Sriramulu V/s Raju Gowda: ‘ನಿಮ್ಮ ಕುಟುಂಬದಲ್ಲೇ ಮೂವರು ಚುನಾವಣೆಯಲ್ಲಿ ಸೋತಿದ್ದು ನೆನಪಿದೆಯಾ ರಾಮುಲು ಅಣ್ಣಾ?’

ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜುಗೌಡ ಇಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

Written by - Zee Kannada News Desk | Last Updated : Apr 22, 2022, 03:42 PM IST
  • ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಖಾರವಾಗಿಯೇ ತಿರುಗೇಟು ನೀಡಿದ ಶಾಸಕ ರಾಜುಗೌಡ
  • ನಿಮ್ಮ ಕುಟುಂಬದಲ್ಲಿಯೇ ಮೂವರು ಚುನಾವಣೆಯಲ್ಲಿ ಸೋತಿದ್ದು ನೆನಪಿದೆಯಾ ರಾಮುಲು ಅಣ್ಣಾ ಎಂದು ವ್ಯಂಗ್ಯ
  • ನಮ್ಮಿಂದಲೇ ಶಾಸಕ ರಾಜುಗೌಡ ಬೆಳೆದಿದ್ದಾರೆ ಎಂದು ಹೇಳಿಕೆ ನೀಡಿದ್ದ ಶ್ರೀರಾಮುಲು
Sriramulu V/s Raju Gowda: ‘ನಿಮ್ಮ ಕುಟುಂಬದಲ್ಲೇ ಮೂವರು ಚುನಾವಣೆಯಲ್ಲಿ ಸೋತಿದ್ದು ನೆನಪಿದೆಯಾ ರಾಮುಲು ಅಣ್ಣಾ?’   title=
ಶ್ರೀರಾಮುಲು ಹೇಳಿಕೆಗೆ ರಾಜುಗೌಡ ತಿರುಗೇಟು

ಕಲಬುರಗಿ: ಶಾಸಕ ರಾಜುಗೌಡ ನಮ್ಮಿಂದಲೇ ಬೆಳೆದಿದ್ದಾರೆಂಬ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಗುರುವಾರ ಮಾತನಾಡಿರುವ ರಾಜುಗೌಡ, ‘ಎಲ್ಲಾದರೂ ಏನಾದರು ಮಾತಾಡಬೇಕು ಅಂದರೆ ಅದಕ್ಕೆ ಅರ್ಥವಿರಬೇಕು. ಯಾರೋ ಏನೋ ಪ್ರಶ್ನೆ ಕೇಳ್ತಾರೆ ಅಂತಾ ಬಾಯಿಗೆ ಬಂದಂಗೆ ಹೇಳೋದಲ್ಲ’ ಎಂದು ಶ್ರೀರಾಮುಲು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: PSI Recruitment Scam: ಅಕ್ರಮದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಮುಖಂಡನ ಬಂಧನ

‘ನಾನು 25 ವರ್ಷದವನಾಗಿದ್ದಾಗಲೇ ಕನ್ನಡನಾಡು ಪಕ್ಷದಿಂದ ಶಾಸಕನಾಗಿದ್ದೆ. ಕನ್ನಡನಾಡು ಪಕ್ಷ ಅಂದಮೇಲೆ ಅದು ಇಂಡಿಪೆಂಡೆಂಟ್. ಹಾಗಾದರೆ ಶ್ರೀರಾಮುಲು ಎಲ್ಲಿ ನನಗೆ ನಾಯಕರಾಗ್ತಾರೆ?’ ಎಂದು ರಾಜುಗೌಡ ಪ್ರಶ್ನಿದ್ದಾರೆ. ಈ ತರಹ ಹೇಳಿಕೆ ನೀಡುವುದು ಸರಿಯಲ್ಲ, ಜನರು ತುಂಬಾ ಹುಷಾರಿದ್ದಾರೆ. ನಿಮ್ಮ ಕುಟುಂಬದಲ್ಲಿಯೇ ಮೂವರು ಚುನಾವಣೆಯಲ್ಲಿ ಸೋತಿದ್ದು ನೆನಪಿದೆಯಾ ರಾಮುಲು ಅಣ್ಣಾ ಎಂದು ವ್ಯಂಗ್ಯವಾಡಿದ್ದಾರೆ.

‘ನಿಮ್ಮ ಸಹೋದರಿಯೇ ಎಂಪಿ ಚುನಾವಣೆಯಲ್ಲಿ ಸೋತಿದ್ದರು. ಅವರ ಮೇಲೆ ನಿಮ್ಮ ಪ್ರಭಾವ ಬೀರಿಲ್ವಾ? ನಾನು ಇವತ್ತು ಏನಿದ್ರೂ ಸುರಪುರ ಕ್ಷೇತ್ರದ ಮತದಾರರ ಆಶೀರ್ವಾದದ ಮೇಲೆ ಇದ್ದೇನೆ. ಯಾರ ಯಾರೋ ಕೃಪಾಶೀರ್ವಾದದ ಮೇಲೆ ಈ ಸ್ಥಾನಕ್ಕೆ ಬಂದಿಲ್ಲವೆಂದು ಖಡಕ್ ಆಗಿ ಶ್ರೀರಾಮುಲುಗೆ ರಾಜುಗೌಡ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Hubballi violence : ಹುಬ್ಬಳ್ಳಿ ಗಲಭೆ, ತಪ್ಪೊಪ್ಪಿಕೊಂಡು, ಸ್ಪೋಟಕ ಸತ್ಯ ಬಾಯಿಬಿಟ್ಟ ವಸೀಂ ಪಠಾಣ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News