ಸೊಳ್ಳೆ ಕಚ್ಚಿದ ಜಾಗಕ್ಕೆ ತಕ್ಷಣ ಈ ವಸ್ತುಗಳನ್ನು ಹಚ್ಚಿದರೆ ಸಿಗಲಿದೆ ತುರಿಕೆ, ನೋವಿನಿಂದ ಮುಕ್ತಿ

Mosquito Bites Home Remedies: ಸೊಳ್ಳೆ ಕಚ್ಚಿದರೆ  ಆ ಸ್ಥಳದಲ್ಲಿ ಅತಿಯಾದ ತುರಿಕೆ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಆ ಜಾಗ ಪೂರ್ತಿ ಕೆಂಪಾಗಿ ಬಿಡುತ್ತದೆ. ಸೊಳ್ಳೆ ಕಚ್ಚಿದ ಜಾಗಕ್ಕೆ  ನಿಮ್ಮ ಮನೆಯಲ್ಲಿಯೇ ಇರುವ ಕೆಲ ವಸ್ತುಗಳನ್ನು ಹಚ್ಚುವುದರಿಂದ ತಕ್ಷಣ ತುರಿಕೆ, ನೋವು ಮಾಯವಾಗಿ ಬಿಡುತ್ತದೆ.   

Written by - Ranjitha R K | Last Updated : Jun 27, 2021, 01:02 PM IST
  • ಸೊಳ್ಳೆ ಕಚ್ಚಿದರೆ ತುರಿಕೆ, ಉರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
  • ಈ ಸಮಸ್ಯೆಗಳಿಗೆ ಮನೆಯಲ್ಲೇ ಇರುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು
  • ಚರ್ಮದ ಎಲರ್ಜಿಯಿಂದಲೂ ಸಿಗಲಿದೆ ಪರಿಹಾರ
ಸೊಳ್ಳೆ ಕಚ್ಚಿದ ಜಾಗಕ್ಕೆ ತಕ್ಷಣ ಈ ವಸ್ತುಗಳನ್ನು ಹಚ್ಚಿದರೆ ಸಿಗಲಿದೆ ತುರಿಕೆ, ನೋವಿನಿಂದ ಮುಕ್ತಿ title=
ಸೊಳ್ಳೆ ಕಚ್ಚಿದರೆ ತುರಿಕೆ, ಉರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ (photo india.com)

ನವದೆಹಲಿ : Mosquito Bites Home Remedies: ಸೊಳ್ಳೆ ಕಚ್ಚಿದರೆ  ಆ ಸ್ಥಳದಲ್ಲಿ ಅತಿಯಾದ ತುರಿಕೆ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಆ ಜಾಗ ಪೂರ್ತಿ ಕೆಂಪಾಗಿ ಬಿಡುತ್ತದೆ. ಸೊಳ್ಳೆ ಕಚ್ಚಿದ ಜಾಗಕ್ಕೆ  ನಿಮ್ಮ ಮನೆಯಲ್ಲಿಯೇ ಇರುವ ಕೆಲ ವಸ್ತುಗಳನ್ನು ಹಚ್ಚುವುದರಿಂದ ತಕ್ಷಣ ತುರಿಕೆ, ನೋವು ಮಾಯವಾಗಿ ಬಿಡುತ್ತದೆ. ಅಲ್ಲದೆ ಸೊಳ್ಳೆ ಕಡಿತದಿಂದ (Mosquito bite) ಚರ್ಮದ ,ಮೇಲಾಗುವ ಅಲರ್ಜಿಯಿಂದಲೂ ಪರಿಹಾರ ಸಿಗುತ್ತದೆ. 

