Haveri-Gadag Lok Sabha Constituency: ಬಿಜೆಪಿ ಕೋಟೆಯನ್ನು ಬೇಧಿಸುತ್ತಾ ಈ ಬಾರಿ 'ಕೈ' ಪಕ್ಷ..?

ಈ ಕ್ಷೇತ್ರದಲ್ಲಿ ಲಿಂಗಾಯತರು, ಕುರುಬರು & ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರವಹಿಸಲಿವೆ. ಹಾವೇರಿ ಲೋಕಸಭೆ ಕ್ಷೇತ್ರೆಕ್ಕೆ ಹಾವೇರಿ ಜಿಲ್ಲೆಯ ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಾಣೇಬೆನ್ನೂರು ಸೇರಿ ಗದಗ ಜಿಲ್ಲೆಯ ಗದಗ, ರೋಣ, ಶಿರಹಟ್ಟಿ ವಿಧಾನಸಭೆ ಕ್ಷೇತ್ರಗಳು ಒಳಪಟ್ಟಿವೆ.

Written by - Manjunath Naragund | Last Updated : Apr 13, 2024, 02:15 AM IST
  • 8 ಅಸೆಂಬ್ಲಿ ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್‌ ಶಾಸಕರು
  • ಲಿಂಗಾಯತ, ಕುರುಬ ಮತ್ತು ಮುಸ್ಲಿಂ ಮತ ನಿರ್ಣಾಯಕ
  • ಕಾಂಗ್ರೆಸ್‌ಗೆ ಗ್ಯಾರಂಟಿಗಳ ಬಲ, BJPಗೆ ಮೋದಿಯೇ ಬಲ..!
Haveri-Gadag Lok Sabha Constituency: ಬಿಜೆಪಿ ಕೋಟೆಯನ್ನು ಬೇಧಿಸುತ್ತಾ ಈ ಬಾರಿ 'ಕೈ' ಪಕ್ಷ..? title=

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಯು ಆರಂಭವಾಗಿದೆ. ಏಳು ಹಂತಗಳ ಉಮೇದುವಾರಿಕೆಯಲ್ಲಿ ಹಲವು ಏರಿಳಿತ ಕಾಣುತ್ತಿದ್ದು ಮತಬೇಟೆ ಕೂಡ ಬಿರುಸಾಗಿ ಸಾಗಿದೆ. ಈ ಹಂತದಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಮತದಾರರ ಜಾಗೃತಿಯನ್ನ ಜೀ ಕನ್ನಡ ನ್ಯೂಸ್‌ ನಡೆಸುತ್ತಿದ್ದು ಕ್ಷೇತ್ರದ ವಿಸ್ತಾರ ಪರಿಚಯ ಕೂಡ ಆರಂಭವಾಗಿದೆ. ಸಂಸತ್‌ ಕ್ಷೇತ್ರದಲ್ಲಿ ಕಾಡುತ್ತಿರುವ ಸಮಸ್ಯೆಗಳು, ಹಿಂದೆ ಗೆದ್ದಿರೋ ಪಕ್ಷ ಮತ್ತು ನಾಯಕರ ಸಾಧನೆ, ಜಾತಿವಾರು ಶಕ್ತಿ ಹೇಗೆ ಪ್ರಭಾವ ಬೀರಲಿದೆ..? ನಿರ್ಣಾಯಕ ಸಾಮಾಜಿಕ ಅಂಶ ಹಾಗೂ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ಏನೇನು..? ಅಭ್ಯರ್ಥಿಗಳ ಗೆಲುವಿಗೆ ಮತದಾರನ ಮೇಲೆ ಪ್ರಭಾವ ಬೀರುವ ಅಂಶ ನಿಮ್ಮ ಮುಂದಿಡುವ ಕಾರ್ಯಕ್ರಮವೇ ಕ್ಷೇತ್ರ ಪರಿಚಯ.

