Modi Cabinet Decision: ಪ್ರಧಾನಿ ಪೋಷಣ ಶಕ್ತಿ ನಿರ್ಮಾಣ ಯೋಜನೆಗೆ ಅನುಮೋದನೆ, ಎರಡು ರೈಲು ಮಾರ್ಗಗಳ ಡಬಲಿಂಗೂ ಅನುಮೋದನೆ

Modi Cabinet Decision: ಕೇಂದ್ರ ಕ್ಯಾಬಿನೆಟ್ (Union Cabinet) ಸಭೆಯ ಬಳಿಕ ಮಾತನಾಡಿರುವ ಕೆನರಾ ಸಚಿವ ಅನುರಾಗ್ ಠಾಕೂರ್, ನಿಮುಚ್-ರತ್ಲಾಂ ಹಾಗೂ ರಾಜಕೊಟ್-ಕಲಾನಾಸ್ ರೇಲ್ವೆ ಮಾರ್ಗಗಳ ಡಬ್ಲಿಂಗ್ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.

Written by - Nitin Tabib | Last Updated : Sep 29, 2021, 04:38 PM IST
  • ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯ.
  • ನಿಮುಚ್-ರತ್ಲಾಂ ಹಾಗೂ ರಾಜಕೊಟ್-ಕಲಾನಾಸ್ ರೇಲ್ವೆ ಮಾರ್ಗಗಳ ಡಬ್ಲಿಂಗ್ ಕಾಮಗಾರಿಗೆ ಅನುಮೋದನೆ.
  • ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು ಸಹ ಅನುಮೋದಿಸಲಾಗಿದೆ.
Modi Cabinet Decision: ಪ್ರಧಾನಿ ಪೋಷಣ ಶಕ್ತಿ ನಿರ್ಮಾಣ ಯೋಜನೆಗೆ ಅನುಮೋದನೆ, ಎರಡು ರೈಲು ಮಾರ್ಗಗಳ ಡಬಲಿಂಗೂ ಅನುಮೋದನೆ title=
Modi Cabinet Meeting (Photo Courtesy - ANI)

Modi Cabinet Decision: ಕೇಂದ್ರದ ನರೇಂದ್ರ ಮೋದಿ ಸರ್ಕಾರ (PM Narendra Modi Government) ಎರಡು ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ಇಂದು ನಡೆದಿದೆ. ಈ ಸಭೆಯ ನಂತರ, ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ರತ್ಲಾಮ್ ರೈಲು ಮಾರ್ಗ ಡಬ್ಲಿಂಗ್ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದು 133 ಕಿಮೀ ಉದ್ದದ ಮಾರ್ಗವಾಗಿದೆ. ನೀಮುಚ್ ಮತ್ತು ರತ್ಲಾಮ್ ಎರಡೂ ಲೇನ್ ಗಳು ಇನ್ನೂ ಒಂದೇ ಸಾಲಿನಲ್ಲಿವೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಅವುಗಳ  ಡಬ್ಲಿಂಗ್ ಕಾಮಗಾರಿಗೆ ಅನುಮೋದಿಸಲಾಗಿದೆ ಎಂದಿದ್ದಾರೆ. ಚಿತ್ತೂರು ಮತ್ತು ಸುತ್ತಮುತ್ತಲಿನ ಜನರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಇನ್ನೊಂದೆಡೆ ಗುಜರಾತ್‌ನ ರಾಜಕೋಟ್ ಮತ್ತು ಕಲಾನಾಸ್‌ ನಡುವಿನ 111 ಕಿಮೀ ಉದ್ದದ ಮಾರ್ಗ ಡಬ್ಲಿಂಗ್ ಗೂ ಕೂಡ ಅನುಮೋದನೆ ನೀಡಲಾಗಿದೆ. ಮೂರು ವರ್ಷಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಠಾಕೂರ್ ಮಾಹಿತಿ ನೀಡಿದ್ದಾರೆ.

