Health Tips: ಹೃದಯಾಘಾತವನ್ನು ತಡೆಗಟ್ಟಲು ಈ 5 ಆಹಾರ ಕ್ರಮಗಳನ್ನು ಅನುಸರಿಸಿ.

Heart Attack: ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಹೆಚ್ಚಾಗುತ್ತಲೇ ಇವೆ. ವಯೋಮಿತಿ ಇಲ್ಲದೆ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾದರೆ ಇದನ್ನು ತಡೆಗಟ್ಟಲು ಕೆಲವು ಆಹಾರಗಳು ನಿಮಗೆ ಸಹಾಯ ಮಾಡುತ್ತವೆ, ಯಾವುದು ಆ ಆಹಾರಗಳು ಎನ್ನುವುದರ ಬಗ್ಗೆ ಇಲ್ಲಿ ತಿಳಿಯಿರಿ..

Written by - Zee Kannada News Desk | Last Updated : Jan 13, 2024, 11:17 AM IST
  • ವಯೋಮಿತಿ ಇಲ್ಲದೆ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
  • ಆರೋಗ್ಯಕರ ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ.
  • ಅಡುಗೆಮನೆಯಲ್ಲಿನ ಮಸಾಲೆಗಳು ಅಡುಗೆ ರುಚಿಯನ್ನಷ್ಟೆ ಅಲ್ಲ ಹೃದಯದ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ.
Health Tips: ಹೃದಯಾಘಾತವನ್ನು ತಡೆಗಟ್ಟಲು ಈ 5 ಆಹಾರ ಕ್ರಮಗಳನ್ನು ಅನುಸರಿಸಿ. title=

Foods to prevent Heart Attack: ಹೃದಯರಕ್ತನಾಳದ ಕಾಯಿಲೆಗಳು ಎಂದರೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಷ್ಟೆ ಅಲ್ಲ. ಇದಲ್ಲದೆ, ಅನೇಕ ಹೃದಯರಕ್ತನಾಳದ ಕಾಯಿಲೆಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಪರಿಧಮನಿಯ ಮುಚ್ಚುವಿಕೆ. ಹೃದಯದ ಅಪಧಮನಿಗಳಲ್ಲಿ ಕೊಬ್ಬಿನ ನಿಕ್ಷೇಪಗಳು ಸಂಗ್ರಹವಾದಾಗ, ಅಪಧಮನಿಗಳಲ್ಲಿ ಅಡಚಣೆ ಉಂಟಾಗುತ್ತದೆ. ಇದು ಉಂಟಾದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತಲೂ, ತಡೆಗಟ್ಟುವುದು ಉತ್ತಮ. ಇದನ್ನು ತಡೆಗಟ್ಟಬೇಕೆಂದರೆ ಆಹಾರ ಕ್ರಮ ಬಹಳ ಮುಖ್ಯ. ಅಂತಹ ಹೃದಯಾಘಾತವನ್ನು ತಪ್ಪಿಸಲು ಮತ್ತು ತಡೆಯಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಅವುಗಳೆಂದರೆ, 

 * ಮೀನು 

ಆರೋಗ್ಯಕರ ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. ನಮ್ಮ ದೈನಂದಿನ ಆಹಾರದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಸೇರಿಸುವುದು ಮುಖ್ಯವಾಗಿದೆ. ಈ ರೀತಿಯ ಆಹಾರಗಳಲ್ಲಿ ಮೀನುಗಳು ಕೂಡಾ ಒಂದಾಗಿವೆ. ಮೀನುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ನಿಮ್ಮ ಹೃದಯವನ್ನ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: ಮಧುಮೇಹವನ್ನು ಕ್ಷಣಾರ್ಧದಲ್ಲಿ ನಿಯಂತ್ರಣಕ್ಕೆ ತರುತ್ತೆ ಈ ಜೀರೋ ಕ್ಯಾಲೋರಿ ಡ್ರಿಂಕ್, ಟ್ರೈಮಾಡಿ ನೋಡಿ!

* ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳಲ್ಲಿರುವ ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.

* ಮಸಾಲೆಗಳು

ನಮ್ಮ ಅಡುಗೆಮನೆಯಲ್ಲಿನ ಮಸಾಲೆಗಳು ಅಡುಗೆ ರುಚಿಯನ್ನಷ್ಟೆ ಅಲ್ಲ ಹೃದಯದ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಶುಂಠಿ, ಮೆಣಸು, ದಾಲ್ಚಿನ್ನಿ ಮತ್ತು ಲವಂಗದಂತಹ ಮಸಾಲೆಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹೃದಯಾಘಾತವನ್ನು ತಡೆಯಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯವನ್ನೂ ಸುಧಾರಿಸುತ್ತದೆ. 

* ಈರುಳ್ಳಿ

ಈರುಳ್ಳಿಯನ್ನು ಭಾರತಿಯರು ಪ್ರತಿನಿತ್ಯದ ಅಡುಗೆಯಲ್ಲಿ ಬಳಸುತ್ತಾರೆ. ಈರುಳ್ಳಿಯಲ್ಲಿರುವ ಸಲ್ಫರ್ ಮತ್ತು ಇತರ ಪೋಷಕಾಂಶಗಳು ಹೃದಯದ ಅಪಧಮನಿಗಳ ಅಡಚಣೆಯನ್ನು ತಡೆಯಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ: ಅಂಜೂರವನ್ನು ಹಾಲಿನಲ್ಲಿ ನೆನಸಿ ಬೆಳಗ್ಗೆ ತಿಂದರೆ ದೇಹಕ್ಕೆ ಸಿಗುವುದು ಇಷ್ಟೊಂದು ಪ್ರಯೋಜನ

* ಟೊಮೆಟೊ

ಟೊಮೆಟೊದಲ್ಲಿರುವ ಉರಿಯೂತ ನಿವಾರಕ ಗುಣಗಳು ಹೃದಯ ನಾಳಗಳಲ್ಲಿ ಅಡಚಣೆ ಮತ್ತು ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಟೊಮೆಟೊ ಬಹಳಷ್ಟು ಸಹಕಾರಿ.

(ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News