ಏಲಕ್ಕಿನಾಡು ಅಂತಲೇ ಫೇಮಸ್‌ ಆಗಿರೋ ಕ್ಷೇತ್ರ ಹಾವೇರಿ ಲೋಕಸಭೆ ಕ್ಷೇತ್ರವಾಗಿದೆ. ಬ್ಯಾಡಗಿ ಮೆಣಸಿನಕಾಯಿ ಘಾಟಿನಿಂದಲೇ ಜಿಲ್ಲೆ ಫೇಮಸ್‌ ಆಗಿದೆ. ಶಿವಮೊಗ್ಗ ಜಿಲ್ಲೆಯಿಂದ ಬಾಗಲಕೋಟದವರೆಗೆ ಸುಮಾರು 300 ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಹತ್ತು ಹಲವು ವೈವಿಧ್ಯವಿದ್ದರೂ ಕೃಷಿಯೇ ಪ್ರಧಾನ ಉದ್ಯೋಗ. ನಾಡಿಗೆ ಭಾವೈಕ್ಯದ ಸಂದೇಶ ಸಾರಿಗೆ ಶಿಶುನಾಳ ಶರೀಫರು, ಸಂತ ಕನಕದಾಸರು, ತ್ರಿಪದಿ ಕವಿ ಸರ್ವಜ್ಞ, ಕಾದಂಬರಿ ಪಿತಾಮಮ ಗಳಗನಾಥರು, ಕುಮಾರವ್ಯಾಸ, ಗಾನಯೋಗಿ ಪಂಚಾಕ್ಷರಿ ಮತ್ತು ಪುಟ್ಟರಾಜು ಗವಾಯಿಗಳಂತಹ ಮಹಾಪುರುಷರು ಜನ್ಮತಾಳಿದ ನಾಡು. ಗದುಗಿನ ವೀರನಾರಾಯಣ ದೇವಾಲಯ, ಲಕ್ಕುಂಡಿ, ಗಳಗನಾಥ, ಕಾಗಿನೆಲೆ ಪೀಠ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳಿವೆ. ಜೋಳ, ಶೇಂಗಾ, ಭತ್ತ, ಹತ್ತಿ, ಗೋವಿನಜೋಳ, ಮೆಣಸಿನಕಾಯಿ, ಕಬ್ಬು ಮತ್ತು ಬ್ಯಾಡಗಿ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖ್ಯಾತಿ ಪಡೆದಿದೆ. ಹಾವೇರಿ ಲೋಕಸಭೆ ಕ್ಷೇತ್ರ ರಣಕಣ. ಭಾರೀ ಸದ್ದು ಮಾಡುತ್ತಿರುವ ಚುನಾವಣೆ ಸ್ಪರ್ಧಾ ಅಖಾಡ. ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜನರ ಬಳಿಗೆ ತೆರಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಆನಂದಸ್ವಾಮಿ ಗಡ್ಡದೇವರಮಠ ಪೈಪೋಟಿ ನೀಡುತ್ತಿದ್ದಾರೆ. ಇದ್ರ ಜೊತೆಗೆ ದಶಕಗಳಿಂದ ನೀಗದ ಹಲವು ಸಮಸ್ಯೆಗಳು ಮತದಾರನ ಮೇಲೆ ಭಾರೀ ಪ್ರಭಾವ ಬೀರುತ್ತಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ೧೦ ವರ್ಷಗಳಲ್ಲಿ 20 ಕೋಟಿ ಉದ್ಯೋಗ ಕೊಡಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ

ಈ ಕ್ಷೇತ್ರದಲ್ಲಿ ಲಿಂಗಾಯತರು, ಕುರುಬರು & ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರವಹಿಸಲಿವೆ. ಹಾವೇರಿ ಲೋಕಸಭೆ ಕ್ಷೇತ್ರೆಕ್ಕೆ ಹಾವೇರಿ ಜಿಲ್ಲೆಯ ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಾಣೇಬೆನ್ನೂರು ಸೇರಿ ಗದಗ ಜಿಲ್ಲೆಯ ಗದಗ, ರೋಣ, ಶಿರಹಟ್ಟಿ ವಿಧಾನಸಭೆ ಕ್ಷೇತ್ರಗಳು ಒಳಪಟ್ಟಿವೆ. ಕ್ಷೇತ್ರದಲ್ಲಿ ಈಗ ಒಟ್ಟು 17 ಲಕ್ಷದ 77 ಸಾವಿರದ 877 ಮತದಾರರು ಇದ್ದಾರೆ. ಇನ್ನು ಈ ಬಾರಿಯ ಚುನಾವಣೆಯ ಕ್ಷೇತ್ರವಾರು ಅಂಕಿ ಅಂಶಗಳು ಇಂತಿವೆ....

