ತೃಣಮೂಲ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಯಶವಂತ್ ಸಿನ್ಹಾ..!

ಇತ್ತೀಚೆಗಷ್ಟೇ ರಾಷ್ಟ್ರಪತಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದ ಯಶವಂತ್ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.ಈ ವಿಷಯವನ್ನು ಸ್ವತಃ ಸಿಎಂ ಮಮತಾ ಬ್ಯಾನರ್ಜೀ ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Jul 24, 2022, 07:49 PM IST
  • ಫಲಿತಾಂಶ ಪ್ರಕಟವಾದ ನಂತರ ನಾನು ಈ ಬಗ್ಗೆ ಯೋಚಿಸಿದೆ.
  • ಯಾವುದೇ ರಾಜಕೀಯ ಪಕ್ಷವನ್ನು ಸೇರದಿರಲು ನಿರ್ಧರಿಸಿದೆ.
ತೃಣಮೂಲ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಯಶವಂತ್ ಸಿನ್ಹಾ..! title=

ನವದೆಹಲಿ: ಇತ್ತೀಚೆಗಷ್ಟೇ ರಾಷ್ಟ್ರಪತಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದ ಯಶವಂತ್ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.ಈ ವಿಷಯವನ್ನು ಸ್ವತಃ ಸಿಎಂ ಮಮತಾ ಬ್ಯಾನರ್ಜೀ ಹಂಚಿಕೊಂಡಿದ್ದಾರೆ.

"ಫಲಿತಾಂಶ ಪ್ರಕಟವಾದ ನಂತರ ನಾನು ಈ ಬಗ್ಗೆ ಯೋಚಿಸಿದೆ. ಯಾವುದೇ ರಾಜಕೀಯ ಪಕ್ಷವನ್ನು ಸೇರದಿರಲು ನಿರ್ಧರಿಸಿದೆ.ರಾಜಕೀಯ ಪಕ್ಷವನ್ನು ಸೇರದೆ ಜನರೊಂದಿಗೆ ಇರುತ್ತೇನೆ" ಎಂದು ಹೇಳಿದರು. ಯಶವಂತ್ ಸಿನ್ಹಾ ಅವರು ತಾವು ಸ್ಥಾಪಿಸಿದ ರಾಷ್ಟ್ರೀಯ ಮಂಚ್‌ನಲ್ಲಿ ಮತ್ತೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: "ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಬ್ರೇಕ್ ಅಪ್ ಆಗಲು ನಾನೇ ಕಾರಣ"

ಯಶವಂತ್ ಸಿನ್ಹಾ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ತೃಣಮೂಲಕ್ಕೆ ಸೇರಿದ್ದರು. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಅವರು ನೇಮಕವಾಗಿದ್ದರು.ಇತ್ತೀಚಿಗೆ ಅವರು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಸೋಲನ್ನು ಅನುಭವಿಸಿದ ಬೆನ್ನಲ್ಲೇ ಅವರು ಟಿಎಂಸಿಗೆ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ: ಕನಕಪುರದಲ್ಲಿ ಭ್ರಷ್ಟಾಚಾರಕ್ಕೆ ಗೊಬ್ಬರ ಹಾಕಿ ಪೋಷಿಸಿದವರು ಬಂಡೆ ಮಕ್ಕಳು: ಬಿಜೆಪಿ

ಅವರು ಟಿಎಂಸಿಗೆ ವಿದಾಯ ಹೇಳಿದ್ದರೂ ಸಹ ಮಮತಾ ಬ್ಯಾನರ್ಜೀ ಅವರಿಗೆ ಕೃತಜ್ಞತೆ ಸಲ್ಲಿಸಿದರು."ನಾನು ಬಂಗಾಳದಿಂದ ಹೆಚ್ಚು ಮತಗಳನ್ನು ಪಡೆದಿದ್ದೇನೆ. ಆದರೆ ನಾನು ಅಲ್ಲಿ ಒಂದು ಬಾರಿಯೂ ಪ್ರಚಾರ ಮಾಡಲಿಲ್ಲ.ಬೇರೆ ರಾಜ್ಯಗಳತ್ತ ಹೆಚ್ಚು ಗಮನಹರಿಸಿ ಪಶ್ಚಿಮ ಬಂಗಾಳದಲ್ಲಿ ತಾವು ನೋಡಿಕೊಳ್ಳುವುದಾಗಿ ಮಮತಾ ನನಗೆ ಹೇಳಿದರು ಎಂದು ಮಮತಾ ಅವರನ್ನು ಶ್ಲಾಘಿಸಿದರು.

ಇದೆ ವೇಳೆ ಜೆಡಿಎಸ್ ಬಗ್ಗೆ ಯಶವಂತ್ ಸಿನ್ಹಾ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ 'ಮಮತಾ ಬ್ಯಾನರ್ಜಿ ಕರೆದಿದ್ದ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರೂ ಭಾಗವಹಿಸಿದ್ದರು.ಪ್ರತಿಪಕ್ಷಗಳ ಜತೆ ಮತಯಾಚನೆ ಮಾಡುವ ಕುರಿತು ಮಾತನಾಡಿದರು. ಆದರೆ ಕೊನೆಯಲ್ಲಿ, ನೀವು ನನಗೆ ಏಕೆ ಮತ ಹಾಕಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ!" ಎಂದು ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News