ಮಧುಮೇಹ ನಿಯಂತ್ರಣದಲ್ಲಿಸಿರುವುದು ಹೇಗೆ? ಸುಲಭ ಮಾರ್ಗಗಳು ಇಲ್ಲಿದೆ!

Diabeties: ನಿಮ್ಮ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಆರೋಗ್ಯದಿಂದ ಜೀವನವನ್ನು ನಡೆಸಲು,  ಸಹಾಯ ಆಗುವ ಆಹಾರ ಯೋಜನೆ ಮತ್ತು ವ್ಯಾಯಾಮದ ಸಲಹೆಗಳೊಂದಿಗೆ ಈ ಪ್ರಮುಖ ಜೀವನಶೈಲಿ ತಂತ್ರಗಳನ್ನು ಪರಿಶೀಲಿಸಿ.

Written by - Zee Kannada News Desk | Last Updated : Dec 19, 2023, 03:22 PM IST
  • ಉತ್ತಮ ಆಹಾರವು ಮಧುಮೇಹ ನಿಯಂತ್ರಣದ ಪ್ರಮುಖ ಅಂಶವಾಗಿದ್ದು, ಆಹಾರ ಪಥ್ಯಗಳು ಮತ್ತು ನಿರ್ಬಂಧಿತ ಆಹಾರಗಳು ಬಹಳ ಸಹಾಯಕವಾಗಬಹುದು.
  • ಪ್ರತಿನಿತ್ಯ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರವಾದ ವ್ಯಾಯಾಮ/ವಾರವನ್ನು ಪಡೆಯಲು ಶಿಫಾರಸು ಮಾಡಲಾಗಿದೆ.
  • ದಿನನಿತ್ಯದ ರಕ್ತ ಪರೀಕ್ಷೆಗಳನ್ನು ಪಡೆಯುವುದು ಮತ್ತು ನಿಮ್ಮ ವೈದ್ಯರನ್ನು ಅನುಸರಿಸುವುದು ಮುಖ್ಯವಾಗಿದೆ.
ಮಧುಮೇಹ ನಿಯಂತ್ರಣದಲ್ಲಿಸಿರುವುದು ಹೇಗೆ? ಸುಲಭ ಮಾರ್ಗಗಳು ಇಲ್ಲಿದೆ! title=

How To Control Diabeties: ಮಧುಮೇಹ ಖಾಯಿಲೆಯು ಆಜೀವ ರೋಗವಾಗಿದ್ದು ಮತ್ತು ಮಧುಮೇಹದಿಂದ ಉತ್ತಮವಾಗಿ ಬದುಕಲು ಜೀವನಶೈಲಿ ತಂತ್ರಗಳನ್ನು ರೂಪಿಸುವುದು ಮುಖ್ಯವಾಗಿದೆ.

ಸಕ್ಕರ ಖಾಯಿಲೆ ನಿಯಂತ್ರಣದಲ್ಲಿರಿಸಲು ಈ ಕೆಳಗಿನ ಬದಲಾವಣೆಗಳು ಪ್ರಮುಖವಾಗಿವೆ:

1. ಆರೋಗ್ಯಕರ ಆಹಾರ:- ಉತ್ತಮ ಆಹಾರವು ಮಧುಮೇಹ ನಿಯಂತ್ರಣದ ಪ್ರಮುಖ ಅಂಶವಾಗಿದ್ದು,  ಆಹಾರ ಪಥ್ಯಗಳು ಮತ್ತು ನಿರ್ಬಂಧಿತ ಆಹಾರಗಳು ಬಹಳ ಸಹಾಯಕವಾಗಬಹುದು. ಆಹಾರದಲ್ಲಿ ಉದಾರ ಪ್ರಮಾಣದಲ್ಲಿ ಸಲಾಡ್ಗಳು, ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ಸೇರಿಸುವುದು ಮುಖ್ಯವಾಗಿದ್ದು, ಬ್ರೆಡ್/ಅನ್ನ/ರೊಟ್ಟಿಯನ್ನು ಒಳಗೊಂಡಿರುವ ಕಾರ್ಬೋಹೈಡ್ರೇಟ್‌ಗಳನ್ನು ನಮ್ಮ ಊಟದ 1/4 ಭಾಗಕ್ಕಿಂತ ಹೆಚ್ಚಿಗೆ ಸೇವಿಸಬಾರದು. ನಾವು ತಿನ್ನುವ ಆಹಾರದಲ್ಲಿನ ಆಹಾರ ಪದಾರ್ಥಗಳ ಪ್ರಮಾಣವನ್ನು ಬದಲಾಯಿಸುವ ಗುರಿಯನ್ನು ಹೊಂದಿರಬೇಕು. ಪಾನೀಯಗಳು ಮತ್ತು ಇತರ ಅತಿ ಹೆಚ್ಚು ಸಕ್ಕರೆ ಅಂಶವಿರುವ ಆಹಾರಗಳನ್ನು ತಪ್ಪಿಸಬೇಕು.

