Happiness Hormones: ದೇಹದಲ್ಲಿ ಸಂತೋಷದ ಹಾರ್ಮೋನ್‌ಗಳನ್ನು ಹೆಚ್ಚಿಸುವ ಟಾಪ್ 5 ಆಹಾರಗಳಿವು!

Happiness Hormones Foods: ನಮ್ಮ ದೇಹದಲ್ಲಿರುವ ನಾಲ್ಕು ಹಾರ್ಮೋನ್‌ಗಳಿಂದಾಗಿ ನೀವು ಸಂತೋಷ/ದುಃಖವನ್ನು ಅನುಭವಿಸುತ್ತೇವೆ. ಈ ಹಾರ್ಮೋನ್‌ಗಳ ಮಟ್ಟ ದೇಹದಲ್ಲಿ ಕಡಿಮೆಯಾದಂತೆ ವ್ಯಕ್ತಿಯಲ್ಲಿ ಒತ್ತಡವಾಗಲಿ ಅಥವಾ ಸಂತೋಷ ಅನುಭವವಾಗುವುದಿಲ್ಲ.  ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂತೋಷ ಮತ್ತು ದುಃಖಕ್ಕೆ ಕಾರಣವಾಗುವ ಈ ಹಾರ್ಮೋನುಗಳು ಯಾವುವು ಮತ್ತು ಅವುಗಳನ್ನು ಸಮತೋಲನಗೊಳಿಸುವುದು ಹೇಗೆ ಎಂದು ತಿಳಿಯುವುದು ತುಂಬಾ ಮುಖ್ಯ. 

Written by - Yashaswini V | Last Updated : Feb 13, 2024, 12:57 PM IST
  • ಆಹಾರಗಳು ನಮ್ಮನ್ನು ದೈಹಿಕವಾಗಿ ಸದೃಢವಾಗಿರಿಸುವ ಮೂಲಕ ನಿಮ್ಮ ಮಾನಸಿಕ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ನಿಮಗೆ ತಿಳಿದೇ ಇದೆ.
  • ಆಸಕ್ತಿದಾಯಕ ವಿಷಯವೆಂದರೆ ನಮ್ಮ ನಮ್ಮ ಡಯಟ್ನ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಈ ಹಾರ್ಮೋನುಗಳ ಮಟ್ಟವನ್ನು ಸಮತೋಲನಗೊಳಿಸಬಹುದು.
  • ಅಂದರೆ, ನೀವು ತುಂಬಾ ಒತ್ತಡವನ್ನು ಅನುಭವಿಸುತ್ತಿದ್ದರೆ ಅಥವಾ ಮೂಡ್ ಆಫ್ ಆಗಿದ್ದರೆ, ಅದನ್ನು ಸರಿಪಡಿಸಲು ಕೆಲವು ಆಹಾರಗಳು ತುಂಬಾ ಪ್ರಯೋಜಂಕಾರಿ ಎಂದು ಸಾಬೀತುಪಡಿಸಬಹುದು.
Happiness Hormones: ದೇಹದಲ್ಲಿ ಸಂತೋಷದ ಹಾರ್ಮೋನ್‌ಗಳನ್ನು ಹೆಚ್ಚಿಸುವ ಟಾಪ್ 5 ಆಹಾರಗಳಿವು!  title=

