ಮೊದಲ ಬಾರಿಗೆ ಐಲೈನರ್ ಹಾಕಿಕೊಳ್ತಾ ಇದ್ದೀರಾ? ಈ ಟಿಪ್ಸ್ ಅನುಸರಿಸಿ

Eyeliner Tips: ಐಲೈನರ್ ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ, ನಮ್ಮಲ್ಲಿ ಸಾಕಷ್ಟು ಮಂದಿಗೆ ಐಲೈನರ್ ಅನ್ನು ಸರಿಯಾಗಿ ಅನ್ವಯಿಸುವ ರೀತಿ ತಿಳಿದಿರುವುದಿಲ್ಲ. ನೀವು ಹಂತವರಲ್ಲಿ ಒಬ್ಬರಾಗಿದ್ದರೆ ನಿಮಗಾಗಿ ಇಲ್ಲಿದೆ ಸಿಂಪಲ್ ಸಲಹೆ. 

Written by - Yashaswini V | Last Updated : Apr 9, 2024, 04:44 PM IST
  • ನೀವು ನಿಮ್ಮ ಕಣ್ಣುಗಳ ಮೇಲೆ ಸರಿಯಾಗಿ ಐಲೈನರ್ ಅನ್ವಯಿಸಲು ಕಷ್ಟ ಪಡುತ್ತಿದ್ದೀರಾ...
  • ಇಲ್ಲವೇ, ನೀವು ಮೊದಲ ಬಾರಿಗೆ ಐಲೈನರ್ ಅನ್ವಯಿಸುತ್ತಿದ್ದೀರಾ..
  • ಈ ಕೆಳಗೆ ತಿಳಿಸಲಾದ ಹಂತ ಹಂತದ ಪ್ರಕ್ರಿಯೆಯನ್ನು ಅನುಸರಿಸಿ ಕಡಿಮೆ ಸಮಯದಲ್ಲಿ ಆಕರ್ಷಕವಾಗಿ ಐಲೈನರ್ ಅನ್ವಯಿಸಬಹುದು.
ಮೊದಲ ಬಾರಿಗೆ ಐಲೈನರ್ ಹಾಕಿಕೊಳ್ತಾ ಇದ್ದೀರಾ? ಈ ಟಿಪ್ಸ್ ಅನುಸರಿಸಿ  title=

Eyeliner Applying Tips: ಕಣ್ಣುಗಳು ದೊಡ್ಡದಾಗಿ, ಆಕರ್ಷಕವಾಗಿ, ಸುಂದರವಾಗಿ ಕಾಣುವಂತೆ ಮಾಡಲು ಐಲೈನರ್ ತುಂಬಾ ಪ್ರಯೋಜನಕಾರಿ ಆಗಿದೆ. ಸಾಮಾನ್ಯವಾಗಿ, ಕೆಲವರು ಬೇರೆಯವರಿಗೆ ಸುಲಭವಾಗಿ ಐಲೈನರ್ ಅನ್ವಯಿಸುತ್ತಾರೆ. ಆದರೆ, ತಮ್ಮ ಕಣ್ಣುಗಳ ಮೇಲೆ ಸರಿಯಾಗಿ ಐಲೈನರ್ ಅನ್ವಯಿಸಲು ಸಾಧ್ಯವಾಗುವುದಿಲ್ಲ. 

ನೀವು ನಿಮ್ಮ ಕಣ್ಣುಗಳ ಮೇಲೆ ಸರಿಯಾಗಿ ಐಲೈನರ್ ಅನ್ವಯಿಸಲು ಕಷ್ಟ ಪಡುತ್ತಿದ್ದರೆ ಅಥವಾ ನೀವು ಮೊದಲ ಬಾರಿಗೆ ಐಲೈನರ್ ಅನ್ವಯಿಸುತ್ತಿದ್ದರೆ (Eyeliner Apply) ಈ ಕೆಳಗೆ ತಿಳಿಸಲಾದ ಹಂತ ಹಂತದ ಪ್ರಕ್ರಿಯೆಯನ್ನು ಅನುಸರಿಸಿ ಕಡಿಮೆ ಸಮಯದಲ್ಲಿ ಆಕರ್ಷಕವಾಗಿ ಐಲೈನರ್ ಅನ್ವಯಿಸಬಹುದು. 

ಇದನ್ನೂ ಓದಿ- Weight Loss Diet: ಈ ಸೂಪರ್‌ಫುಡ್‌ಗಳು ನಿಮ್ಮ ಆಹಾರದಲ್ಲಿದ್ದರೆ ಬೆಣ್ಣೆಯಂತೆ ಕರಗುತ್ತೆ ಸೊಂಟದ ಕೊಬ್ಬು!

