ಈರುಳ್ಳಿ ರಸಕ್ಕೆ ಈ ಮೂರು ವಸ್ತುಗಳನ್ನು ಬೆರೆಸಿದರೆ ಬಿಳಿಕೂದಲು ಶಾಶ್ವತವಾಗಿ ತಿರುಗುವುದು ಕಪ್ಪು ಬಣ್ಣಕ್ಕೆ

Home Remedies For White Hair:ಈರುಳ್ಳಿ ರಸವು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಬಿಳಿ ಕೂದಲಿನ  ಸಮಸ್ಯೆಯನ್ನು ಪರಿಹರಿಸಲು ಈರುಳ್ಳಿ ರಸವನ್ನು ಹಲವಾರು ರೀತಿಯಲ್ಲಿ  ಬಳಸಬಹುದು. 

Written by - Ranjitha R K | Last Updated : Dec 23, 2023, 09:50 AM IST
  • ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ
  • ವಯಸ್ಸಾದವರು ಮಾತ್ರ ಬಿಳಿ ಕೂದಲು ಹೊಂದಿದ್ದ ಕಾಲವಿತ್ತು.
  • ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಆರಂಭವಾಗುತ್ತದೆ.
ಈರುಳ್ಳಿ ರಸಕ್ಕೆ ಈ ಮೂರು ವಸ್ತುಗಳನ್ನು ಬೆರೆಸಿದರೆ ಬಿಳಿಕೂದಲು ಶಾಶ್ವತವಾಗಿ ತಿರುಗುವುದು ಕಪ್ಪು ಬಣ್ಣಕ್ಕೆ   title=

Home Remedies For White Hair : ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ವಯಸ್ಸಾದವರು ಮಾತ್ರ ಬಿಳಿ ಕೂದಲು ಹೊಂದಿದ್ದ ಕಾಲವಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಆರಂಭವಾಗುತ್ತದೆ. ಜನರು ಕೂಡಾ ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ, ಹೇರ್ ಕಲರ್ ಮತ್ತು ಹೇರ್ ಡೈ ಬಳಸುತ್ತಾರೆ. ಆದರೆ ಅವು ಕೂದಲಿಗೆ ಹಾನಿ ಮಾಡುವ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿಯೇ  ಸುಲಭವಾಗಿ ಸಿಗುವ ಈ ವಸ್ತುಗಳನ್ನು ಬಳಸಬಹುದು. ಹೌದು, ಈರುಳ್ಳಿ ರಸವು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಬಿಳಿ ಕೂದಲಿನ  ಸಮಸ್ಯೆಯನ್ನು ಪರಿಹರಿಸಲು ಈರುಳ್ಳಿ ರಸವನ್ನು ಹಲವಾರು ರೀತಿಯಲ್ಲಿ  ಬಳಸಬಹುದು. 

ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳು :  ಈರುಳ್ಳಿ ರಸವು ಹೇರಳವಾದ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ. ಇದು ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಇದರಲ್ಲಿರುವ ಸಲ್ಫರ್ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳೂ ಇರುವುದರಿಂದ ತಲೆಹೊಟ್ಟು ನಿವಾರಣೆಗೂ ಸಹಾಯ ಮಾಡುತ್ತದೆ. ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುವುದು.  

ಇದನ್ನೂ ಓದಿ : ನಿಮ್ಮ ತೂಕ ಕಡಿಮೆ ಮೂಡಲು 30-30-30 ನಿಯಮವು ಅನುಸರಿಸಿ...!

ಕೂದಲನ್ನು ಕಪ್ಪಾಗಿಸಲು ಈರುಳ್ಳಿ ರಸವನ್ನು ಹೇಗೆ ಬಳಸುವುದು? 
ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ : 

ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ರಸವನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಹಚ್ಚಬಹುದು. ಇದಕ್ಕಾಗಿ, ಈರುಳ್ಳಿ ಮತ್ತು ತೆಂಗಿನೆಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಸುಮಾರು ಅರ್ಧ ಗಂಟೆಗಳವರೆಗೆ ಈ ಪೇಸ್ಟ್ ಅನ್ನು ಕೂದಲಿನಲ್ಲಿಯೇ ಬಿಟ್ಟು ನಂತರ ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ. ಕೆಲವು ವಾರಗಳ ಕಾಲ ಈ ರೀತಿ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ.

ಈರುಳ್ಳಿ ರಸ ಮತ್ತು  ನೆಲ್ಲಿಕಾಯಿ ಜ್ಯೂಸ್ : 
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು, ಈರುಳ್ಳಿ ರಸವನ್ನು ನೆಲ್ಲಿಕಾಯಿ ರಸದೊಂದಿಗೆ ಬೆರೆಸಬಹುದು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಎರಡು ಚಮಚ ಈರುಳ್ಳಿ ರಸ ಮತ್ತು ಎರಡು ಚಮಚ ನೆಲ್ಲಿಕಾಯಿ ರಸವನ್ನು ತೆಗೆದುಕೊಳ್ಳಿ. ಈಗ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 1-2 ಗಂಟೆಗಳ ಕಾಲ ಬಿಡಿ. ನಂತರ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಅಥವಾ ಎರಡು ಬಾರಿ  ಹೀಗೆ ಮಾಡಿ. 

ಇದನ್ನೂ ಓದಿ : ಬೀಟ್ರೂಟ್ ರಸವು ಚಳಿಗಾಲದಲ್ಲಿ ಮಕರಂದವಾಗಿ ಕಾರ್ಯನಿರ್ವಹಿಸುದಷ್ಟೇ ಅಲ್ಲದೆ, 4 ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ...!

ಈರುಳ್ಳಿ ರಸ ಮತ್ತು ಅಲೋ ವೆರಾ : 
ಕೂದಲು ಕಪ್ಪಾಗಲು ಈರುಳ್ಳಿ ರಸವನ್ನು ಅಲೋವೆರಾದೊಂದಿಗೆ ಬೆರೆಸಿ ಹಚ್ಚಬಹುದು. ಇದಕ್ಕಾಗಿ, ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು 2 ರಿಂದ 3 ಗಂಟೆಗಳ ಹಾಗೆಯೇ ಬಿಡಿ. ಅದರ ನಂತರ ಮೈಲ್ಡ್ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು. ಇದು ಕೂದಲಿನ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News