ಒಳ್ಳೆಯ ಕಲ್ಲಂಗಡಿ ಕೊಳ್ಳುವುದು ಒಂದು ಕಲೆಯೇ ಗುರು.. ಈ ಟಿಪ್ಸ್‌ ಫಾಲೋ ಮಾಡಿ ನಿಮಗೆ ನಿರಾಸೆಯಾಗುವುದಿಲ್ಲ!!

How to Identifying tasty watermelon: ಮಾರುಕಟ್ಟೆಯಲ್ಲಿ ಸಿಹಿ ಮತ್ತು ರಸಭರಿತವಾದ ಕಲ್ಲಂಗಡಿಯನ್ನು ಹುಡುಕಿ ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ನಾವು ಕೊಂಡುಕೊಂಡ ಹಣ್ಣು ರುಚಿಯಿಲ್ಲದೇ ನಮಗೆ ನಿರಾಸೆಯುಂಟು ಮಾಡುತ್ತದೆ.. ಹೀಗಾಗಿ ಒಳ್ಳೆಯ ಕಲ್ಲಂಗಡಿಯನ್ನು ಕೊಳ್ಳುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ.. 

Written by - Savita M B | Last Updated : May 18, 2024, 06:10 PM IST
  • ಬೇಸಿಗೆ ಎಂದರೆ ಅಸಹನೀಯ ಬಿಸಿಲ ಬೇಗೆ ಮಾತ್ರವಲ್ಲ, ಕೆಲವು ಸಿಹಿ ಹಣ್ಣುಗಳನ್ನು ಆನಂದಿಸುವ ಸಮಯವೂ ಸಹ!
  • ಬೇಸಿಗೆಯಲ್ಲಿ ವಿಶೇಷವಾಗಿ ಸಿಗುವ ಮಾವು, ಕಲ್ಲಂಗಡಿ ಹಣ್ಣುಗಳು ಎಲ್ಲರ ಬಾಯಲ್ಲಿ ನೀರೂರಿಸುತ್ತದೆ.
ಒಳ್ಳೆಯ ಕಲ್ಲಂಗಡಿ ಕೊಳ್ಳುವುದು ಒಂದು ಕಲೆಯೇ ಗುರು.. ಈ ಟಿಪ್ಸ್‌ ಫಾಲೋ ಮಾಡಿ ನಿಮಗೆ ನಿರಾಸೆಯಾಗುವುದಿಲ್ಲ!! title=

Watermelon: ಬೇಸಿಗೆ ಎಂದರೆ ಅಸಹನೀಯ ಬಿಸಿಲ ಬೇಗೆ ಮಾತ್ರವಲ್ಲ, ಕೆಲವು ಸಿಹಿ ಹಣ್ಣುಗಳನ್ನು ಆನಂದಿಸುವ ಸಮಯವೂ ಸಹ! ಬೇಸಿಗೆಯಲ್ಲಿ ವಿಶೇಷವಾಗಿ ಸಿಗುವ ಮಾವು, ಕಲ್ಲಂಗಡಿ ಹಣ್ಣುಗಳು ಎಲ್ಲರ ಬಾಯಲ್ಲಿ ನೀರೂರಿಸುತ್ತದೆ. ಈ ಹಣ್ಣುಗಳು ಎಲ್ಲರಿಗೂ ಇಷ್ಟವಾಗಿದ್ದರೂ ಉತ್ತಮ ಹಣ್ಣುಗಳನ್ನು ಆಯ್ಕೆ ಮಾಡಿ ಖರೀದಿಸುವ ಸಾಮರ್ಥ್ಯ ಕೆಲವರಿಗೆ ಇದೆ. 

ಮಾರುಕಟ್ಟೆಯಲ್ಲಿ ಸಿಹಿ ಮತ್ತು ರಸಭರಿತವಾದ ಕಲ್ಲಂಗಡಿಯನ್ನು ಹುಡುಕುವುದು ಮತ್ತು ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಇದರಿಂದ ನಿರಾಸೆಯೂ ಆಗಿರುತ್ತದೆ.. ನಿಮಗೂ ಇದೇ ರೀತಿಯ ಅನುಭವವಾಗಿದ್ದರೆ ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಸಿಹಿ ಕಲ್ಲಂಗಡಿಯನ್ನು ಗುರುತಿಸಬಹುದು.  