ಐಲೈನರ್ ಹಚ್ಚುವ ಮೊದಲು ಈ ಕೆಲಸ ಮಾಡಿ: 
ನೀವು ಐಲೈನರ್ (Eyeliner) ಹಚ್ಚುವ ಮೊದಲು ಕಣ್ಣುಗಳನ್ನು ತೊಳೆದು ಒಣಗಿಸಿ. ನೀವು ಬೇಕಿದ್ದರೆ ಸ್ವಲ್ಪ ಕಣ್ಣಿನ ಪ್ರೈಮರ್ ಅಥವಾ ಕನ್ಸೀಲರ್ ಅನ್ನು ಸಹ ಅಪ್ಪ್ಲೈ ಮಾಡಿ. 

ಐಲೈನರ್ ಅನ್ವಯಿಸುವಾಗ ಈ ಕೆಳಗಿನ ಹಂತಗಳನ್ನು ಅನುಸರಿಸಿ: 
* ಯಾವಾಗಲೂ ಐಲೈನರ್ ಅನ್ನು ಅನ್ವಯಿಸಲು ಸುಲಭವಾಗುವಂತೆ ಚೆನ್ನಾಗಿ ಬೆಳಕಿರುವ ಪ್ರದೇಶದಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ನೀವು ಮೇಜಿನ ಮೇಲೆ ನಿಮ್ಮ ಮೊಣಕೈಯನ್ನು ವಿಶ್ರಾಂತಿ ಮಾಡಬಹುದು. ಇದರಿಂದ ನಿಮ್ಮ ಕೈ ಅಲುಗಾಡುವುದಿಲ್ಲ. 

* ಸಾಧ್ಯವಾದಷ್ಟು ಕಣ್ರೆಪ್ಪೆಗಳ ಬೇರುಗಳಿಗೆ ಹತ್ತಿರವಿರುವ ಚಿಕ್ಕದಾದ ಪ್ರದೇಶದ ಕಡೆಯಿಂದ ಲೈನರ್ ಅನ್ನು ಅನ್ವಯಿಸಿ. ನಿಮ್ಮ ಮೇಲಿನ ರೆಪ್ಪೆಗೂದಲಿನ ಉದ್ದಕ್ಕೂ ಪ್ರಾರಂಭಿಸಿ, ಕಣ್ಣಿನ ಹೊರ ಮೂಲೆಯ ಕಡೆಗೆ ನಿಧಾನವಾಗಿ ಐಲೈನರ್ ಅನ್ವಯಿಸಿ. 

* ನಂತರ ಬೇಕಿದ್ದರೆ ನೀವು ವಿಂಗ್ ಮೂಲಕ ನಿಮ್ಮ ಕಣ್ಣುಗಳನ್ನು ಇನ್ನಷ್ಟು ಸುಂದರಗೊಳಿಸಬಹುದು.

ಇದನ್ನೂ ಓದಿ- Summer Health Tips: ಬೇಸಿಗೆಯಲ್ಲಿ ಎಳನೀರಲ್ಲಿ ಈ 2 ಪದಾರ್ಥ ಬೆರೆಸಿ ಸೇವಿಸಿ, ಸಿಗುತ್ತವೆ ಹಲವು ಆರೋಗ್ಯ ಲಾಭಗಳು!

ಏನಾದರೂ ತಪ್ಪಾಗಿದ್ದರೆ, ಈ ರೀತಿ ಸರಿಪಡಿಸಿ: 
ನಿಮ್ಮ ಐಲೈನರ್ ತಪ್ಪಾಗಿದ್ದರೆ, ಸ್ವಲ್ಪ ಕದಲಿದ್ದರೆ  ಮೇಕಪ್ ರಿಮೂವರ್‌ನಲ್ಲಿ ಹತ್ತಿ ಸ್ವ್ಯಾಬ್ ಅನ್ನು ಅದ್ದಿ ನಿಧಾನವಾಗಿ ಅದನ್ನು ಅಳಿಸಿ. 

ಐಲೈನರ್ ಲುಕ್ ಅನ್ನು ಇನ್ನಷ್ಟು ಆಕರ್ಷಕವಾಗಿಸಲು ಮಸ್ಕರಾ ಅನ್ವಯಿಸುವುದನ್ನು ಮರೆಯಬೇಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News