ಹಾವೇರಿ ಕ್ಷೇತ್ರ ಪರಿಚಯ 

1.ಹಾವೇರಿ : ಕರಜಗಿ, ಗುತ್ತಲ, ಹತ್ತಿಮತ್ತೂರ ಹೋಬಳಿ ಭಾಗ
2.ಹಾನಗಲ್ : ಹಾನಗಲ್, ಅಕ್ಕಿಆಲೂರ, ಬಮ್ಮನಳ್ಳಿ ಪ್ರದೇಶ
3.ಬ್ಯಾಡಗಿ : ಬ್ಯಾಡಗಿ ತಾಲೂಕು. ಬ್ಯಾಡಗಿ, ಕಾಗಿನಲೆ ಹೋಬಳಿ ಭಾಗ
4.ಹಿರೇಕೆರೂರು : ಹಿರೇಕೆರೂರು, ರಟ್ಟಿಹಳ್ಳಿ, ಹಂಸಭಾವಿ ಹೋಬಳಿ ಭಾಗ
5.ರಾಣೆಬೆನ್ನೂರು : ರಾಣೆಬೆನ್ನೂರು, ಕುಪ್ಪೆಲೂರ, ಮೆಡ್ಲೇರಿ ಹೋಬಳಿ
6.ಗದಗ : ಗದಗ ತಾಲೂಕು. ಗದಗ, ಬೇಟಗೇರಿ ಹೋಬಳಿ ಭಾಗ
7.ರೋಣ : ಗಜೇಂದ್ರಗಡ, ನರೇಗಲ್ಲ, ಹೊಳೆ ಆಲೂರ ಹೋಬಳಿಗಳು
8.ಶಿರಹಟ್ಟಿ : ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ಡಂಬಳ ಪ್ರದೇಶ

ಕ್ಷೇತ್ರವಾರು ಮತದಾರರ ಅಂಕಿ ಅಂಶ

ಕ್ಷೇತ್ರ             ಪುರುಷರು        ಮಹಿಳೆಯರು            ಒಟ್ಟು 
ಶಿರಹಟ್ಟಿ          1,14,417        1,13,929          2,28,359
ಗದಗ            1,12,154        1,15,050          2,27,222
ರೋಣ           1,18,213        1,19,114          2,37,349
ಹಾನಗಲ್        1,09,265         1,04,808           2,14,075
ಹಾವೇರಿ SC      1,20,191         1,15,768          2,35,968
ಬ್ಯಾಡಗಿ         1,06,840        1,04,028            2,10,871
ಹಿರೇಕೆರೂರು      95,117          91,773            1,86,893
ರಾಣೆಬೆನ್ನೂರು     1,19,169        1,17,960            237,140
ಒಟ್ಟು             8,95,366        8,82,430              17,77,877

ನಿರ್ಣಾಯಕ ಸಾಮಾಜಿಕ ಅಂಶಗಳು:

ಮತದಾರನಿಗೆ ಕನೆಕ್ಟಿಂಗ್‌ ವಿಷಯ
* ಜಿಲ್ಲೆಯಲ್ಲಿ 4 ನದಿಗಳಿದ್ದರೂ ಬಳಕೆ ಸರಿಯಾಗಿಲ್ಲ 
* ಗದಗ-ಹಾವೇರಿ ಭಾಗದ ನೀರಾವರಿ ಯೋಜನೆ ವಿಫಲ
* ಸತತ ಅತೀವೃಷ್ಠಿ & ಅನಾವೃಷ್ಠಿಗೆ ಸ್ಪಂದಿಸದ ಸರ್ಕಾರ
* ರೈತ ಪರ ಯೋಜನೆಗಳ ಜಾರಿಗೆ ಇಚ್ಛಾಶಕ್ತಿಯ ಕೊರತೆ
* ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆಗಳು ಸ್ಥಾಪಿಸದಿರುವುದು
* ಉದ್ಯೋಗಕ್ಕಾಗಿ ಯುವಕರು ಗುಳೆ ಹೋಗುವುದು 
* ಅಭಿವೃದ್ಧಿಯಲ್ಲಿ ಅತೀ ಹಿಂದುಳಿದ ಕ್ಷೇತ್ರದ ಹಣೆಪಟ್ಟಿ
* ಸಣ್ಣ ಕೈಗಾರಿಕೆಗಳ ಸ್ಥಾಪಿಸುವಲ್ಲಿ ನಿರಂತರ ವಿಫಲ
* ಕಾರ್ಖಾನೆಗಳ ಉಳಿವಿಗೆ ಜನಪ್ರತಿನಿಧಿಗಳ ನಿರಾಸಕ್ತಿ
* ಮತಕ್ಕಾಗಿ ಜ್ವಲಂತ ಸಮಸ್ಯೆಗಳನ್ನ ಮರೆತ ಜನಪ್ರತಿನಿಧಿಗಳು
* ನಗರದಲ್ಲಿ 24 ತಾಸು ಶುದ್ಧ ಕುಡಿಯುವ ನೀರು ಪೂರೈಕೆ 
* ಗದಗ ಜಿಲ್ಲೆಯ ಹಲವು ಭಾಗಗಳಲ್ಲಿ ಅಭಿವೃದ್ಧಿ ಕ್ಷೀಣತೆ

ಹಾವೇರಿ ಲೋಕಸಭೆ ಚುನಾವಣೆ ಅಖಾಡ ಸಿದ್ಧವಾಗಿದೆ. ಹಾವೇರಿ ಅಖಾಡದಲ್ಲಿ ಕೇಸರಿ ಕಲಿಯಾಗಿ ಮಾಜಿ ಸಿಎಂ ಬೊಮ್ಮಾಯಿ ಕ್ಷೇತ್ರದಕ್ಕೆ ಧುಮುಕಿದ್ದಾರೆ. ಇತ್ತ 'ಕೈ' ಪರ ಆನಂದಸ್ವಾಮಿ ಗಡ್ಡದೇವರಮಠ ಬಿಜೆಪಿ ಭದ್ರಕೋಟೆ ಬೇಧಿಸಲು ಎಲ್ಲ ಸಿದ್ದವಾಗಿ ಗ್ರೌಂಡ್ ವರ್ಕ್ ಸ್ಟಾರ್ಟ್ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೇಸ್ & BJP ಅಭ್ಯರ್ಥಿ ಈಗಾಲ್ಲೇ ಮಾಸ್ಟರ್ ಪ್ಲ್ಯಾನ್ ನ ಸಿದ್ದತೆ ನಡೆಸಿದ್ದಾರೆ. ಸತತವಾಗಿ ಮೂರು ಭಾರಿ ಗೆದ್ದಿರೋ ಬಿಜೆಪಿ ಈ ಬಾರಿ ಮತ್ತೆ ಗೆಲುವು ಸಾಧಿಸಲೇಬೇಕು ಅಂತಾ ಮಾಜಿ ಸಿಎಂ ಬೊಮ್ಮಾಯಿ ಅಖಾಡಕ್ಕೆ ಇಳಿದ್ದಾರೆ. ಈ ಹಿನ್ನಲೆ ಹಾವೇರಿ - ಗದಗ ಲೋಕಸಭಾ ಕ್ಷೇತ್ರ ಬಹಳಷ್ಟು ಕುತೂಹಲ ಮೂಡಿಸಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಭಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಬಿಜೆಪಿಯ ಭದ್ರಕೋಟೆಯಾಗಿದೆ. ಆದ್ರೆ ಈ ಬಾರಿ ಲೋಕ ಚುನಾವಣೆಯಲ್ಲಿ ಸತತ 3 ಬಾರಿ ಗೆಲವು ಸಾಧಿಸಿದ ಶಿವಕುಮಾರ ಉದಾಸಿ ವೈಯುಕ್ತ ಕಾರಣದಿಂದ ಚುನಾವಣೆಯ ಕಣದಿಂದ ಹಿಂದೆ ಸರೆದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಬೊಮ್ಮಾಯಿ ರಣಕಣಕ್ಕೆ ಇಳಿದಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಯುವ ನಾಯಕ ಆನಂದಸ್ವಾಮಿ ಗಡ್ಡದೇವರಮಠ ಇಳಿದಿದ್ದಾರೆ. ಈಗ ಈ ಇಬ್ಬರು ಅಭ್ಯರ್ಥಿಗಳು ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಹೊಸಬರೆಯಾಗಿದ್ದಾರೆ.

