Cucumber Side Effects: ದಿನದ ಈ ಹೊತ್ತಿನಲ್ಲಿ ಮರೆತೂ ಕೂಡ ಸವತೆ ಕಾಯಿ ಸೇವಿಸಬೇಡಿ, ಕಾರಣ ಇಲ್ಲಿದೆ

Cucumber Side Effects: ಪ್ರತಿಯೊಂದು ಆರೋಗ್ಯಕರ ಆಹಾರ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಏಕೆಂದರೆ ಅವು ನಮ್ಮ ದೇಹಕ್ಕೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತವೆ, ಆದರೆ ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ಹೋದಲ್ಲಿ ಅವುಗಳಿಂದ ಆರೋಗ್ಯಕ್ಕೆ ಹಾನಿ ಕೂಡ ಆಗಬಹುದು.  

Written by - Nitin Tabib | Last Updated : Oct 8, 2022, 05:10 PM IST
  • ಸೌತೆಕಾಯಿಯು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ,
  • ಆದರೆ ಅದನ್ನು ಯಾವಾಗಲೂ ಹಗಲಿನ ಹೊತ್ತು ಸೇವಿಸಬೇಕು,
  • ಇದರಿಂದಾಗಿ ದೇಹವು ಅನೇಕ ಪೋಷಕಾಂಶಗಳನ್ನು ಪಡೆಯುತ್ತದೆ,
Cucumber Side Effects: ದಿನದ ಈ ಹೊತ್ತಿನಲ್ಲಿ ಮರೆತೂ ಕೂಡ ಸವತೆ ಕಾಯಿ ಸೇವಿಸಬೇಡಿ, ಕಾರಣ ಇಲ್ಲಿದೆ title=
Cucumber Side Effects

Side Effects Of Cucumber: ಸೌತೆಕಾಯಿಯನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ ಮತ್ತು ಇದು ಸಾಮಾನ್ಯವಾಗಿ ಸಲಾಡ್ ಅಥವಾ ತರಕಾರಿಯಲ್ಲಿ  ಕಂಡುಬರುತ್ತದೆ. ಇದರಲ್ಲಿ ವಿಟಾಮಿನ್ ಮತ್ತು ಮಿನರಲ್ ಗಳು ಹೇರಳ ಪ್ರಮಾಣದಲ್ಲಿವೆ, ಜೊತೆಗೆ ಇದರಲ್ಲಿ ನೀರಿನಂಶವೂ ಅಧಿಕವಾಗಿರುತ್ತದೆ, ಇದು ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ, ಆದರೆ ಅನೇಕ ಜನರು ಇದನ್ನು ತಪ್ಪಾಗಿ ಸೇವಿಸುತ್ತಾರೆ. ನಾವು ಸೌತೆಕಾಯಿಯನ್ನು ಯಾವಾಗ ತಿನ್ನಬಾರದು ಎಂಬುದನ್ನು ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ತಜ್ಞ ಡಾ. ಆಯುಷಿ ಯಾದವ್ ಹೇಳಿದ್ದಾರೆ.

ದಿನದ ಈ ಸಮಯದಲ್ಲಿ ಸೌತೆಕಾಯಿ ತಿನ್ನಬೇಡಿ
ಡಾ.ಆಯುಷಿ ಪ್ರಕಾರ, ಸೌತೆಕಾಯಿಯು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ, ಆದರೆ ಅದನ್ನು ಯಾವಾಗಲೂ ಹಗಲಿನ ಹೊತ್ತು ಸೇವಿಸಬೇಕು, ಇದರಿಂದಾಗಿ ದೇಹವು ಅನೇಕ ಪೋಷಕಾಂಶಗಳನ್ನು ಪಡೆಯುತ್ತದೆ, ಆದರೆ ನೀವು ರಾತ್ರಿಯಲ್ಲಿ ಸೇವಿಸಿದರೆ, ಇದು ಆರೋಗ್ಯಕ್ಕೆ ಲಾಭ ಕೊಡುವ ಬದಲು ಹಾನಿಯನ್ನೇ ಉಂಟುಮಾಡುತ್ತದೆ.

