ರಾಸಾಯನಿಕದ ಬದಲು ಈ ನೈಸರ್ಗಿಕ ವಸ್ತುಗಳನ್ನು ಬಳಸಿ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಿರಿ

ಮನೆಯಲ್ಲಿಯೇ ಲಭ್ಯವಿರುವ ಕೆಲವೊಂದು  ವಸ್ತುಗಳನ್ನು ಬಳಸಿ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. 

Written by - Ranjitha R K | Last Updated : Nov 16, 2022, 12:17 PM IST
  • ಸೊಳ್ಳೆ ಕಡಿತದಿಂದ ಅನೇಕ ಮಾರಕ ರೋಗಗಳು ಬರುತ್ತವೆ.
  • ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಕಾಟ ಕೂಡಾ ಹೆಚ್ಚುತ್ತಿದೆ.
  • ಸೊಳ್ಳೆಗಳನ್ನು ತೊಡೆದುಹಾಕಲು ಮನೆಮದ್ದುಗಳು
 ರಾಸಾಯನಿಕದ ಬದಲು ಈ ನೈಸರ್ಗಿಕ ವಸ್ತುಗಳನ್ನು ಬಳಸಿ ಸೊಳ್ಳೆ ಕಾಟದಿಂದ  ಮುಕ್ತಿ ಪಡೆಯಿರಿ title=
Home remedy for mosquitoes

ಬೆಂಗಳೂರು : ಸೊಳ್ಳೆ ಕಡಿತದಿಂದ ಅನೇಕ ಮಾರಕ ರೋಗಗಳು ಬರುವ ಅಪಾಯವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಕಾಟ ಕೂಡಾ ಹೆಚ್ಚುತ್ತಿದೆ. ಸೊಳ್ಳೆಗಳ ನಿರ್ಮೂಲನೆಗೆ ಮಾರುಕಟ್ಟೆಯಲ್ಲಿ ಕಾಯಿಲ್, ಲೋಶನ್, ಸ್ಪ್ರೇ ಲಭ್ಯವಿದೆ. ಆದರೆ ಇವುಗಳು ರಾಸಾಯನಿಕ ವಸ್ತುಗಳಾಗಿರುವುದರಿಂದ ಅವುಗಳನ್ನು ಬಳಸಿದರೆ ಅಡ್ಡ ಪರಿಣಾಮಗಳನ್ನು ಕೂಡಾ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಲಭ್ಯವಿರುವ ಕೆಲವೊಂದು  ವಸ್ತುಗಳನ್ನು ಬಳಸಿ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. 

ಸೊಳ್ಳೆಗಳನ್ನು ತೊಡೆದುಹಾಕಲು ಮನೆಮದ್ದುಗಳು :
ಬೇವು :  ಬೇವನ್ನು ಪ್ರಾಚೀನ ಕಾಲದಿಂದಲೂ ಸೊಳ್ಳೆಗಳ ವಿರುದ್ದದ ಪರಿಹಾರಕ್ಕೆ ಬಳಸಲಾಗುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಸೊಳ್ಳೆಗಳನ್ನು ಓಡಿಸಲು ಬೇವಿನ ಸೊಪ್ಪನ್ನು ಸುಡುತ್ತಾರೆ. ಮತ್ತೊಂದೆಡೆ, ಬೇವಿನ ಎಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ದೇಹಕ್ಕೆ ಹಚ್ಚುವುದರಿಂದ ಸೊಳ್ಳೆ ನಮ್ಮ ಹತ್ತಿರವೂ ಸುಳಿಯುವುದಿಲ್ಲ. ಬೇವಿನ ಎಣ್ಣೆಯನ್ನು ಬಳಸಿ ದೀಪದಂತೆ ಹಚ್ಚಿದರೂ ಸೊಳ್ಳೆಗಳು  ಹತ್ತಿರ ಬರುವುದಿಲ್ಲ. 

ಇದನ್ನೂ ಓದಿ : Tea For Healthy Heart: ಹೃದಯದ ಆರೋಗ್ಯ ರಕ್ಷಣೆಗೆ ಪರಿಣಾಮಕಾರಿ ಈ ಚಹಾ

ಓಮ ಕಾಳು : ಸೊಳ್ಳೆಗಳನ್ನು  ಓಡಿಸಲು ಓಮ ಕಾಳುಗಳನ್ನು ಕೂಡಾ  ಬಳಸಬಹುದು. ಓಮ ಕಾಳುಗಳನ್ನು ನುಣ್ಣಗೆ ಪುಡಿ ಮಾಡಿ ಅದನ್ನು ಸಾಸಿವೆ ಎಣ್ಣೆಯಲ್ಲಿ ಮಿಶ್ರಣ ಮಾಡಿ. ನಂತರ, ಕೆಲವು ರಟ್ಟಿನ ತುಂಡುಗಳಿಗೆ ಈ ಮಿಶ್ರಣವನ್ನು ಹಚ್ಚಿ ಮನೆಯಲ್ಲಿ ಅಲ್ಲಲ್ಲಿ ಇಟ್ಟು ಬಿಡಿ. ಹೀಗೆ ಮಾಡಿದರೆ  ಅದರ ವಾಸನೆಯಿಂದ ಸೊಳ್ಳೆಗಳು ಮನೆಯಿಂದ ತಕ್ಷಣವೇ ಹೊರ ಹೋಗುತ್ತವೆ.  

ಬೆಳ್ಳುಳ್ಳಿ:  ಬೆಳ್ಳುಳ್ಳಿ ರಸವನ್ನು ದೇಹಕ್ಕೆ ಹಚ್ಚಿದರೆ ಸೊಳ್ಳೆಗಳು ಕಚ್ಚುವುದಿಲ್ಲ. ಬೆಳ್ಳುಳ್ಳಿಯನ್ನು ಪುಡಿಮಾಡಿ ಅದರ ರಸವನ್ನು ಹಿಂಡಿ ಮತ್ತು ಅದನ್ನು ನೀರಿನೊಂದಿಗೆ ಬೆರೆಸಿದ ನಂತರ ಮನೆಯ ಮೂಲೆ ಮೂಲೆಗಳಲ್ಲಿ ಚಿಮುಕಿಸಬೇಕು. ಹೀಗೆ ಮಾಡಿದರೂ ಸೊಳ್ಳೆಗಳು ಓಡಿಹೋಗುತ್ತವೆ.

ಇದನ್ನೂ ಓದಿ : Tulsi with milk : ಚಳಿಗಾಲದಲ್ಲಿ ಕುಡಿಯಿರಿ ಹಾಲಿನಲ್ಲಿ ತುಳಸಿ ಎಲೆ ಹಾಕಿ!

ಕರ್ಪೂರ : ಪೂಜೆಯಲ್ಲಿ ಬಳಸುವ ಎರಡು ರೂಪಾಯಿಯ ಕರ್ಪೂರದಿಂದ ಸೊಳ್ಳೆಗಳ ಕಾಟ ದೂರವಾಗುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಕರ್ಪೂರ ಬೆರೆಸಿ. ಇದನ್ನು ನಿಮ್ಮ ಮನೆಯ ಮೂಲೆಯಲ್ಲಿ ಇರಿಸಿದರೆ ಸೊಳ್ಳೆಗಳು ತಕ್ಷಣವೇ ಮನೆಯಿಂದ ಓಡಿಹೋಗುತ್ತವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News