ಮತದಾನ ಜಾಗೃತಿ ಕಾರ್ಯಕ್ರಮ : ರಾಷ್ಟ್ರ ಮುನ್ನೆಡಸಲು ಮತ ಚಲಾಯಿಸಿ, ಚುನಾವಣಾ ರಾಯಭಾರಿ ನಟ ರಮೇಶ್ ಅರವಿಂದ್

ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ  ನಟ ರಮೇಶ್ ಅರವಿಂದ್ ಮಾತನಾಡಿದರು.   

Written by - Zee Kannada News Desk | Last Updated : Apr 8, 2024, 10:00 PM IST
  • ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಮಾತನಾಡಿದರು.
  • ರಾಷ್ಟ್ರವನ್ನು ಮುನ್ನಡೆಸಲು ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ಚುನಾವಣಾ ರಾಯಭಾರಿ ರಮೇಶ್ ಅರವಿಂದ್ ತಿಳಿಸಿದರು.
  • ಇದೇ ಸಂದರ್ಭದಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡುತ್ತೇನೆ ಎಂದು ಪ್ರತಿಜ್ಞಾವಿಧಿಯನ್ನ ಸ್ವೀಕರಿಸಿದರು.
ಮತದಾನ ಜಾಗೃತಿ ಕಾರ್ಯಕ್ರಮ : ರಾಷ್ಟ್ರ ಮುನ್ನೆಡಸಲು ಮತ ಚಲಾಯಿಸಿ, ಚುನಾವಣಾ ರಾಯಭಾರಿ ನಟ ರಮೇಶ್ ಅರವಿಂದ್ title=

ಚುನಾವಣೆ ಸಂದರ್ಭದಲ್ಲಿ ಮತದಾರರು ವಿವಿಧ ಅಮೀಷಗಳಿಗೆ ಒಳಗಾಗುವುದು ಸಾಮಾನ್ಯವೇ ಆಗಿಬಿಟ್ಟಿದೆ ಆದರೆ ಯಾವುದೇ ಅಮಿಷಗಳಿಗೆ ಒಳಗಾಗದೆ ನಿಮ್ಮ ನಿಮ್ಮ ಇಚ್ಛೆಗೆ ಅನುಸಾರವಾಗಿ ಮತದಾನ ಮಾಡಬೇಕು. 

ಇದನ್ನು ಓದಿ : KKR Vs CSK : ಚೆನ್ನೈಗೆ 138 ರನ್ ಗಳ ಟಾರ್ಗೆಟ್ ಕೆಕೆಆರ್, ಮತ್ತೆ 4ನೇ ಗೆಲುವನ್ನು ಸಂಭ್ರಮಿಸುತ್ತಾ ಕೆಕೆಆರ್

ನಮ್ಮ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಮತ್ತು ರಾಷ್ಟ್ರವನ್ನು ಮುನ್ನಡೆಸಲು ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ಚುನಾವಣಾ ರಾಯಭಾರಿ ರಮೇಶ್ ಅರವಿಂದ್ ತಿಳಿಸಿದರು.

ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್ ಮೊದಲು ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು, ಇಲ್ಲಿಯವರೆಗಿನ ಅವರ ಕಾರ್ಯ ವೈಖರಿ, ಅವರ ಹಿನ್ನೆಲೆ ಹೇಗಿದೆ, ಅವರು ಹಿಂದೆ ಅಭ್ಯರ್ಥಿಯಾಗಿದ್ದಾಗ ತಾವು ನೀಡಿದಂತಹ ಭರವಸೆಗಳನ್ನ ಎಷ್ಟರಮಟ್ಟಿಗೆ ಈಡೇರಿಸಿದ್ದಾರೆ ಎನ್ನುವ ಕುರಿತು ಪರಿಶೀಲನೆ ಮಾಡಿಕೊಳ್ಳಬೇಕು. 

ತಾವು ಮಾಡುವ ಮತದಾನ ಎಷ್ಟರಮಟ್ಟಿಗೆ ದೇಶದ ಏಳಿಗೆಯಲ್ಲಿ ಪಾತ್ರವಾಗುತ್ತದೆ ಆ ನಿಟ್ಟಿನಲ್ಲಿ ಯಾರಿಗೆ ಮತದಾನ ಮಾಡಬೇಕು ಎನ್ನುವುದನ್ನು ಆಲೋಚಿಸಿ ಮತದಾನ ಮಾಡಬೇಕು ಮತ್ತು ಯಾರ ಮಾತನ್ನು ಕೇಳಿ ಮತದಾನವನ್ನ ಮಾಡಬಾರದು ಎಂದು ಕಿವಿ ಮಾತನ್ನ ಹೇಳಿದರು. 

ಇದೇ ಸಂದರ್ಭದಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡುತ್ತೇನೆ ಎಂದು ಪ್ರತಿಜ್ಞಾವಿಧಿಯನ್ನ ಸ್ವೀಕರಿಸಿದರು. 

ಇದನ್ನು ಓದಿ : Saptami Gowda : ಬಿಸ್ನೆಸ್ ಎಕ್ಸ್ಲೆನ್ಸ್ ಅವಾರ್ಡ್ಸ್ ನಲ್ಲಿ ಸೋನು ಸೂದ್ ಜೊತೆ "ಯುವ" ನಟಿ 

ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿ ರಮಾಮಣಿ, ಬಿಎಂಎಸ್ ಕಾಲೇಜಿನ ಪ್ರಾಚಾರ್ಯೆ ವಸುಂಧರಾ ಉಪಸಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News