ಐಸ್ ಅನ್ನು ರಬ್ ಮಾಡಿ:
ಸೊಳ್ಳೆ ಕಚ್ಚಿದ ಜಾಗದಲ್ಲಿ ತುರಿಕೆ (itching)ಕಂಡು ಬಂದ ಕೂಡಲೇ, ಐಸ್ ಅನ್ನು ಆ ಜಾಗಕ್ಕೆ ರಬ್ ಮಾಡಿ. ಐಸ್ ಅನ್ನು ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಸುತ್ತಿ ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಿ.  ಹೀಗೆ ಮಾಡುವುದರಿಂದ ತುರಿಕೆ ಕಡಿಮೆ ಆಗುತ್ತದೆ. ಅಲ್ಲದೆ ಆ ಜಾಗ ಕೆಂಪಾಗಿದ್ದರೆ ಅಥವಾ ಚರ್ಮದ ಮೇಲೆ ಅಲರ್ಜಿ (Allergy) ತರಹ ಮಾರ್ಕ್ ಕಾಣಿಸಿಕೊಂಡಿದ್ದರೆ ಅದರಿಂದಲೂ ಪರಿಹಾರ ಸಿಗುತ್ತದೆ. 

ಇದನ್ನೂ ಓದಿ : Pumpkin Flower Benefits: ಕುಂಬಳಕಾಯಿ ಮಾತ್ರವಲ್ಲ, ಅದರ ಹೂವಿನಿಂದಲೂ ಸಿಗುತ್ತೆ ಭಾರೀ ಪ್ರಯೋಜನ

ಅಲೋವೆರಾ:
ಅಲೋವೆರಾ (Aloevera) ಆಂಟಿ ಸೆಪ್ಟಿಕ್ ಗುಣಗಳನ್ನು ಹೊಂದಿದೆ. ಸೊಳ್ಳೆ ಕಡಿತದ ನಂತರ ಕಾಣಿಸಿಕೊಳ್ಳುವ ತುರಿಕೆ, ಉರಿ, ನೋವಿಗೆ ಅಲೋವಿರಾ ಉತ್ತಮ ಪರಿಹಾರವಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ, ಮೊದಲು ಅಲೋವೆರಾ ಎಲೆಯನ್ನು ತೊಳೆದು ಕತ್ತರಿಸಿ ಚಮಚದ ಸಹಾಯದಿಂದ ಅದರ ಜೆಲ್ (Aloevera gel) ಅನ್ನು ಹೊರತೆಗೆಯಿರಿ. ನಂತರ  ಜೆಲ್ ಅನ್ನು ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಿದರೆ ಪರಿಣಾಮ ಗೊತ್ತಾಗುತ್ತದೆ. 

ನಿಂಬೆ ರಸ : 
ನಿಂಬೆಯಲ್ಲಿ (Lemon) ಆಂಟಿ ಸೆಪ್ಟಿಕ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣ ಹೇರಳವಾಗಿರುತ್ತದೆ.  ಸೊಳ್ಳೆ ಕಡಿತದಿಂದ ಉಂಟಾಗುವ ತಿರಿಕೆ, ಉರಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. 

ಇದನ್ನೂ ಓದಿ : Thumbe Plant Benefits : ಶಿವನಿಗೆ ಶ್ರೇಷ್ಠವಾದ 'ತುಂಬೆ ಹೂ'ವಿನಲ್ಲಿದೆ ನಾನಾ ರೋಗ ವಾಸಿ ಮಾಡುವ ಶಕ್ತಿ!

ಅಡಿಗೆ ಸೋಡಾ-:
ಸೊಳ್ಳೆ ಕಚ್ಚಿದ ಸ್ಥಳಕ್ಕೆ ಅಡುಗೆ ಸೋಡಾವನ್ನು (baking soda) ಕೂಡಾ ಬಳಸಬಹುದ. ಇದು ಕೂಡಾ ತುರಿಕೆ , ಉರಿ ನೋವಿನಂತಹ ಕಿರಿಕಿರಿಯನ್ನು ತಪ್ಪಿಸುತ್ತದೆ. ಇದಕ್ಕಾಗಿ ಅಡಿಗೆ ಸೋಡಾದಲ್ಲಿ ಕೆಲವು ಹನಿ ನೀರನ್ನು ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಈಗ ಈ ಪೇಸ್ಟ್ ಅನ್ನು ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಬೇಕು. ಸ್ವಲ್ಪ ಸಮಯದಲ್ಲೇ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News