ಹಾವೇರಿ ಲೋಕಸಭ ಕ್ಷೇತ್ರವು ಕಳೆದ 3 ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. 2009ಕ್ಕೆ  ಶಿವಕುಮಾರ ಉದಾಸಿ ಮೊದಲ ಬಾರಿ ಸ್ಪರ್ಧಿಸಿ ಗೆಲವು ಪಡೆದಿದ್ದರು. ನಂತರ 2013ರಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸಲೀಂ ಅಹ್ಮದ್ ವಿರುದ್ದ ಮತ್ತೆ ಗೆಲವು ಸಾಧಿಸಿದ್ದರು. 2019ರಲ್ಲಿ 3ನೇ ಭಾರಿಗೆ ಅಭ್ಯರ್ಥಿಯಾಗಿ ಶಿವಕುಮಾರ ಉದಾಸಿ ಅವರು D.R ಪಾಟೀಲ ಸಹ ಸೋಲಿಸಿ ಹ್ಯಾಟ್ರಿಕ್‌ ಗೆಲುವು ಕಂಡಿದ್ದರು. ಇವಾಗ ನಿವೃತ್ತಿ ಘೋಷಿಸಿದ್ದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

ಸಂಸತ್‌ ಕ್ಷೇತ್ರದ ಹಿನ್ನೋಟ 
2009ರ ಚುನಾವಣೆ
ಶಿವಕುಮಾರ ಉದಾಸಿ-ಬಿಜೆಪಿ
87,920 ಮತಗಳ ಅಂತರದ ಗೆಲುವು
ಕಾಂಗ್ರೆಸ್‌ ಪಕ್ಷದ ಸಲೀಂ ಅಹ್ಮದ್‌ ವಿರುದ್ಧ ಜಯ

ಸಂಸತ್‌ ಕ್ಷೇತ್ರದ ಹಿನ್ನೋಟ
2013ರ ಚುನಾವಣೆ  
ಶಿವಕುಮಾರ ಉದಾಸಿ-ಬಿಜೆಪಿ
87,571 ಮತಗಳ ಅಂತರದ ಗೆಲುವು
ಕಾಂಗ್ರೆಸ್‌ ಪಕ್ಷದ ಸಲೀಂ ಅಹ್ಮದ್‌ ವಿರುದ್ಧ ಜಯ

ಸಂಸತ್‌ ಕ್ಷೇತ್ರದ ಹಿನ್ನೋಟ 
2019ರ ಚುನಾವಣೆ   (sub head)
ಶಿವಕುಮಾರ ಉದಾಸಿ-ಬಿಜೆಪಿ
1,40,882 ಮತಗಳ ಅಂತರದಲ್ಲಿ ವಿಜಯ
ಕಾಂಗ್ರೆಸ್‌ ಪಕ್ಷದ D.R ಪಾಟೀಲ ವಿರುದ್ಧ ಗೆಲುವು

