ನೀವೂ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ನಿಂದ ತೊಂದರೆ ಅನುಭವಿಸುತ್ತಿದ್ದೀರಾ?

ಕ್ರೆಡಿಟ್ ಕಾರ್ಡ್ ಬಳಸುವ ಮೊದಲು, ನೀವು ಸಮಯಕ್ಕೆ ಪಾವತಿಸಲು ಸಾಧ್ಯವಾಗುತ್ತದೆ ಅಥವಾ ಇಲ್ಲವೇ ಎಂದು ಯೋಚಿಸಿ. ಸಮಯಕ್ಕೆ ಸರಿಯಾಗಿ ಪಾವತಿಸದ ಕಾರಣ ನೀವು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಮರೆಯದಿರಿ.

Last Updated : Jan 5, 2020, 05:25 PM IST
ನೀವೂ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ನಿಂದ ತೊಂದರೆ ಅನುಭವಿಸುತ್ತಿದ್ದೀರಾ? title=

ಇಂದಿನ ಕಾಲದಲ್ಲಿ ಹೆಚ್ಚಿನ ಜನರು ಕ್ರೆಡಿಟ್ ಕಾರ್ಡ್ (ಕ್ರೆಡಿಟ್ ಕಾರ್ಡ್) ಅನ್ನು ಬಳಸುತ್ತಾರೆ, ಆದರೆ ಅನೇಕ ಜನರು ಕಾರ್ಡ್ ನಿಂದ ಆಗುತ್ತಿರುವ ವೆಚ್ಚಗಳು ಮತ್ತು ಬಿಲ್‌ ಗಳಿಂದ ತೊಂದರೆ ಅನುಭವಿಸುತ್ತಾರೆ. ಕ್ರೆಡಿಟ್ ಕಾರ್ಡ್ ಪಾವತಿಗಳ ಖರ್ಚಿನಿಂದ ನೀವು ಕೂಡ ತೊಂದರೆಗೀಡಾಗಿದ್ದರೆ, ತಲೆಕೆಡಿಸಿಕೊಳ್ಳಬೇಡಿ. ಏಕೆಂದರೆ ಇಂದು ನಾವು ನಿಮಗೆ ಕೆಲ ಟಿಪ್ಸ್ ಗಳನ್ನು ನೀಡುತ್ತಿದ್ದು, ಇವುಗಳ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿ ಕೊಳ್ಳಬಹುದಾಗಿದೆ.

ಸಮಯ ಇರುವಂತೆ ನಿಮ್ಮ ಬಿಲ್ ಪಾವತಿಸಿ
ಕ್ರೆಡಿಟ್ ಕಾರ್ಡ್ ವೆಚ್ಚವನ್ನು ಕಡಿಮೆ ಮಾಡಲು, ನೀವು ಮೊದಲು ನಿಮ್ಮ ಬಿಲ್ ಅನ್ನು ಸಮಯಕ್ಕೆ ಪಾವತಿಸಬೇಕು. ನಿಮ್ಮ ಕಾರ್ಡ್ ಬಿಲ್ ಅನ್ನು ಸಮಯದ ಮಿತಿಯೊಳಗೆ ಪಾವತಿಸಿದರೆ ನೀವು ಯಾವುದೇ ರೀತಿಯ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ. ಬಳಕೆದಾರರು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಲು ಮರೆತುಬಿಡುತ್ತಾರೆ ಮತ್ತು ನಂತರ ಅದನ್ನು ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ. ಪಾವತಿ ರಿಮಾಯಿಂಡರ್ ಅನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳಲು ನಿಮ್ಮನ್ನು ನಿರ್ಬಂಧಿಸುತ್ತದೆ. ನೀವು ಪಾವತಿಯನ್ನು ತಪ್ಪಿಸಿಕೊಂಡರೆ, ಭವಿಷ್ಯದಲ್ಲಿ ನೀವು ಡೀಫಾಲ್ಟರ್ ಆಗುವ ಸಾಧ್ಯತೆ ಹೆಚ್ಚು.

