Shruti Hassan ಗೆ ತಗುಲಿದ ಕೊರೊನಾ ಸೋಂಕು, ಮನೆಯಲ್ಲಿಯೇ ಚಿಕಿತ್ಸೆ

Shruti Hassan Covid-19 Positive - ಶ್ರುತಿ (Shruti Hassan) ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇನ್ನೊಂದೆಡೆ ಕೆಲವು ಬಳಕೆದಾರರು ನಟಿಯ ಈ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ಪಾಸಿಟಿವ್ ಆಗಿರಲು ಸಲಹೆ ನೀಡುತ್ತಿದ್ದಾರೆ.  

Written by - Nitin Tabib | Last Updated : Feb 27, 2022, 09:42 PM IST
  • ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ಬೆಡಗಿ ಶ್ರುತಿ ಹಾಸನ್ ಗೆ ಕೊರೊನಾ ಸೋಂಕು
  • ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ನಟಿ
  • ಪೋಸ್ಟ್ ಹಂಚಿಕೊಂಡು ಅಭಿಮಾನಿಗಳಿಗೆ ಮಾಹಿತಿ ನೀಡಿದ ಶ್ರುತಿ
Shruti Hassan ಗೆ ತಗುಲಿದ ಕೊರೊನಾ ಸೋಂಕು, ಮನೆಯಲ್ಲಿಯೇ ಚಿಕಿತ್ಸೆ title=
Shruti Hassan Covid-19 Positive (File Photo)

Shruti Hassan Covid-19 Positive - ಬಾಲಿವುಡ್ (Bollywood) ಮತ್ತು ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಶ್ರುತಿ (South Superstar Shruti Hassan) ಹಾಸನ್ ಅವರು ಕೋವಿಡ್ (Covid-19) ಪಾಸಿಟಿವ್ ಆಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಪೋಸ್ಟ್ ಹಂಚಿಕೊಂಡು ಬರೆದುಕೊಂಡ ಶ್ರುತಿ  'ಎಲ್ಲರಿಗೂ ನಮಸ್ಕಾರ. ನನ್ನ ಆರೋಗ್ಯಕ್ಕೆ ಸಂಬಂಧಿಸಿದ ಇತ್ತೀಚಿನ ಸುದ್ದಿಗಳನ್ನು ನಿಮ್ಮೆಲ್ಲರಿಗೂ ನೀಡಲು ನಾನು ಬಯಸುತ್ತೇನೆ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರವೂ, ನಾನು ಕೋವಿಡ್ -19 (Coronavirus) ಹಿಡಿತಕ್ಕೆ ಬಂದಿದ್ದೇನೆ. ನಾನು ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ. ಧನ್ಯವಾದಗಳು ಮತ್ತು ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಮತ್ತೆ ಭೇಟಿಯಾಗುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ-Aditi Prabhudeva: ಶಾನೆ ಟಾಪ್ ಆಗಿತ್ತು ಅದಿತಿ ಪ್ರಭುದೇವ ಮೊದಲ ಸ್ಟ್ಯಾಂಡಪ್ ಕಾಮಿಡಿ ಶೋ!

ಶೀಘ್ರ ಚೇತರಿಕೆಗೆ ಹಾರಿಸುತ್ತಿರುವ ಅಭಿಮಾನಿಗಳು
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಇದೀಗ ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದೆ ವೇಳೆ, ಕೆಲವು ಬಳಕೆದಾರರು ನಟಿಯ ಈ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದು, ವ್ಯಾಯಾಮ ಮಾಡಲು ಮತ್ತು ಪಾಸಿಟಿವ್ ಆಗಿರಲು ಸಲಹೆ ನೀಡುತ್ತಿದ್ದಾರೆ. ನಟಿಯ ಈ ಪೋಸ್ಟ್ ಗೆ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಎಲ್ಲಾ ಜನ ಕೂಡ ಕಾಮೆಂಟ್ ಮಾಡಿದ್ದಾರೆ. ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ (Covid-19 Second Wave) ಈ ವೈರಸ್ ಇಡೀ ದೇಶಕ್ಕೆ ಅಪಾರ ಹಾನಿ ಉಂಟು ಮಾಡಿರುವುದು ಇಲ್ಲಿ ಉಲ್ಲೇಖನೀಯ. ಆ ಸಮಯದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಕೆಲ ಕಟ್ಟುಪಾಡುಗಳ ನಂತರ ಈಗ ಪರಿಸ್ಥಿತಿ ಹತೋಟಿಗೆ ಬಂದರೂ ಎಚ್ಚರದಿಂದ ಇರುವುದು ನಮ್ಮೆಲ್ಲರ ದೊಡ್ಡ ಜವಾಬ್ದಾರಿಯಾಗಿದೆ ಎಂಬುದು ಸಮಾಧಾನಕರ ಸಂಗತಿ.

ಇದನ್ನೂ ಓದಿ-'ಸರಿಗಮಪ ಚಾಂಪಿಯನ್ಸ್' ಯಾರು..? 'ಝೀ ಕನ್ನಡ' ವಾಹಿನಿಯ ಹೆಮ್ಮೆ..!

OTTಗೆ ಶ್ರುತಿ ಪದಾರ್ಪಣೆ 
ಕೋವಿಡ್‌ನಿಂದಾಗಿ ಪ್ರಸ್ತುತ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಶ್ರುತಿ ಕೆಲಸದ ವಿಷಯಕ್ಕೆ ಬಂದರೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು OTT ಯಲ್ಲಿಯೂ ಪದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ ಅವರು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ 'ಬೆಸ್ಟ್ ಸೆಲ್ಲರ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ವೆಬ್ ಸೀರೀಸ್ ಆಗಿದ್ದು, ಇದು ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಶ್ರುತಿ ಈ ವೇದಿಕೆಯಲ್ಲಿ ಹೆಚ್ಚು ಕೆಲಸ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ-Radhe Shyam:ಮೆಟ್ರೋ ಮೇಲೆ‌ ರಾಧೆಶ್ಯಾಮ್! ರಿಲೀಸ್ ಗೂ ಮುಂಚೆ ಭರ್ಜರಿ ಪ್ರಮೋಷನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News