ಸಂಸತ್‌ ಕ್ಷೇತ್ರದ ಮುನ್ನೋಟ 
2024ರ ಚುನಾವಣೆ   
ಬಸವರಾಜ ಬೊಮ್ಮಾಯಿ-ಬಿಜೆಪಿ
ಆನಂದಸ್ವಾಮಿ ಗಡ್ಡದೇವರಮಠ-ಕಾಂಗ್ರೆಸ್‌

ಈ ಹಿಂದಿನ ಚುನಾವಣೆಗಳ ತೂಕು ಒಂದು ಕಡೆಯಾದರೆ ಈ ಸಲದ ಚುನಾವಣೆಯೇ ಬೇರೆ ಅಂತಿದಾರೆ ಮತದಾರ. ಯಾಕಂದ್ರೆ ಉದಾಸಿ ಮತ್ತು ಪುತ್ರ ಶಿವಕುಮಾರ ಉದಾಸಿ ನಡತೆ, ಗುಣಧರ್ಮ ಮತದಾರರಿಗೆ ಹಿಡಿಸಿತ್ತು. ಆದ್ರೆ ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿ ಸಿಎಂ ಆಗಿದ್ದಾಗ ಕೈಗೊಂಡ ಮುಸ್ಲಿಮರ ವಿಚಾರವಾದ ತೀರ್ಮಾನ ಮತ್ತು ನಿರ್ಧಾರಗಳಿಗೆ ಜಿಲ್ಲೆಯ ಅಲ್ಪಸಂಖ್ಯಾತ ಮತದಾರರಿಗೆ ಬೇಸರ ತೋರ್ಪಡಿಸಿದ್ದಾರೆ. ಜೊತೆಗೆ ಟಿಕೆಟ್‌ ವಂಚಿತ ಈಶ್ವರಪ್ಪ ಕುಟುಂಬದ ಪರ ಜಿಲ್ಲೆಯ ಕುರುಬ ಮತದಾರರು ಅನುಕಂಪ ತೋರಿಸುತ್ತಿರೋದು ಕೂಡ ಗಡ್ಡದೇವರಮಠರಿಗೆ ಆನಂದವಾಗಿ ಪರಿಣಮಿಸಬಹುದು ಅಂತಲೇ ವಿಶ್ಲೇಷಿಸಲಾಗುತ್ತಿದೆ.

ಜಾತಿವಾರು ಪ್ರಾಬಲ್ಯ

* ಕ್ಷೇತ್ರದಲ್ಲಿ ಅಹಿಂದ ಮತಗಳ ಒಗಟ್ಟು 
* ಮಹಿಳೆಯರ ಮೇಲೆ ಗ್ಯಾರಂಟಿಗಳ ಪ್ರಭಾವ
* ಕ್ಷೇತ್ರದ ಲಿಂಗಾಯತ ಮತ ವಿಭಜನೆ ಸಾಧ್ಯತೆ
* CAA, ಹಿಜಾಬ್, ಆಜಾನ್ ವಿಚಾರದಲ್ಲಿ ಬೊಮ್ಮಾಯಿ ನಿರ್ಧಾರಕ್ಕೆ ಮುಸ್ಲಿಮರ ಮುನಿಸು 
* ಈಶ್ವರಪ್ಪ ಕುಟುಂಬ ಕಡೆಗಣನೆಯಿಂದ ಕಾಂಗ್ರೆಸಿನತ್ತ ಕುರುಬ ಸಮುದಾಯದ ಚಿತ್ತ
* ಲಿಂಗಾಯತ, ಕುರುಬರು & ಅಲ್ಪಸಂಖ್ಯಾತ ಮತಗಳು ನಿರ್ಣಾಯಕ
* ಬಂಜಾರ ಸಮುದಾಯದ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಕಡೆಗಣನೆ
* ಪಂಚಮಸಾಲಿ ಸಮುದಾಯದ ಮೀಸಲಾತಿ ಬಗ್ಗೆ ಬೊಮ್ಮಾಯಿ ನಡೆಗೆ ಬೇಸರ