'PM Poshan Shakti Nirman Yojana'ಗೆ ಅನುಮೋದನೆ
ಇದಲ್ಲದೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (PM POSHAN Scheme) ಸಹ ಅನುಮೋದಿಸಲಾಗಿದೆ. ಇದರ ಅಡಿಯಲ್ಲಿ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವವರಿಗೆ ಊಟವನ್ನು ನೀಡಲಾಗುವುದು. ಇದಕ್ಕಾಗಿ ಒಂದು ಲಕ್ಷ ಕೋಟಿಗೂ ಹೆಚ್ಚು ಹಣ ವೆಚ್ಚವಾಗಲಿದೆ. ಮಧ್ಯಾಹ್ನದ ಊಟದ ಯೋಜನೆಯನ್ನು ವಿಸ್ತರಿಸಲು ಮೋದಿ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯು ಇದೀಗ ಮೊದಲ ದರ್ಜೆಯ ಬದಲು ನರ್ಸರಿಯಿಂದ ಆರಂಭವಾಗಿದೆ. ಇದಕ್ಕೆ 'ಪಿಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆ' ಎಂದು ಮರುನಾಮಕರಣ ಮಾಡಲಾಗಿದೆ. ಈ ಯೋಜನೆಯ ಅಡಿ ಪೌಷ್ಠಿಕಾಂಶಕ್ಕೆ ಹೆಚ್ಚು ಒತ್ತು ನೀಡಲಾಗುವುದು. ನರ್ಸರಿಯಿಂದ VIII ವರೆಗಿನ ಮಕ್ಕಳಿಗೆ ಈ ಹೊಸ ಯೋಜನೆ ಇರಲಿದೆ.

ಇದನ್ನೂ ಓದಿ-Uri ಮಾದರಿಯ ದೊಡ್ಡ ಕೃತ್ಯಕ್ಕೆ ಸಂಚು ರೂಪಿಸಿದ್ದರು ಉಗ್ರರು, ವಿಡಿಯೋ ಬಿಡುಗಡೆ ಮಾಡಿದ ಸೇನೆ

ಇದನ್ನೂ ಓದಿ-Benglauru: ಬೆಂಗಳೂರಿನ ಬೋರ್ಡಿಂಗ್ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್

ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿರುವ ಕೇಂದ್ರ ಸಚಿವ ಪಿಯೂಶ್ ಗೋಯೆಲ್ (Piyush Goyal), ಸೆಪ್ಟೆಂಬರ್ 21 ರವರೆಗೆ (ಏಪ್ರಿಲ್ 1 ರಿಂದ ಆರಂಭಗೊಂಡು) 185 ಬಿಲಿಯನ್ ಡಾಲರ್ ಮೊತ್ತದ ರಫ್ತು ಪ್ರಕ್ರಿಯೆ ನಡೆದಿದ್ದು, ಇದೊಂದು ದಾಖಲೆಯಾಗಿದೆ ಎಂದಿದ್ದಾರೆ. "ಚೀನಾದ ಸೇಬಿನ ಆಮದಿನ ಮೇಲೆ ಶುಲ್ಕ ಕಮ್ಮಿ ಮಾಡಲಾಗಿದೆ ಎಂಬ ವದಂತಿಗಳಿವೆ. ಆದರೆ ಈ ರೀತಿಯ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ ಮತ್ತು ಈ ಕುರಿತಾದ ವರದಿಗಳು ಸಂಪೂರ್ಣ ಆಧಾರರಹಿತವಾಗಿವೆ. ಕೆಲ ಜನರ ಬಳಿ ಕೇವಲ ವದಂತಿಗಳನ್ನು ಹಬ್ಬಿಸುವ ಕೆಲಸ ಮಾತ್ರ ಉಳಿದಿದೆ ಎಂಬಂತೆ ಭಾಸವಾಗುತ್ತಿದೆ" ಎಂದು ಗೋಯೆಲ್ ಹೇಳಿದ್ದಾರೆ.

ಇದನ್ನೂ ಓದಿ-ಪಂಜಾಬ್ ಕಾಂಗ್ರೆಸ್ ಗೆ ಬಿಗ್ ಶಾಕ್!, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News