ಸುಪ್ರೀಂ ಮೆಟ್ಟಿಲೇರಿದ ʼಮಹಾʼರಾಜಕೀಯ: ಶಿಂಧೆ ಬಣದಿಂದ ವಾದ ಮಂಡನೆ

ಇನ್ನು ಏಕನಾಥ್ ಶಿಂಧೆ ಬಣದ ಪರವಾಗಿ ವಕೀಲ ನೀರಜ್ ಕಿಶನ್ ಕೌಲ್ ವಾದ ಮಂಡನೆ ಮಾಡಿದ್ದಾರೆ.  "ಗುವಾಹಟಿಯಿಂದ ಮೃತ ದೇಹಗಳು ಹಿಂತಿರುಗುತ್ತವೆ" ಎಂದು ಸಂಜಯ್‌ ರಾವತ್‌ ಹೇಳುತ್ತಿದ್ದಾರೆ ಎಂದು ಕೌಲ್ ಕೋರ್ಟ್‌ಗೆ ತಿಳಿಸಿದ್ದಾರೆ. 

Written by - Bhavishya Shetty | Last Updated : Jun 27, 2022, 03:02 PM IST
  • ಸರ್ವೋಚ್ಛ ಕೋರ್ಟ್‌ ಮೆಟ್ಟಿಲೇರಿದ ಶಿಂಧೆ ಬಣ
  • ಗುವಾಹಟಿಯಲ್ಲಿ ನೆಲೆಸಿರುವ ಶಾಸಕರಿಗೆ ಬೆದರಿಕೆ ಹಾಕಲಾಗುತ್ತಿದೆ
  • ಏಕನಾಥ್ ಶಿಂಧೆ ಬಣ ನ್ಯಾಯಾಲಯದಲ್ಲಿ ಆರೋಪಿಸಿದೆ
ಸುಪ್ರೀಂ ಮೆಟ್ಟಿಲೇರಿದ ʼಮಹಾʼರಾಜಕೀಯ: ಶಿಂಧೆ ಬಣದಿಂದ ವಾದ ಮಂಡನೆ title=
ED summon

ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ಧತೆ ದಿನೇ ದಿನೇ ತಾರಕಕ್ಕೆ ಏರುತ್ತಿದೆ. ಸದ್ಯ 40 ಮಂದಿ ಶಾಸಕರು ಬಂಡಾಯ ಎದ್ದು, ಸರ್ಕಾರದ ವಿರುದ್ಧ ತಮ್ಮ ನಿಲುವನ್ನು ಪ್ರದರ್ಶಿಸಿದ್ದಾರೆ. ಇದೀಗ ಈ ಪ್ರಕರಣ ದೇಶದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದು, ಗುವಾಹಟಿಯಲ್ಲಿ ನೆಲೆಸಿರುವ ಶಾಸಕರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಏಕನಾಥ್ ಶಿಂಧೆ ಬಣ ನ್ಯಾಯಾಲಯದಲ್ಲಿ ಆರೋಪಿಸಿದೆ. 

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸಂಜಯ್‌ ರಾವತ್‌ಗೆ ಸಮನ್ಸ್‌ ನೀಡಿದ ಇಡಿ!

ಮಹಾರಾಷ್ಟ್ರದ ಡೆಪ್ಯುಟಿ ಸ್ಪೀಕರ್ ಅವರು ಎಲ್ಲಾ ಬಂಡಾಯ ಶಾಸಕರ ವಿರುದ್ಧ ಅನರ್ಹತೆ ನೋಟಿಸ್ ನೀಡಿದ್ದಾರೆ. ಇದರ ವಿರುದ್ಧ ಏಕನಾಥ್ ಶಿಂಧೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಶಿಂಧೆ ಬದಲಿಗೆ ಅಜಯ್ ಚೌಧರಿ ಅವರನ್ನು ಸದನದಲ್ಲಿ ಶಿವಸೇನೆಯ ಶಾಸಕಾಂಗ ನಾಯಕರನ್ನಾಗಿ ನೇಮಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಇನ್ನು ಏಕನಾಥ್ ಶಿಂಧೆ ಬಣದ ಪರವಾಗಿ ವಕೀಲ ನೀರಜ್ ಕಿಶನ್ ಕೌಲ್ ವಾದ ಮಂಡನೆ ಮಾಡಿದ್ದಾರೆ.  "ಗುವಾಹಟಿಯಿಂದ ಮೃತ ದೇಹಗಳು ಹಿಂತಿರುಗುತ್ತವೆ" ಎಂದು ಸಂಜಯ್‌ ರಾವತ್‌ ಹೇಳುತ್ತಿದ್ದಾರೆ ಎಂದು ಕೌಲ್ ಕೋರ್ಟ್‌ಗೆ ತಿಳಿಸಿದ್ದಾರೆ. 

"ಮುಂಬೈನಲ್ಲಿ ಹಕ್ಕುಗಳನ್ನು ಚಲಾಯಿಸಲು ಪರಿಸರ ಪೂರಕವಾಗಿಲ್ಲ. ಈ ಶಾಸಕರಿಗೆ ಬೆದರಿಕೆ ಹಾಕಲಾಗಿದೆ. 40 ಶಾಸಕರ ಶವಗಳು ವಾಪಸ್ ಬರುತ್ತವೆ ಎಂದು ಹೇಳಿದ್ದಾರೆ" ಎಂದು ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಹೇಳಿದ್ದಾರೆ.

ಇದನ್ನೂ ಓದಿ: ಶನಿಯ ಹಿಮ್ಮುಖ ಚಲನೆಯ ಬಳಿಕ ಈ ದಿನದಿಂದ ಗುರುವಿನ ವಕ್ರನಡೆ ಆರಂಭ, ಈ ರಾಶಿಗಳ ಜನರ ಭಾಗ್ಯ ಹೊಳೆಯಲಿದೆ

ಇದೇ ವೇಳೆ ಮಾತನಾಡಿದ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ, "ಇದು ಬಂಡಾಯ ಅಲ್ಲ, ಮಹಾರಾಷ್ಟ್ರದ ಜನತೆಗೆ ಅಗತ್ಯವಿರುವ ವಿಷಯ. ಸಂಜಯ್ ರಾವತ್ ಗುವಾಹಟಿಯಿಂದ ಮೃತ ದೇಹವನ್ನು ತರುವುದರ ಅರ್ಥವೇನು? ಇದು ಮಹಾರಾಷ್ಟ್ರದ ಸಂಸ್ಕೃತಿಯಲ್ಲ. ಅವರು ಬೇರೆಯವರಿಗೆ ಬೇಕಾದರೆ ಬೆದರಿಕೆ ಹಾಕಲಿ, ಆದರೆ ನಮಗೆ ಅಲ್ಲ" ಎಂದು ಖಡಕ್‌ ಆಗಿ ಹೇಳಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News