Rashmika Mandanna: ಇದೊಂದು ವಿಚಾರಕ್ಕೆ ಬೇಸರಗೊಂಡ ರಶ್ಮಿಕಾ ಮಂದಣ್ಣಾ ಸಿನಿಮಾನೇ ಕ್ಯಾನ್ಸಲ್ ಮಾಡಿದ್ರು..!

Rashmika Mandanna: ಇನ್ನು ಇದಕ್ಕೂ ಮುನ್ನ ಈ ಸಿನಿಮಾಗೆ ನ್ಯಾಷನಲ್ ಕ್ರಶ್ ಅವರನ್ನು ಸಂಪರ್ಕಿಸಲಾಗಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು ಮೃಣಾಲ್ ಠಾಕೂರ್ ಪಾತ್ರಕ್ಕೆ ಮೊದಲು ಸೆಲೆಕ್ಟ್ ಮಾಡಿದ್ದು ಕನ್ನಡತಿ ರಶ್ಮಿಕಾ ಮಂದಣ್ಣ ಅವರನ್ನು. ಆದರೆ ಇದರಲ್ಲಿರುವ ಕೆಲ ಸೀನ್ ಗಳ ಕಾರಣದಿಂದ ಸಿನಿಮಾನೇ ಕ್ಯಾನ್ಸಲ್ ಮಾಡಿದ್ರು.

Written by - Bhavishya Shetty | Last Updated : Mar 2, 2023, 09:11 PM IST
    • ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ಜರ್ಸಿ ರಿಮೇಕ್ ಸಿನಿಮಾ ಜನಮನ ಗೆದ್ದಿತ್ತು.
    • ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಅವರು ಕ್ರಿಕೆಟ್ ಉತ್ಸಾಹಿ ಅರ್ಜುನ್ ತಲ್ವಾರ್ ಪಾತ್ರದಲ್ಲಿ ನಟಿಸಿದ್ದರು.
    • ಈ ಸಿನಿಮಾಗೆ ನ್ಯಾಷನಲ್ ಕ್ರಶ್ ಅವರನ್ನು ಸಂಪರ್ಕಿಸಲಾಗಿತ್ತು ಎಂಬುದು ನಿಮಗೆ ತಿಳಿದಿದೆಯೇ?
Rashmika Mandanna: ಇದೊಂದು ವಿಚಾರಕ್ಕೆ ಬೇಸರಗೊಂಡ ರಶ್ಮಿಕಾ ಮಂದಣ್ಣಾ ಸಿನಿಮಾನೇ ಕ್ಯಾನ್ಸಲ್ ಮಾಡಿದ್ರು..! title=
Rashmika Mandanna

Rashmika Mandanna: ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ಜರ್ಸಿ ರಿಮೇಕ್ ಸಿನಿಮಾ ಜನಮನ ಗೆದ್ದಿತ್ತು. ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಅವರು ಕ್ರಿಕೆಟ್ ಉತ್ಸಾಹಿ ಅರ್ಜುನ್ ತಲ್ವಾರ್ ಪಾತ್ರದಲ್ಲಿ ನಟಿಸಿದ್ದರು. 40ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಬೇಕೆಂಬ ಕನಸುಗಳು ಈಡೇರುತ್ತವೆ. ಇದರಲ್ಲಿ ಮೃಣಾಲ್ ಠಾಕೂರ್ ಶಾಹಿದ್ ಕಪೂರ್ ಅವರ ಆನ್-ಸ್ಕ್ರೀನ್ ಪತ್ನಿ ವಿದ್ಯಾ ತಲ್ವಾರ್ ಆಗಿ ಅಭಿನಯಿಸಿದ್ದಾರೆ.

ಇನ್ನು ಇದಕ್ಕೂ ಮುನ್ನ ಈ ಸಿನಿಮಾಗೆ ನ್ಯಾಷನಲ್ ಕ್ರಶ್ ಅವರನ್ನು ಸಂಪರ್ಕಿಸಲಾಗಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು ಮೃಣಾಲ್ ಠಾಕೂರ್ ಪಾತ್ರಕ್ಕೆ ಮೊದಲು ಸೆಲೆಕ್ಟ್ ಮಾಡಿದ್ದು ಕನ್ನಡತಿ ರಶ್ಮಿಕಾ ಮಂದಣ್ಣ ಅವರನ್ನು. ಆದರೆ ಇದರಲ್ಲಿರುವ ಕೆಲ ಸೀನ್ ಗಳ ಕಾರಣದಿಂದ ಸಿನಿಮಾನೇ ಕ್ಯಾನ್ಸಲ್ ಮಾಡಿದ್ರು.