ನಗದು ಹಣ ಡ್ರಾ ಮಾಡಬೇಡಿ
ಕ್ರೆಡಿಟ್ ಕಾರ್ಡ್‌ಗಳಿಂದ ನಗದು ಹಣವನ್ನು ಎಂದಿಗೂ ಡ್ರಾ ಮಾಡಬೇಡಿ. ನೀವು ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಡ್ರಾ ಮಾಡಿದರೆ , ಅದಕ್ಕೆ ಪ್ರತಿಯಾಗಿ ನೀವು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಅತೀ ಅವಶ್ಯಕತೆ ಇರುವಾಗ ಮಾತ್ರ ಕಾರ್ಡ್ ಬಳಸಿ
ಬಿಲ್ ಪಾವತಿಸಲು 45 ದಿನಗಳ ಹೆಚ್ಚುವರಿ ಸಮಯ ಕ್ರೆಡಿಟ್ ಕಾರ್ಡ್‌ಗಳಲ್ಲಿ ಲಭ್ಯವಿದೆ, ಕೆಲವೊಮ್ಮೆ ಈ ಸಮಯವು ನಿಮ್ಮ ನಷ್ಟಕ್ಕೂ ಕಾರಣವಾಗಬಹುದು. ಆದ್ದರಿಂದ ನೀವು ಇದನ್ನು ಸಹ ತಪ್ಪಿಸಬೇಕು. ಕ್ರೆಡಿಟ್ ಕಾರ್ಡ್‌ನ ಒಟ್ಟು ಮೊತ್ತವನ್ನು ಪಾವತಿಸಲು ನಿಮಗೆ ಸಾಧ್ಯವಾಗದಿದ್ದರೆ, ಅದರಿಂದ ಖರೀದಿಯನ್ನು ಕಡಿಮೆ ಮಾಡಿ.

ಕ್ರೆಡಿಟ್ ಕಾರ್ಡ್ ಮೇಲೆ ಸಿಗುವ ಸಾಲದಿಂದ ತಪ್ಪಿಸಿಕೊಳ್ಳಿ
ಇದಲ್ಲದೆ, ನೀವು ಕ್ರೆಡಿಟ್ ಕಾರ್ಡ್‌ನ ಮೇಲೆ ಸಿಗುವ ಸಾಲದಿಂದ ಕೂಡ ತಪ್ಪಿಸಿಕೊಳ್ಳಬೇಕು. ಈ ಸಾಲದ ಕಾರಣದಿಂದಾಗಿ ಅನೇಕ ಬಾರಿ ಗ್ರಾಹಕರು ಇಕ್ಕಟ್ಟಿಗೆ ಸಿಲುಕುತ್ತಾರೆ. ಒಂದು ವೇಳೆ, ನೀವು ಸಾಲವನ್ನು ತೆಗೆದುಕೊಂಡಿದ್ದರೆ, ಆ ಸಾಲವನ್ನು ಸಮಯ ಇರುವಂತೆ ಪಾವತಿಸಿ.

ಬಳಸುವ ಮೊದಲು ನಿಮ್ಮ ಸಾಧ್ಯ-ಅಸಾಧ್ಯತೆಗಳ ಬಗ್ಗೆ ಯೋಚಿಸಿ
ಇದಲ್ಲದೆ, ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು ತುಂಬಾ ಕಡಿಮೆ ಬಳಕೆ ಮಾಡಬೇಕು. ಅನೇಕ ಬಾರಿ ಕ್ರೆಡಿಟ್ ಕಾರ್ಡ್ ವ್ಯಸನವು ಗ್ರಾಹಕರನ್ನು ತೊಂದರೆಗೆ ಸಿಲುಕಿಸುತ್ತದೆ. ಆದ್ದರಿಂದ ಅದನ್ನು ಬಳಸುವ ಮೊದಲು, ನೀವು ಸಮಯಕ್ಕೆ ಪಾವತಿಸಲು ಸಾಧ್ಯವಾಗುತ್ತದೆ ಅಥವಾ ಇಲ್ಲವೇ ಎಂದು ಯೋಚಿಸಿ. ಸಮಯಕ್ಕೆ ಸರಿಯಾಗಿ ಪಾವತಿಸದ ಕಾರಣ ನೀವು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಮರೆಯದಿರಿ.

Trending News