The Kerala Story : ವಿವಾದಗಳ ನಡುವೆಯೂ ಬಾಕ್ಸಾಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌

The Kerala Story Box Office Collection : ʼದಿ ಕೇರಳ ಸ್ಟೋರಿʼ ಸಿನಿಮಾ ಸಾಕಷ್ಟ ವಿವಾದಗಳನ್ನು ಮೀರಿ ದೇಶದಾದ್ಯಂತ ಬಿಡುಗಡೆಯಾಗಿದೆ. ಹಿಂದಿ, ತಮಿಳು, ಮಲಯಾಳಂ,ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಾಕಷ್ಟು ಜನರು ಈ ಸಿನಿಮಾವನ್ನು ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.   

Written by - Zee Kannada News Desk | Last Updated : May 27, 2023, 11:30 AM IST
  • ಇನ್ನೂ ಈ ʼದಿ ಕೇರಳ ಸ್ಟೋರಿʼ ಸಿನಿಮಾ ರಿಲೀಸ್‌ ಆಗಿ 20 ದಿನದಲ್ಲಿ 200 ಕೋಟಿ ರೂ ದಾಟಿದೆ.
  • ಹಲವಾರು ರಾಜ್ಯಗಳಲ್ಲಿ ಈ ಕೇರಳ ಸ್ಟೋರಿ ಸಿನಿಮಾಗೆ ನಿಷೇಧದ ಭೀತಿ ಎದುರಾಗಿದೆ.
  • ಸಿನಿಮಾ ರಿಲೀಸ್‌ ಆಗಿ ಕೇವಲ ಐದು ದಿನದಲ್ಲಿ ಬರೋಬ್ಬರಿ 55ರಿಂದ 60 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
The Kerala Story : ವಿವಾದಗಳ ನಡುವೆಯೂ ಬಾಕ್ಸಾಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌  title=

The Kerala Story : ಇನ್ನೂ ಈ ʼದಿ ಕೇರಳ ಸ್ಟೋರಿʼ ಸಿನಿಮಾ ರಿಲೀಸ್‌ ಆಗಿ 20 ದಿನದಲ್ಲಿ 200 ಕೋಟಿ ರೂ ದಾಟಿದೆ. ಹೌದು ಸಾಕಷ್ಟು ವಿವಾದಗಳು ಈ ಸಿನಿಮಾ ಬಿಡುಗಡೆಗೆ ಮುನ್ನವೇ ಎದುರಾದವು ಅನೇಕ ರಾಜಕೀಯ ಮುಖಂಡರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೂ ತೆರೆಕಂಡ ಈ ಸಿನಿಮಾ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. 

ಹಲವಾರು ರಾಜ್ಯಗಳಲ್ಲಿ ಈ ಕೇರಳ ಸ್ಟೋರಿ ಸಿನಿಮಾಗೆ ನಿಷೇಧದ ಭೀತಿ ಎದುರಾಗಿದೆ. ಇನ್ನು ಈ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಕೆಲವು ರಾಜ್ಯಗಳಲ್ಲಿ ಈ ಚಿತ್ರಕ್ಕೆ ವಿನಾಯತಿಯನ್ನು ಸಹ ನೀಡಲಾಗಿದೆ. ಆದರೆ ಇನ್ನೂ ಕೆಲವು ಕಡೆಗಳಲ್ಲಿ ಈ ಚಿತ್ರವನ್ನು ನೋಡಲು ಮಹಿಳೆಯರಿಗೆ ಉಚಿತವಾಗಿ ಅವಕಾಶ ಮಾಡಿಕೊಡಲಾಗಿದೆ. ಇದೇ ಈ ಸಿನಿಮಾ ಯಶಸ್ಸಿಗೆ ಕಾರಣವಾಗಿದೆ.

ಇದನ್ನೂ ಓದಿ-ಬೆಂಗಳೂರು ಬಾಯ್ಸ್" ನೀನೇ ಬೇಕು ಹಾಡಿಗೆ ಸಿಕ್ತು ಸಖತ್ ಮೆಚ್ಚುಗೆ...! 

ʼದಿ ಕೇರಳ ಸ್ಟೋರಿʼ ಸಿನಿಮಾ ಬಾಕ್ಸಾಫೀಸ್‌ನಲ್ಲಿ 200 ಕೋಟಿ ರೂಪಾಯಿ ದಾಟಿದ ಕಲೆಕ್ಷನ್‌ ಮಾಡಿದೆ. ಈ ಸಿನಿಮಾ ರಿಲೀಸ್‌ ಆಗಿ ಕೇವಲ ಐದು ದಿನದಲ್ಲಿ ಬರೋಬ್ಬರಿ 55ರಿಂದ 60 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಸಾಕಷ್ಟು ವಿವಾದಗಳ ನಡುವೆಯೂ ಈ ಕೇರಳ ಸಿನಿಮಾ ಭರ್ಜರಿ ಕಲೆಕ್ಷನ್‌ ಮಾಡಿ ದಾಖಲೆ ಮಾಡಿದೆ. ಮುಂದೆ ಈ ಸಿನಿಮಾ 15 ದಿನಗಳಲ್ಲಿ 171 ಕೋಟಿ ಕಲೆಕ್ಷನ್‌ ಮಾಡಿದೆ. 

ಹೀಗೆ ಈ ಸಿನಿಮಾ ಸಾಕಷ್ಟು ಅಡೆತಡೆಗಳನ್ನು ಮೀರಿ 20 ದಿನಗಳಲ್ಲಿ 200 ಕೋಟಿಗಿಂತಲೂ ಅಧಿ ಕೆಲಕ್ಚನ್‌ ಮಾಡಿ ಬಾಕ್ಸ್‌ ಆಫೀಸ್‌ನಲ್ಲಿ ಧೂಳಿಪಟ ಎಬ್ಬಿಸಿದೆ. 200 ಕೋಟಿ ರೂಪಾಯಿ ಕಲೆಕ್ಷನ್‌ ದಾಟಿದರು ಸಹ ಇನ್ನು ಹೆಚ್ಚು ನಿರೀಕ್ಷೆಗಳು ಈ ಸಿನಿಮಾ ಮೇಲಿವೆ. ಕಾರಣ ಈ ಸಿನಿಮಾ ವಿವಾದಗಳ ಮಧ್ಯವೇ ಯಶಸ್ಸು ಕಂಡಿದ್ದು. 

ಇನ್ನು ಈ ಕೇರಳ ಸ್ಟೋರಿ ಸಿನಿಮಾದ ಒಟ್ಟು ಕಲೆಕ್ಷನ್‌ ಮುಂದಿಬನ ದಿನಗಳಲ್ಲಿ ಎಷ್ಟಾಗಲಿದೆ ಎಂದು ಕಾದು ನೋಡಬೇಕಿದೆ. ಇನ್ನು ಈ ಸಿನಿಮಾ ಹಲವು ಸಿನಿಮಾ ಕಲೆಕ್ಷನ್‌ಗಳ ದಾಖಲೆಯನ್ನು ಮುರಿಯುವುದರಲ್ಲಿ ಯವುದೇ ಸಂದೇಹವಿಲ್ಲ ಎಂದು ಹೇಳಬಹುದು. 

ಇದನ್ನೂ ಓದಿ-Mouni Roy : ಶಾಂತ ಮನಸ್ಸನ್ನೂ ಅಲ್ಲೋಲ ಕಲ್ಲೋಲ ಗೊಳಿಸುತಿದೆ ʼಮೌನಿʼ ಮಾದಕ ನೋಟ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡ

Trending News