ಟೇಕಾಫ್ ಆಗುವಾಗಲೇ ಅಪಘಾತಕ್ಕೀಡಾದ ಖಾಸಗಿ ಹೆಲಿಕಾಪ್ಟರ್, ಎಲ್ಲಾ ಪ್ರಯಾಣಿಕರು ಸೇಫ್

ಯುಟೈರ್ ಇಂಡಿಯಾ ಎಂಬ ಖಾಸಗಿ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಅಪಘಾತದಿಂದಾಗಿ ತೀವ್ರ ಹಾನಿಗೊಳಗಾಗಿದೆ. 

Last Updated : Sep 23, 2019, 02:26 PM IST
ಟೇಕಾಫ್ ಆಗುವಾಗಲೇ ಅಪಘಾತಕ್ಕೀಡಾದ ಖಾಸಗಿ ಹೆಲಿಕಾಪ್ಟರ್, ಎಲ್ಲಾ ಪ್ರಯಾಣಿಕರು ಸೇಫ್ title=

ಕೇದಾರನಾಥ: ಉತ್ತರಾಖಂಡದ ಕೇದಾರನಾಥ ಹೆಲಿಪ್ಯಾಡ್ ನಿಂದ ಟೇಕ್ ಆಫ್ ಆಗುತ್ತಿದ್ದ ಆರು ಪ್ರಯಾಣಿಕರಿದ್ದ ಖಾಸಗಿ ಹೆಲಿಕಾಪ್ಟರ್ ಸೋಮವಾರ ಬೆಳಿಗ್ಗೆ ಅಪಘಾತಕ್ಕೀಡಾಗಿದೆ.  

ಇಂದು ಬೆಳಿಗ್ಗೆ 11.23ರಲ್ಲಿ ಅಪಘಾತ ಸಂಭವಿಸಿದ್ದು, ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ.

ಯುಟೈರ್ ಇಂಡಿಯಾ ಎಂಬ ಖಾಸಗಿ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಅಪಘಾತದಿಂದಾಗಿ ತೀವ್ರ ಹಾನಿಗೊಳಗಾಗಿದೆ. 

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Trending News