ಜಾತಿವಾರು ಲೆಕ್ಕಾಚಾರ

ಲಿಂಗಾಯತರು -6.80 ಲಕ್ಷ
ಮುಸ್ಲಿಂ -2.95 ಲಕ್ಷ
ಕುರುಬರು -2.70 ಲಕ್ಷ
ದಲಿತರು -3.25 ಲಕ್ಷ
ಗಂಗಾಮತ -50 ಸಾವಿರ
ಬ್ರಾಹ್ಮಣ- 45 ಸಾವಿರ
ಮರಾಠ- 45 ಸಾವಿರ
ಇತರೆ- 1.50 ಲಕ್ಷ

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಮೂರು ಬಾರಿ ಗೆಲವು ಸಾಧಿಸಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಚ್ಚಸ್ಸು , ಲಿಂಗಾಯತ ಮತಗಳು ಹೆಚ್ಚು ಇರೋ ಕಾರಣಕ್ಕಾಗಿ ಬಿಜೆಪಿ ಆಭ್ಯರ್ಥಿ ಶಿವಕುಮಾರ ಉದಾಸಿ 3 ಬಾರಿಯೂ ಭರ್ಜರಿ ಗೆಲವು ಸಾಧಿಸಿದ್ದರು. ಆದ್ರೆ ಈಗ ಮಾಜಿ ಸಿಎಂ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ 8 ವಿಧಾನಸಭೆ ಕ್ಷೇತ್ರದಲ್ಲಿ 1 ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಗೆದ್ದಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೇಸ್ ಶಾಸಕರ ಕ್ಷೇತ್ರಗಳು ಹೆಚ್ಚಾಗಿದ್ದರಿಂದ ಕಾಂಗ್ರೇಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಬಲವು ಜಾಸ್ತಿ ಕಾಣ್ತಿದೆ. ಇತ್ತ ಅಭ್ಯರ್ಥಿಗಳು ಗೆಲುವಿನ ನಗೆ ಬೀರಲು ತಮ್ಮದೇ ಆದ ಲೆಕ್ಕಚಾರವನ್ನ ಮಾಡ್ತಿದ್ದಾರೆ. ತೆರೆಮರೆಯಲ್ಲಿ ಗೆಲುವು ಸಾಗಿಸೋ ರಣತಂತ್ರ ಹೆಣೆಯುತ್ತಿದ್ದಾರೆ. ಆದ್ರೆ ಜನರ ನಾಡಿಮಿಡಿತ ಯಾರ ಪರವಾಗಿದೆ ಅನ್ನೋದು ಜೂನ್ 4ರ ಫಲಿತಾಂಶದ ಬಳಕವೇ ಸ್ಪಷ್ಟವಾಗಿ ತಿಳಿಯಲಿದೆ..

ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪ್ಲಸ್...

1) ಹಾವೇರಿ ಲೋಕಸಭಾ ಚುನಾವಣೆಯಲ್ಲಿ BJP ಸತತ 3 ಭಾರಿ ಗೆದ್ದೆ BJP ಭದ್ರಕೋಟಿ ಮಾಡಿಕೊಂಡಿರುವುದು.
2) ಜಿಲ್ಲೆಯಲ್ಲಿ ಮೋದಿಗಿರುವ ಬಹುದೊಡ್ಡ ವರ್ಚಸ್ಸು
3) ಹಿಂದುತ್ವದ ಪರ ಸಂಘಟನೆ &ದೊಡ್ಡ ಸಮುದಾಯದ ಒಗ್ಗಟ್ಟು.
4) ಹಾವೇರಿ ಗದಗ ಜಿಲ್ಲೆಯಲ್ಲೆ ಯಶಸ್ವಿ ರೈಲ್ವೆ ಕಾಮಗಾರಿ ಹಾಗೂ ಹೆದ್ದಾರಿ ಕಾಮಗಾರಿ ಕೆಲಸಗಳು.
5) ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರ ರೈತ ವಿರೋಧಿ ಹೇಳಿಕೆಗಳು
6) ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಎಂಬ ವರ್ಚಸ್ಸು
7) ಕ್ಷೇತ್ರ ಕಾರ್ಯಕರ್ತರನ್ನ ಮನವೊಲಿಸುವಲ್ಲಿ ಯಶಸ್ಸು

ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಮೈನಸ್

1) ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಉತ್ತಮ ಕೆಲಸ ಮಾಡದಿರುವುದು.
2) ಸಿಎಂ ಇದ್ದ ಸಂಧರ್ಭದಲ್ಲಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿನ್ನಡೆ.
3) ಜಿಲ್ಲೆಯ 5 ಕ್ಷೇತ್ರಗಳಲ್ಲೂ ಬಿಜೆಪಿಯ ಹೀನಾಯ ಸೋಲು.
4) ಪಕ್ಷದಲ್ಲಿ ಕಾರ್ಯಕರ್ತ ಬುಗಿಲೇದ್ದ ಅಸಮಧಾನ.
5) ಎಂಟು ಕ್ಷೇತ್ರದ ಪೈಕಿ 7 ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇರೋದು
6) ಹಾವೇರಿ ಕ್ಷೇತ್ರದ ಮಾಜಿ ಶಾಸಕ ನೇಹರೂ ಓಲೇಕಾರ ಮುನಿಸು 

ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಪ್ಲಸ್...

1) 'ಕೈ' ಪಕ್ಷ ಕೆಳಮಟ್ಟದಿಂದ ಜಿಲ್ಲೆಯಲ್ಲಿ ಪಾರುಮತ್ಯ ಸಾದಿಸುತ್ತಿರುವುದು.
2) ವಿಧಾನಸಭೆಯ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲವು.
3) ಬಿಜೆಪಿಯ ದುರಾಡಳಿತವನ್ನು ಜನರಿಗೆ ತಲುಪಿಸಲು ಸಲೀಸಾದ ಮಾರ್ಗಗಳಿರುವುದು.
4) ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲಾ.
5) ಸರ್ಕಾರ ಐದು ಗ್ಯಾರಂಟಿ ಯೋಜನೆ 
6) 7 ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇರೋದು
7) ಕಾರ್ಯಕರ್ತರನ್ನ ವಿಶ್ವಸಕ್ಕೆ ತೆಗೆದುಕೊಂಡು 'ಕೈ' ಚುನಾವಣೆ
8 ) ವೀರಶೈವ ಲಿಂಗಾಯತ ಸಮುದಾಯದ ನಾಯಕ
9) ತಂದೆ ಗಡ್ಡಯ್ಯ ಗಡ್ಡದೇವರಮಠ ಎರಡು ಬಾರಿ ಶಿರಹಟ್ಟಿ ಶಾಸಕರು
10) ಪಂಚಪೀಠ ಮಠಾದೀಶರ ಆರ್ಶಿವಾದ
11) ಕಾಂತೆಶ್ ಗೆ ಟಿಕೆಟ್ ಮಿಸ್, ಕುರಬ ಮತ ಕಾಂಗ್ರೆಸ್ ತೆಕ್ಕೆಗೆ
12) ಹಾಲಿ ಸಂಸದ ಶಿವಕುಮಾರ್ ಉದಾಸಿಯ ಉದಾಸಿನ ನಡೆ

ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಮೈನಸ್...

1) 3 ಭಾರಿ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಸೋಲು.
2) ಜನರ ಓಟನ್ನು ಮತಗಳನ್ನಾಗಿ ಮಾಡುವ ಪ್ರಭಾವಿ ನಾಯಕರು ಇಲ್ಲದಿರುವುದು.
3) 'ಕೈ' ಶಾಸಕರಿಗೆ ಸ್ಥಾನಸಿಗದ ಹಿನ್ನಲೆ ಅಸಮಾಧಾನ.
4) ದೇಶದಲ್ಲಿ ಮೋದಿ ಅಲೆ ಇರುವವದು
5) ಬೊಮ್ಮಾಯಿಯ ಚಾಣಾಕ್ಷ ರಾಜಕಾರಣ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

 

Trending News