2. ವ್ಯಾಯಾಮ:-  ಆರೋಗ್ಯಕ್ಕೆ ಯಾವುದೇ ರೀತಿಯ ವ್ಯಾಯಾಮವು ಸಹಾಯವಾಗುತ್ತದೆ. ಪ್ರತಿನಿತ್ಯ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರವಾದ ವ್ಯಾಯಾಮ/ವಾರವನ್ನು ಪಡೆಯಲು ಶಿಫಾರಸು ಮಾಡಲಾಗಿದೆ. ಅನೇಕ ವೃತ್ತಿಪರರಿಗೆ ವ್ಯಾಯಾಮಕ್ಕಾಗಿ ಸಮಯವನ್ನು ಮೀಸಲಿಡಲು ಸಾಧ್ಯವಾಗದೆ ಇದ್ದರೇ, ಅಂತಹ ಸಂದರ್ಭದಲ್ಲಿ ನಾವು ನಮ್ಮ ದೈನಂದಿನ ವೇಳಾಪಟ್ಟಿಗೆ ಹೊಂದಿಕೊಳ್ಳುವ ಯಾವುದೇ ಚಟುವಟಿಕೆಯು ಸಹಾಯಕವಾಗಬಹುದು. ಏನೂ ಕೆಲಸ ಮಾಡದೆಯಿರುವುದಕಿಂತ, ಸ್ವಲ್ಪ ದೈಹಿಕ ಚಟುವಟಿಕೆಯಲ್ಲಿ ಭಾಗವಾಗಿರುವುದು ಉತ್ತಮವಾಗಿದೆ. ಅಗತ್ಯವಿದ್ದರೆ ಪ್ರೇರಣೆಗಾಗಿ ಚಟುವಟಿಕೆ ಟ್ರ್ಯಾಕರ್ ಅನ್ನು ಬಳಸಿ ಅಥವಾ ಕುಟುಂಬ/ಸ್ನೇಹಿತರೊಂದಿಗೆ ವ್ಯಾಯಾಮ ಮಾಡಿ.

ಇದನ್ನೂ ಓದಿ: ಸಮೃದ್ಧ ಮತ್ತು ದಟ್ಟವಾದ ಕೂದಲಿನ ಬೆಳವಣಿಗೆಗೆ ಬಳಸಿ ತೆಂಗಿನ ಹಾಲು

3. ಒತ್ತಡವನ್ನು ನಿರ್ವಹಿಸಿ:- ಒತ್ತಡವು ಸಕ್ಕರೆಯ ಖಾಯಿಲೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಅಲ್ಲದೆ ಒತ್ತಡಕ್ಕೆ ಒಳಗಾದಾಗ ಜನರು ಆರೋಗ್ಯ ಸಮಸ್ಯೆಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಳ್ಳೆಯ ಹವ್ಯಾಸಗಳು/ಧ್ಯಾನ/ಯೋಗ ಅಥವಾ ಒತ್ತಡವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುವ ಯಾವುದೇ ಚಟುವಟಿಕೆಯನ್ನು ಕಾಣಿವುದು ಮುಖ್ಯವಾಗಿದೆ.

4. ನಿಯಮಿತ ಆರೋಗ್ಯ:-  ತಪಾಸಣೆ - ದಿನನಿತ್ಯದ ರಕ್ತ ಪರೀಕ್ಷೆಗಳನ್ನು ಪಡೆಯುವುದು ಮತ್ತು ನಿಮ್ಮ ವೈದ್ಯರನ್ನು ಅನುಸರಿಸುವುದು ಮುಖ್ಯವಾಗಿದೆ. ಯಾವುದೇ ತೊಂದರೇ ಕಂಡುಬಂದ ಸಂದರ್ಭದಲ್ಲಿ, ಮೊದಲೇ  ರೋಗನಿರ್ಣಯ ಮಾಡಬಹುದು ಮತ್ತು ಚಿಕಿತ್ಸೆ ಒದಗಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News