2012ರಲ್ಲಿ NRI ಉದ್ಯಮಿ ಮೇಲೆ ಹಲ್ಲೆ ಪ್ರಕರಣ: ಜೂನ್’ನಿಂದ ನಟ ಸೈಫ್ ಅಲಿ ಖಾನ್ ವಿಚಾರಣೆ!

Actor Saif Ali Khan trial: ಫೆಬ್ರವರಿ 22, 2012 ರಂದು ತಾಜ್ ಹೊಟೇಲ್‌ ನ ವಸಾಬಿ ರೆಸ್ಟೋರೆಂಟ್‌ ನಲ್ಲಿ ಜಗಳ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಉದ್ಯಮಿ ಇಕ್ಬಾಲ್ ಮಿರ್ ಶರ್ಮಾ ಅವರು ನೀಡಿದ ದೂರಿನ ಮೇರೆಗೆ ನಟ ಸೈಫ್ ಅಲಿ ಖಾನ್ ಅವರನ್ನು ಬಂಧಿಸಲಾಯಿತು. ನಂತರ ಮೂವರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

Written by - Bhavishya Shetty | Last Updated : May 14, 2023, 02:23 PM IST
    • ದಕ್ಷಿಣ ಆಫ್ರಿಕಾದ ಉದ್ಯಮಿ ಮತ್ತು ಅವರ ಮಾವ ಮೇಲೆ ಹಲ್ಲೆ ನಡೆಸಿದ್ದರು
    • ನಟ ಸೈಫ್ ಅಲಿ ಖಾನ್ ಮತ್ತು ಇತರ ಇಬ್ಬರಿ ಮತ್ತೆ ಸಂಕಷ್ಟ
    • ವಿಚಾರಣೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ
2012ರಲ್ಲಿ NRI ಉದ್ಯಮಿ ಮೇಲೆ ಹಲ್ಲೆ ಪ್ರಕರಣ: ಜೂನ್’ನಿಂದ ನಟ ಸೈಫ್ ಅಲಿ ಖಾನ್ ವಿಚಾರಣೆ!  title=
NRI News

Actor Saif Ali Khan trial: ಮುಂಬೈನ ಹೋಟೆಲ್‌ ವೊಂದರಲ್ಲಿ ನಟ ಸೈಫ್ ಅಲಿ ಖಾನ್ ಮತ್ತು ಇತರ ಇಬ್ಬರು, ದಕ್ಷಿಣ ಆಫ್ರಿಕಾದ ಉದ್ಯಮಿ ಮತ್ತು ಅವರ ಮಾವ ಮೇಲೆ ಹಲ್ಲೆ ನಡೆಸಿದ್ದರು ಎಂದು ಹನ್ನೊಂದು ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ವಿಚಾರಣೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ಎಸ್ಪ್ಲನೇಡ್ ನ್ಯಾಯಾಲಯವು ಏಪ್ರಿಲ್ 24ರಂದು ಖಾನ್ ಮತ್ತು ಅವರ ಇಬ್ಬರು ಸ್ನೇಹಿತರು-ಶಕೀಲ್ ಲಡಾಕ್ ಮತ್ತು ಬಿಲಾಲ್ ಅಮ್ರೋಹಿ ವಿರುದ್ಧದ ಆರೋಪಗಳನ್ನು ಮತ್ತೆ ಪುನರುಚ್ಛರಿಸಿದ್ದಾರೆ.

ಇದನ್ನೂ ಓದಿ: Shivamogga Assembly Election Result 2023: ಶಿವಮೊಗ್ಗದ ಭದ್ರಾವತಿಯಲ್ಲಿ ಕಾಂಗ್ರೆಸ್-ಗ್ರಾಮಾಂತರದಲ್ಲಿ ಜೆಡಿಎಸ್ ಮುನ್ನಡೆ!

ಸಾಕ್ಷಿಗಳ ದಾಖಲಾತಿಗಾಗಿ ಸಮನ್ಸ್ ಜಾರಿ ಮಾಡಿದ್ದು, ಪ್ರಕರಣದ ಮುಂದಿನ ವಿಚಾರಣೆಯು ಜೂನ್ 15 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

ಏನಿದು ಪ್ರಕರಣ?

ಫೆಬ್ರವರಿ 22, 2012 ರಂದು ತಾಜ್ ಹೊಟೇಲ್‌ ನ ವಸಾಬಿ ರೆಸ್ಟೋರೆಂಟ್‌ ನಲ್ಲಿ ಜಗಳ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಉದ್ಯಮಿ ಇಕ್ಬಾಲ್ ಮಿರ್ ಶರ್ಮಾ ಅವರು ನೀಡಿದ ದೂರಿನ ಮೇರೆಗೆ ನಟ ಸೈಫ್ ಅಲಿ ಖಾನ್ ಅವರನ್ನು ಬಂಧಿಸಲಾಯಿತು. ನಂತರ ಮೂವರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಆ ಸಮಯದಲ್ಲಿ ಸೈಫ್ ಅಲಿ ಖಾನ್ ಅವರ ಪತ್ನಿ ನಟಿ ಕರೀನಾ ಕಪೂರ್ ಖಾನ್, ಅವರ ಸಹೋದರಿ ಕರಿಷ್ಮಾ ಕಪೂರ್,ಮ ಮಲೈಕಾ ಅರೋರಾ ಖಾನ್, ಅಮೃತಾ ಅರೋರಾ ಮತ್ತು ಕೆಲವು ಸ್ನೇಹಿತರು ಇದ್ದರು.

ಪೋಲೀಸರ ಪ್ರಕಾರ, ಇಕ್ಬಾಲ್ ಮಿರ್ ಶರ್ಮಾ ಅವರು ಸೈಫ್ ಮತ್ತು ಅವರ ಸ್ನೇಹಿತರ ಅಸಹ್ಯಕರ ಹೇಳಿಕೆಗಳನ್ನು ವಿರೋಧಿಸಿದ್ದಾರೆ. ಈ ಸಂದರ್ಭದಲ್ಲಿ ಕೋಪಗೊಂಡ ಸೈಫ್ ಅಲಿ ಖಾನ್ ಬೆದರಿಕೆ ಹಾಕಿದ್ದಲ್ಲದೆ, ಶರ್ಮಾ ಮೂಗಿಗೆ ಹೊಡೆದಿದ್ದಾರೆ. ಜೊತೆಗೆ ಸೈಫ್ ಅವರ ಸ್ನೇಹಿತರು ಶರ್ಮಾ ಅವರ ಮಾವ ರಮಣ್ ಪಟೇಲ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಮತ್ತೊಂದೆಡೆ, “ಶರ್ಮಾ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ, ತಮ್ಮ ಜೊತೆಗಿದ್ದ ಮಹಿಳೆಯರ ಬಗ್ಗೆ ಕೆಟ್ಟ ಭಾಷೆಯನ್ನು ಬಳಸಿ ನಿಂದಿಸಿದ್ದಾರೆ. ಇದೇ ವಿಚಾರ ಗದ್ದಲಕ್ಕೆ ಕಾರಣವಾಯಿತು” ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.

2012ರ ಡಿಸೆಂಬರ್ 21ರಂದು ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ: ಸಿಎಂ ಬೊಮ್ಮಾಯಿ

ಸೈಫ್ ಅಲಿ ಖಾನ್ ಮತ್ತು ಅವರ ಇಬ್ಬರು ಸ್ನೇಹಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 325 (ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನು ಉಂಟುಮಾಡುವುದು) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News