ರಾತ್ರಿಯ ಹೊತ್ತು ಸೌತೆಕಾಯಿಯನ್ನು ಏಕೆ ತಿನ್ನಬಾರದು?

1. ಜೀರ್ಣಕ್ರಿಯೆಯ ಮೇಲೆ ಪರಿಣಾಮ
ಸೌತೆಕಾಯಿಯಲ್ಲಿ ಕುಕುರ್ಬಿಟಾಸಿನ್ ಇರುತ್ತದೆ, ಇದು ನಿಮ್ಮ ಜೀರ್ಣಕ್ರಿಯೆಯು ಬಲವಾಗಿದ್ದಾಗ ಮಾತ್ರ ಜೀರ್ಣವಾಗುತ್ತದೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತದೆ. ವಾಸ್ತವದಲ್ಲಿ, ರಾತ್ರಿ ಹೊತ್ತು ಸೌತೆಕಾಯಿಯನ್ನು ತಿನ್ನುವುದರಿಂದ, ಹೊಟ್ಟೆಯು ಭಾರವಾಗಲು ಪ್ರಾರಂಭಿಸುತ್ತದೆ, ನಂತರ ನೀವು ಮಲಬದ್ಧತೆ, ಅಜೀರ್ಣ ಅಥವಾ ಉಬ್ಬುವಿಕೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ದಿನದ ಅವಧಿಯಲ್ಲಿ ಮಾತ್ರ ಸೌತೆಕಾಯಿಗಳನ್ನು ಸೇವಿಸಿ.

2. ನಿದ್ರೆಯ ಮೇಲೆ ಪರಿಣಾಮಗಳು
ರಾತ್ರಿ ಸೌತೆಕಾಯಿ ತಿಂದರೆ ನೆಮ್ಮದಿಯ ನಿದ್ದೆ ಬರುವುದು ಕಷ್ಟ, ಏಕೆಂದರೆ ಹೊಟ್ಟೆ ಭಾರವಾಗಿರುವುದರಿಂದ ಮಲಗಲು ಕಷ್ಟವಾಗುತ್ತದೆ, ಇದರ ಹೊರತಾಗಿ ಜೀರ್ಣಕ್ರಿಯೆ ಕೆಟ್ಟರೆ ಗ್ಯಾಸ್‌ನಿಂದಾಗಿ ನಿದ್ರೆ ಹಾಳಾಗುತ್ತದೆ. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ರಾತ್ರಿಯಲ್ಲಿ ನೀವು ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ, ಇದು ನಿಮ್ಮ ನಿದ್ರೆಗೆ ಭಂಗ ತರುತ್ತದೆ.

ದಿನದ ಅವಧಿಯಲ್ಲಿ  ಸೌತೆಕಾಯಿಯನ್ನು ಸೇವಿಸಿ
ಹೆಚ್ಚಿನ ಆರೋಗ್ಯ ತಜ್ಞರು ಸೌತೆಕಾಯಿಯನ್ನು ದಿನದ ಅವಧಿಯಲ್ಲಿ ತಿನ್ನಲು ಶಿಫಾರಸು ಮಾಡುತ್ತಾರೆ, ಏಕೆಂದರೆ ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಸೌತೆಕಾಯಿಯ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಲ್ಲಿರುವ ಶೇ.95 ನೀರಿನ ಅಂಶ ದೇಹವನ್ನು ತೆವದಿಂದ ಇಡುತ್ತದೆ. ಇದಲ್ಲದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಬಲವಾದ ಮೂಳೆಗಳಂತಹ ಪ್ರಯೋಜನಗಳು ಸಹ ಈ ತರಕಾರಿ ಹೊಂದಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News