High Blood Pressure: ಈ ಅಭ್ಯಾಸಗಳು ನಿಮ್ಮ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತವೆ

ನೀವು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಕೂಡಲೇ ನಿಮ್ಮ ಜೀವನಶೈಲಿಗೆ ಸಂಬಂಧಿಸಿದ ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು.

Written by - Puttaraj K Alur | Last Updated : Oct 26, 2021, 04:37 PM IST
  • ಅಧಿಕ ರಕ್ತದೊತ್ತಡ ಸಮಸ್ಯೆಯು ಹೃದಯಘಾತ & ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ
  • ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು
  • ತೂಕ ಇಳಿಸಿಕೊಳ್ಳುವಿಕೆ, ಮದ್ಯಪಾನ, ಧೂಮಪಾನ ತ್ಯಜಿಸುವುದಿರಿಂದ ಸಮಸ್ಯೆಯಿಂದ ಪಾರಾಗಬಹುದು
High Blood Pressure: ಈ ಅಭ್ಯಾಸಗಳು ನಿಮ್ಮ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತವೆ   title=
ಅಧಿಕ ರಕ್ತದೊತ್ತಡ ಸಮಸ್ಯೆ

ನವದೆಹಲಿ: ಅಧಿಕ ರಕ್ತದೊತ್ತಡದಂತಹ ಸಮಸ್ಯೆ(High Blood Pressure)ಯು ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಕೂಡಲೇ ನಿಮ್ಮ ಜೀವನಶೈಲಿ(Food Habits)ಗೆ ಸಂಬಂಧಿಸಿದ ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ಇದು ಬಿಪಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಅಪಾಯವನ್ನು ನೀವು ಹೇಗೆ ಕಡಿಮೆ ಮಾಡಬಹುದು ಎಂಬುದರ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.   

ತೂಕವನ್ನು ನಿಯಂತ್ರಿಸಿ

ನೀವು ಅಧಿಕ ತೂಕ ಹೊಂದಿದ್ದರೆ ಅದನ್ನು ಇಳಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ಕೇವಲ 5 ರಿಂದ 10 ಪೌಂಡ್‌ಗಳಷ್ಟು ತೂಕವನ್ನು ಕಳೆದುಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಅಧ್ಯಯನದ ಪ್ರಕಾರ, ಬೊಜ್ಜು(Obesity) ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದೇ ಸಮಯದಲ್ಲಿತೂಕ ಕಳೆದುಕೊಳ್ಳುವುದು ನಿಮಗೆ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Sleeping : ಕುಳಿತಲ್ಲೆ ನಿದ್ದೆ ಮಾಡುವುದರಿಂದ ಬರಬಹುದು ಸಾವು! ಇದರಿಂದಾಗುವ ಸಮಸ್ಯೆ ಮತ್ತು ಪ್ರಯೋಜನಗಳೇನು? ಇಲ್ಲಿದೆ

ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ

ಸಂಸ್ಕರಿಸಿದ ಆಹಾರ(Processed Food)ವನ್ನು ಕಡಿಮೆ ಕೊಬ್ಬು ಎಂದು ಲೇಬಲ್ ಮಾಡಲಾಗಿದೆ. ಆದರೆ ಇದು ಉಪ್ಪು ಮತ್ತು ಸಕ್ಕರೆಯಲ್ಲಿ ಅಧಿಕವಾಗಿರುತ್ತದೆ. ಪ್ಯಾಕೆಟ್‌ಗಳ ಮೇಲಿನ ಲೇಬಲ್ ಅನ್ನು ಎಚ್ಚರಿಕೆಯಿಂದ ಓದಿ. ಆಹಾರ ಪ್ಯಾಕೆಟ್‌ಗಳ ಲೇಬಲ್‌ನಲ್ಲಿ ಶೇ.5ರಷ್ಟು ಅಥವಾ ಕಡಿಮೆ ಸೋಡಿಯಂ ಇದ್ದರೆ ಅದನ್ನು ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಆದರೆ ಶೇ.20ರಷ್ಟು ಅಥವಾ ಹೆಚ್ಚಿಗಿದ್ದರೆ ಅದನ್ನು ಹೆಚ್ಚು ಎಂದು ಪರಿಗಣಿಸಲಾಗುತ್ತದೆ.