Happiness Hormones Diet: ಈ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಂದಕ್ಕೂ ಗೂಗಲ್ನಲ್ಲಿಯೇ ಉತ್ತರ ಹುಡುಕುವುದು ಒಂದು ರೀತಿಯ ಪ್ರತೀತಿಯಾಗಿ ಬೆಳವಣಿಗೆಯಾಗುತ್ತಿದೆ. ಅಂತೆಯೇ, ನಮ್ಮಲ್ಲಿ ಹಲವರು ನಾವು ಜೀವನದಲ್ಲಿ ಸಂತೋಷವಾಗಿರುವುದು ಹೇಗೆ ಎಂಬ ಮಾರ್ಗವನ್ನು ಇಂಟರ್ನೆಟ್ ನಲ್ಲಿ ಹುಡುಕುತ್ತಾರೆ. ಆದರೆ, ವಾಸ್ತವವಾಗಿ, ಸುಖ-ದುಃಖ ಭಾವನೆಗಳೆರಡೂ ಸಹ ನಮ್ಮ ಮೆದುಳಿನ ಸ್ಥಿತಿಗಳಾಗಿವೆ. ಡೋಪಮೈನ್, ಸಿರೊಟೋನಿನ್, ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್‌ಗಳೆಂಬ ನಾಲ್ಕು ಹಾರ್ಮೋನ್‌ಗಳು ನಮ್ಮ ಸಂತೋಷ-ದುಃಖವನ್ನು ನಿಯಂತ್ರಿಸುತ್ತವೆ. 

ಆರೋಗ್ಯ ತಜ್ಞರ ಪ್ರಕಾರ, ಆಹಾರಗಳು ನಮ್ಮನ್ನು ದೈಹಿಕವಾಗಿ ಸದೃಢವಾಗಿರಿಸುವ ಮೂಲಕ ನಿಮ್ಮ ಮಾನಸಿಕ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ನಿಮಗೆ ತಿಳಿದೇ ಇದೆ. ಆಸಕ್ತಿದಾಯಕ ವಿಷಯವೆಂದರೆ ನಮ್ಮ ನಮ್ಮ ಡಯಟ್ನ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಈ ಹಾರ್ಮೋನುಗಳ ಮಟ್ಟವನ್ನು ಸಮತೋಲನಗೊಳಿಸಬಹುದು. ಅಂದರೆ, ನೀವು ತುಂಬಾ ಒತ್ತಡವನ್ನು ಅನುಭವಿಸುತ್ತಿದ್ದರೆ ಅಥವಾ ಮೂಡ್ ಆಫ್ ಆಗಿದ್ದರೆ, ಅದನ್ನು ಸರಿಪಡಿಸಲು ಕೆಲವು ಆಹಾರಗಳು ತುಂಬಾ ಪ್ರಯೋಜಂಕಾರಿ ಎಂದು ಸಾಬೀತುಪಡಿಸಬಹುದು. ಹಾಗಿದ್ದರೆ, ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್‌ಗಳನ್ನು ಹೆಚ್ಚಿಸಲು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ... 

ಹ್ಯಾಪಿ ಹಾರ್ಮೋನ್‌ಗಳನ್ನು ಹೆಚ್ಚಿಸುವ ಈ ಆಹಾರಗಳನ್ನು ನಿಮ್ಮ ಡಯಟ್ನಲ್ಲಿ ತಪ್ಪದೇ ಸೇವಿಸಿ:- 
ಮಶ್ರೂಮ್: 

ಅಣಬೆ/ಮಶ್ರೂಮ್ ನಲ್ಲಿ ವಿಟಮಿನ್ ಡಿ ಹೆರಳವಾಗಿದೆ. ಇದು ಮನಸ್ಥಿತಿಯನ್ನು ನಿಯಂತ್ರಿಸುವ ವಿಟಮಿನ್ ಆಗಿದೆ. ಇದರ ಹೊರತಾಗಿ, ಇದು  ಅದರ ಖಿನ್ನತೆ-ಶಮನಕಾರಿ ಗುಣಗಳಿಗೆ ಹೆಸರುವಾಸಿಯಾಗಿದೆ. ಮಶ್ರೂಮ್ ಸೇವನೆಯು  ಸಿರೊಟೋನಿನ್ ಸಂಶ್ಲೇಷಣೆಯ ಮಟ್ಟಕ್ಕೆ ಸಂಬಂಧಿಸಿದೆ, ಈ ಕಾರಣದಿಂದಾಗಿ ವ್ಯಕ್ತಿಯು ಸಂತೋಷದ ಭಾವನೆಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಹಾಗಾಗಿ, ನಿಮ್ಮ ಮೂಡ್ ಆಫ್ ಆಗಿದ್ದರೆ, ನಿಮ್ಮ ಡಯಟ್ನಲ್ಲಿ ತಪ್ಪದೇ ಮಶ್ರೂಮ್ ಸೇರಿಸಿ. 