ಇದನ್ನೂ ಓದಿ: Urfi Javed : ʼಅಲ್ಲಿಗೆ ಪ್ಲಾಸ್ಟಿಕ್‌ ಸುತ್ತಿಕೊಂಡುʼ ರಸ್ತೆಗೆ ಬಂದ ವೈರಲ್‌ ಉರ್ಫಿ..! ವಿಡಿಯೋ ನೋಡಿ

ಜರ್ಸಿ ಸಿನಿಮಾ ತೆಲುಗಿನ ರಿಮೇಕ್. ಆದರೆ ಟಾಲಿವುಡ್ ನಲ್ಲಿ ಹಿಟ್ ಆದ ಸಿನಿಮಾ, ಬಾಲಿವುಡ್ ನಲ್ಲಿ ನೆಲಕಚ್ಚಿತ್ತು. ಈ ಸಿನಿಮಾ ಆರಂಭದಲ್ಲಿ ನಿರ್ಮಾಪಕರು, ನಿರ್ದೇಶಕರೆಲ್ಲರು ರಶ್ಮಿಕಾ ಮಂದಣ್ಣ ಅವರನ್ನು ಶಾಹಿದ್ ಕಪೂರ್ ಅವರ ನಾಯಕಿ ಪಾತ್ರದಲ್ಲಿ ನಟಿಸಲು ಸಂಪರ್ಕಿಸಿದ್ದರು. ಆದರೆ ರಶ್ಮಿಕಾ ಆಫರ್ ಅನ್ನು ತಿರಸ್ಕರಿಸಿದ್ದಾರೆ.

ಐಎಎನ್‌ಎಸ್‌’ನೊಂದಿಗೆ ಮಾತನಾಡಿದ್ದ ಕನ್ನಡದ ಸುಂದರಿ ಈ ವಿಚಾರವನ್ನು ಬಹಿರಂಗಪಡಿಸಿದರು. “ನಾನು ಇಲ್ಲಿಯವರೆಗೆ ಮಾಡಿದ ಆಯ್ಕೆಗಳಿಂದ ನನಗೆ ಆ ಅವಕಾಶ ಕೂಡ ಸಿಕ್ಕಿತು. ಇದು ಕೆಟ್ಟ ಆಯ್ಕೆ ಎಂದು ಭಾವಿಸಲ್ಲ. ಆದರೆ ಈಗ ಬರೀ ಕಮರ್ಷಿಯಲ್ ಚಿತ್ರಗಳನ್ನು ಮಾಡುವ ಹುಚ್ಚು ಹಿಡಿದಿದೆ. ಜರ್ಸಿಯಂತಹ ಸಿನಿಮಾಗಳನ್ನು ಮಾಡುವುದನ್ನು ಕಲ್ಪಿಸಿಕೊಂಡು ಅದರಲ್ಲಿ ಅಭಿನಯಿಸಲು ಸಾಧ್ಯವಾಗುವುದಿಲ್ಲ” ಎಂದಿದ್ದಾರೆ.

“ನಾನು ಯಾವ ಚಿತ್ರದ ಭಾಗವಾಗಿದ್ದರೂ ಸಹ ಅದಕ್ಕೆ ಸಂಪೂರ್ಣ ನನ್ನನ್ನು ನಾನು ಅರ್ಪಿಸಬೇಕು. ನನ್ನಿಂದ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದು ನನಗನಿಸುವ ಯಾವುದೇ ಯೋಜನೆಯನ್ನು ನಾನು ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ. ಆದರೆ ಕೆಲವೊಂದು ಮೂಲಗಳ ಪ್ರಕಾರ, ಆ ಸಿನಿಮಾದಲ್ಲಿರುವ ಹೆಚ್ಚು ಚುಂಬನ ಸೀನ್ ಗಳಿಂದಲೇ ರಶ್ಮಿಕಾ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ.

ಇದನ್ನೂ ಓದಿ: Urfi Javed : ʼಅಲ್ಲಿಗೆ ಪ್ಲಾಸ್ಟಿಕ್‌ ಸುತ್ತಿಕೊಂಡುʼ ರಸ್ತೆಗೆ ಬಂದ ವೈರಲ್‌ ಉರ್ಫಿ..! ವಿಡಿಯೋ ನೋಡಿ

ಜೆರ್ಸಿ,,, ಇದೇ ಶೀರ್ಷಿಕೆಯಲ್ಲಿ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಅಭಿನಯಿಸಿದ್ದ ತೆಲುಗು ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಬಳಿಕ ಇದನ್ನು ಹಿಂದಿ ರಿಮೇಕ್ ಮಾಡಲಾಯಿತು. ಈ ಸಿನಿಮಾಗೆ ಅಲ್ಲು ಎಂಟರ್‌ಟೈನ್‌ಮೆಂಟ್, ದಿಲ್ ರಾಜು ಪ್ರೊಡಕ್ಷನ್, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಬ್ರಾಟ್ ಫಿಲ್ಮ್ಸ್ ಬೆಂಬಲಿಸಿದೆ. ಕ್ರೀಡೆಗೆ ಸಂಬಂಧಿಸಿದ ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಮಾಜಿ ಕ್ರಿಕೆಟಿಗನಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಆಗಸ್ಟ್ 28, 2020 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ಬಾರಿ ಮುಂದೂಡಲಾಯಿತು. ಚಿತ್ರವು ಅಂತಿಮವಾಗಿ ಏಪ್ರಿಲ್ 22, 2022 ರಂದು ಬಿಡುಗಡೆಯಾಯಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News