ಪ್ರತಿದಿನವೂ ಡಾರ್ಕ್ ಚಾಕೊಲೇಟ್ ಸೇವಿಸಿ

ಪ್ರತಿದಿನ ಡಾರ್ಕ್ ಚಾಕೊಲೇಟ್(Dark Chocolate) ಸೇವಿಸಿ. ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ನೀವು ಸೇವಿಸುವ ಚಾಕೊಲೇಟ್ ಶೇ.60 ರಿಂದ 70ರಷ್ಟು ಕೋಕೋವನ್ನು ಹೊಂದಿರಬೇಕು. ಅಧ್ಯಯನದ ಪ್ರಕಾರ, ಪ್ರತಿದಿನ 2 ತುಂಡು ಚಾಕೊಲೇಟ್ ಸೇವಿಸುವುದು ರಕ್ತದೊತ್ತಡ ಮತ್ತು ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಾಕೊಲೇಟ್‌ನಲ್ಲಿ ಸಾಕಷ್ಟು ಪ್ರಮಾಣದ ಫ್ಲೇವನಾಯ್ಡ್‌ (Flavonoids)ಗಳಿವೆ. ಇದು ನಿಮಗೆ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: Onion Benefits : ಮುಖದ ಮೇಲಿನ ಕಲೆ, ಹೊಳಪಿಗಾಗಿ ಬಳಸಿ 1 ಈರುಳ್ಳಿ : ಇದನ್ನ ಬಳಸುವ ಸರಿಯಾದ ಮಾರ್ಗ ಇಲ್ಲಿದೆ

ಬೆಳ್ಳುಳ್ಳಿ ತಿನ್ನಿರಿ

ಪ್ರತಿದಿನ ಬೆಳ್ಳುಳ್ಳಿ(Garlic) ಸಾರವನ್ನು ತೆಗೆದುಕೊಳ್ಳಿ. ಇದು ಬಿಪಿ(BP)ಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2012ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳ್ಳುಳ್ಳಿಯಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳು ಪಡೆಯಬಹುದು ಎಂದು ತಿಳಿದುಬಂದಿದೆ. ಪ್ರತಿದಿನ ಬೆಳ್ಳುಳ್ಳಿ ಸೇವನೆಯಿಂದ ನಮ್ಮ ರಕ್ತ ಶುದ್ಧವಾಗಿ ರಕ್ತದೊತ್ತಡದಂತಹ ಸಮಸ್ಯೆಗಳು ದೂರವಾಗುತ್ತವೆ. ಇದರಿಂದ ನಾವು ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ.   

ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ  

ಕ್ಲಿನಿಕಲ್ ಮತ್ತು ಎಕ್ಸ್‌ ಪರಿಮೆಂಟಲ್ ಫಾರ್ಮಕಾಲಜಿ ಮತ್ತು ಫಿಸಿಯಾಲಜಿ (ಸಿಇಪಿಪಿ)ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆಲ್ಕೋಹಾಲ್(Alcohol)ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆಲ್ಕೋಹಾಲ್ ಸೇವಿಸಬೇಡಿ. ಧೂಮಪಾನ(Smoking)ಕೂಡ ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಬಡಿತವೂ ಹೆಚ್ಚಾಗುತ್ತದೆ. ತಂಬಾಕಿನಲ್ಲಿರುವ ರಾಸಾಯನಿಕಗಳು ನಿಮ್ಮ ರಕ್ತನಾಳದ ಗೋಡೆಗೆ ಹಾನಿ ಮಾಡುತ್ತದೆ. ಇದು ಅಪಧಮನಿಗಳ ಊತ ಮತ್ತು ಕಿರಿದಾಗುವಿಕೆಗೆ ಕಾರಣವಾಗುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

(ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸುವ ಮುನ್ನ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News