲ್ಲದೆ, ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ ಮತ್ತು ವಿಡಿಯೋ ತೆಗೆದು ಪ್ರಚಾರ ಮಾಡೋದು, ನಟ-ನಟಿಯರ ಪಿಆರ್​ ತಂಡದವರೇ ಪಾಪರಾಜಿಗಳಿಗೆ ಮಾಹಿತಿ ನೀಡ್ತಾರೆ. ಇದೆಲ್ಲಾ ಪ್ರಚಾರಗಿಟ್ಟಿಸಿಕೊಳ್ಳುವ ತಂತ್ರ  ಅಂತ ಬಾಲಿವುಡ್‌ ಮಂದಿಯ ಪಬ್ಲಿಸಿಟಿ ತಂತ್ರವನ್ನು ಪ್ರಿಯಾ ಬಹಿರಂಗಗೊಳಿಸಿದ್ದಾರೆ.

ಇದನ್ನೂ ಓದಿ: ಡಾಲಿ, ಕಿಚ್ಚನ ಬಳಿಕ ʼಕೆರೆಬೇಟೆʼ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಸಾಥ್..!

ಸಧ್ಯ ಟಿವಿ ಕಾರ್ಯಕ್ರಮ ಮತ್ತು ವೆಬ್ ಸೀರಿಸ್‌ನಲ್ಲಿ ಪ್ರಿಯಾ ಮಣಿ ಬ್ಯುಸಿಯಾಗಿದ್ದಾರೆ.​ ಇತ್ತೀಚಿಗೆ ಬಿಡುಗೆಯಾದ ಶಾರುಖ್​ ಖಾನ್ ಅಭಿನಯದ ಜವಾನ್ ಸಿನಿಮಾದಲ್ಲಿ ನಟಿಸಿದ್ದರು. ಆರ್ಟಿಕಲ್ 370 ಸಿನಿಮಾದಲ್ಲಿಯೂ ಪಿಲ್ಲು ಮಣಿ ಕಾಣಿಸಿಕೊಂಡಿದ್ದಾರೆ. ಸಧ್ಯ ಭಾಮಕಲಾಪ ಮೂಲಕ ಓಟಿಟಿಯಲ್ಲಿ ಸದ್ದು ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News