ಇದನ್ನೂ ಓದಿ- Morning Walk Mistakes: ವಾಕಿಂಗ್ ಮಾಡುವಾಗ ಮಾಡುವ ಈ ತಪ್ಪುಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು!

ಆವಕಾಡೊ: 
ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆವಕಾಡೊದಲ್ಲಿ ಕಂಡು ಬರುವ ವಿಟಮಿನ್ ಬಿ3 ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು 2020 ರಲ್ಲಿ ನಡೆಸಿದ ಅಧ್ಯಯನವೊಂದರಿಂದ ತಿಳಿದುಬಂದಿದೆ. ಸಿರೊಟೋನಿನ್ ಒಂದು ಸಂತೋಷದ ಹಾರ್ಮೋನ್ ಆಗಿದ್ದು ನೀವು ನಿತ್ಯ ಸಲಾಡ್, ಸ್ಯಾಂಡ್ವಿಚ್ ಅಥವಾ ಉಪಹಾರದಲ್ಲಿ ಆವಕಾಡೊವನ್ನು ಸೇವಿಸುವುದರಿಂದ ದಿನವಿಡೀ ಸಂತೋಷವಾಗಿರಬಹುದು. 

ಡಾರ್ಕ್ ಚಾಕೊಲೇಟ್: 
ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನ್ಗಳ ಮಟ್ಟವನ್ನು ಹೆಚ್ಚಿಸುತ್ತದೆ ಎಂದು NCBI ವರದಿಯಿಂದ ತಿಳಿದುಬಂದಿದೆ.  ಡಾರ್ಕ್ ಚಾಕೋಲೇಟ್ ನಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದಲ್ಲದೆ, ಇದು ಟ್ರಿಪ್ಟೊಫಾನ್ ಅನ್ನು ಹೊಂದಿದ್ದು, ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. 

ಡ್ರೈ ಫ್ರೂಟ್ಸ್: 
ಡ್ರೈ ಫ್ರೂಟ್ಸ್ ಸೇವನೆಯೂ ಕೂಡ ನಿಮ್ಮ ಸಂತೋಷದ ಕೀಲಿ ಎಂದು ಸಾಬೀತುಪಡಿಸಬಹುದು.  ಪ್ರತಿದಿನ ಒಂದು ಹಿಡಿ ಬಾದಾಮಿ ಅಥವಾ ವಾಲ್‌ನಟ್‌ಗಳನ್ನು ತಿನ್ನುವುದು ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಕಾರಣದಿಂದಾಗಿ  ಇದು ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಮನಸ್ಥಿತಿಯನ್ನು ಕೂಡ ಸುಧಾರಿಸುತ್ತದೆ.

ಇದನ್ನೂ ಓದಿ- Vitamin B12: ಈ ವಿಟಮಿನ್ ಕೊರತೆಯು ನಿದ್ರಾಹೀನತೆಗೆ ಕಾರಣವಾಗಬಹುದು!

ಪಾಲಕ್ ಸೊಪ್ಪು: 
ಪಾಲ್ ಸೊಪ್ಪಿನಲ್ಲಿ ಫೈಬರ್ ಮತ್ತು ವಿಟಮಿನ್ ಇ ಜೊತೆಗೆ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಇದು ನಿಮ್ಮ ಜೀರ್ಣಕ್ರಿಯೆ ಮತ್ತು ಚರ್ಮವನ್ನು ಆರೋಗ್ಯವಾಗಿರಿಸುವುದರ ಜೊತೆಗೆ ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್‌ಗಳನ್ನು ಕೂಡ ಹೆಚ್ಚಿಸುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News