ಇದನ್ನೂ ಓದಿ-Beverages For Hydration: ಬೇಸಿಗೆ ಕಾಲದಲ್ಲಿ ದೇಹದಲ್ಲಿ ಜಲಸಂಚಲಯನವನ್ನು ಕಾಪಾಡಿಕೊಳ್ಳಲು ಈ ಉತ್ತಮ ಪಾನಿಯಗಳನ್ನು ಕುಡಿಯಿರಿ!

ಉತ್ತಮವಾದ ಕಲ್ಲಂಗಡಿ ದಪ್ಪ, ನಯವಾದ ತೊಗಟೆಯನ್ನು ಹೊಂದಿರುತ್ತದೆ. ಅದನ್ನು ಒತ್ತಿದಾಗ, ಅದು ಸ್ವಲ್ಪ ಒಳಗೆ ಹೋಗುತ್ತದೆ. ತೊಗಟೆ ತುಂಬಾ ಗಟ್ಟಿಯಾಗಿದ್ದರೆ ಕಲ್ಲಂಗಡಿ ಹಣ್ಣಾಗಿಲ್ಲ ಎಂದರ್ಥ. ಇದು ತುಂಬಾ ಮೃದು ಮತ್ತು ಮೆತ್ತಗೆ ಆಗಿದ್ದರೆ, ಅದು ಹಣ್ಣಾಗಿದೆ ಎಂದು ಕೊಳ್ಳಬೇಕು. 

ಇದನ್ನೂ ಓದಿ-Scrubs: ನೈಸರ್ಗಿಕವಾಗಿ ಟ್ಯಾನಿಂಗ್‌ ತೆಗೆದುಹಾಕಲು ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಸ್ಕ್ರಬ್‌ಗಳು!!

ಕಲ್ಲಂಗಡಿ ಹಣ್ಣಾದಾಗ, ಅದು ಸಿಹಿ ಮತ್ತು ಮಾಗಿದ ವಾಸನೆಯನ್ನು ಹೊಂದಿರುತ್ತದೆ.. ವಾಸನೆಯು ಹೆಚ್ಚಾಗಿದ್ದರೆ ಕಲ್ಲಂಗಡಿ ಬಹಳ ಹಣ್ಣಾಗಿರಬಹುದು. ವಾಸನೆಯು ಇಲ್ಲದಿದ್ದರೆ, ಕಲ್ಲಂಗಡಿ ಸಂಪೂರ್ಣವಾಗಿ ಹಣ್ಣಾಗಿರುವುದಿಲ್ಲ..

ಕಲ್ಲಂಗಡಿ ಹಣ್ಣಾಗಿದ್ದರೆ, ಅದರ ಕೆಳಭಾಗದಲ್ಲಿ ಹಳದಿ ಅಥವಾ ಬಿಳಿ ಚುಕ್ಕೆ ಇರುತ್ತದೆ. ಸಂಪೂರ್ಣವಾಗಿ ಹಣ್ಣಾಗದ ಕಲ್ಲಂಗಡಿ ಈ ಗುರುತನ್ನು ಹೊಂದಿರುವುದಿಲ್ಲ. ಹಣ್ಣಾಗಿರುವ ಕಲ್ಲಂಗಡಿಯನ್ನು ಗುರುತಿಸುವಾಗ ಹಣ್ಣಿನ ಮೇಲೆ ಟ್ಯಾಪ್‌ ಮಾಡಿದಾಗ ಶಬ್ದ ಸ್ಪಷ್ಟವಾಗಿದ್ದರೆ ಕಲ್ಲಂಗಡಿ ಪೂರ್ತಿಯಾಗಿ ಹಣ್ಣಾಗಿದೆ ಎಂದರ್ಥ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

 

Trending News