ಗುಜರಾತ್ ಚುನಾವಣಾ ಪ್ರಚಾರಕ್ಕೆಂದು ತಾಯ್ನಾಡಿಗೆ ಕಾಲಿಟ್ಟ 25 ಸಾವಿರ NRIಗಳು!

NRIs Participate in Gujarat Election: ವಿದೇಶಿ ಸಂಪರ್ಕ ವಿಭಾಗದ ಸಂಚಾಲಕ ದಿಗಂತ್ ಸೋಂಪುರ ಮಾತನಾಡಿ, "ಭಾರತದಲ್ಲಿ ಯಾವಾಗ ಚುನಾವಣೆಗಳು ನಡೆಯಲಿ, ಪ್ರಪಂಚದಾದ್ಯಂತದ ಜನರು ಅದರ ಮೇಲೆ ಕಣ್ಣಿಟ್ಟಿರುತ್ತಾರೆ. ವಿಶೇಷವಾಗಿ ಗುಜರಾತ್‌ನಲ್ಲಿ ಚುನಾವಣೆಗಳು ಬಂದಾಗ, ಪ್ರಧಾನಿ ಮೋದಿಯವರಿಂದಾಗಿ ಉತ್ಸಾಹ ಮತ್ತು ಕುತೂಹಲ ಹೆಚ್ಚಾಗುತ್ತದೆ" ಎಂದರು.

Written by - Bhavishya Shetty | Last Updated : Nov 19, 2022, 11:59 AM IST
    • ಗುಜರಾತ್ ಚುನಾವಣೆಯಲ್ಲಿ ಎನ್ ಆರ್ ಐಗಳ ಹವಾ
    • ಸುಮಾರು 25,000 ಎನ್ ಆರ್ ಐಗಳು ಗುಜರಾತ್‌ಗೆ ತಲುಪುತ್ತಿದ್ದಾರೆ
    • ಬಿಜೆಪಿಗಾಗಿ ಪ್ರಚಾರ ಮಾಡಲು ಇವರು ಗುಜರಾತ್ ಗೆ ಆಗಮಿಸಿದ್ದಾರೆ
ಗುಜರಾತ್ ಚುನಾವಣಾ ಪ್ರಚಾರಕ್ಕೆಂದು ತಾಯ್ನಾಡಿಗೆ ಕಾಲಿಟ್ಟ 25 ಸಾವಿರ NRIಗಳು!  title=
NRI

NRIs Participate in Gujarat Election: ಗುಜರಾತ್‌ನಲ್ಲಿ ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಜ್ಯದ ಜನರು ಮಾತ್ರವಲ್ಲದೆ ಅನಿವಾಸಿ ಭಾರತೀಯರು (ಎನ್‌ಆರ್‌ಐಗಳು) ವಿಶೇಷವಾಗಿ ಗುಜರಾತಿಗಳು ತಮ್ಮ ನೆಚ್ಚಿನ ನಾಯಕ ಮತ್ತು ಪಕ್ಷವನ್ನು ಆಯ್ಕೆ ಮಾಡಲು ಮತ್ತು ಮತ ಚಲಾಯಿಸಲು ಸಮಾನವಾಗಿ ಉತ್ಸುಕರಾಗಿದ್ದಾರೆ. ಸುಮಾರು 25,000 ಎನ್ ಆರ್ ಐಗಳು ಗುಜರಾತ್‌ಗೆ ತಲುಪುತ್ತಿದ್ದಾರೆ. ವಿಶ್ವ ಭಾರತೀಯ ಜನತಾ ಪಕ್ಷ (ಬಿಜೆಪಿ) ಗಾಗಿ ಪ್ರಚಾರ ಮಾಡಲು ಇವರು ಗುಜರಾತ್ ಗೆ ಆಗಮಿಸಿದ್ದಾರೆ.

ಇದನ್ನೂ ಓದಿ: NRI Viral Video: ಕೆಂಪು ಲೆಹೆಂಗಾ ತೊಟ್ಟು ಕೆನಡಾದ ಮಂಜಿನಲ್ಲಿ ಸೊಂಟ ಬಳುಕಿಸಿದ ದೇಸಿ ಬ್ಯೂಟಿ: ವಿಡಿಯೋ ನೋಡಿ

ವಿದೇಶಿ ಸಂಪರ್ಕ ವಿಭಾಗದ ಸಂಚಾಲಕ ದಿಗಂತ್ ಸೋಂಪುರ ಮಾತನಾಡಿ, "ಭಾರತದಲ್ಲಿ ಯಾವಾಗ ಚುನಾವಣೆಗಳು ನಡೆಯಲಿ, ಪ್ರಪಂಚದಾದ್ಯಂತದ ಜನರು ಅದರ ಮೇಲೆ ಕಣ್ಣಿಟ್ಟಿರುತ್ತಾರೆ. ವಿಶೇಷವಾಗಿ ಗುಜರಾತ್‌ನಲ್ಲಿ ಚುನಾವಣೆಗಳು ಬಂದಾಗ, ಪ್ರಧಾನಿ ಮೋದಿಯವರಿಂದಾಗಿ ಉತ್ಸಾಹ ಮತ್ತು ಕುತೂಹಲ ಹೆಚ್ಚಾಗುತ್ತದೆ" ಎಂದರು.

ಈ ಬಾರಿ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಪ್ರವೇಶ ಮತ್ತು ತ್ರಿಕೋನ ಹೋರಾಟದಿಂದಾಗಿ ಜನರು ಗುಜರಾತ್ ಚುನಾವಣೆಯ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದಾರೆ.

ಪ್ರಪಂಚದಾದ್ಯಂತದ ಗುಜರಾತಿಗಳು ತಮ್ಮ ತವರು ರಾಜ್ಯದೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿರುತ್ತಾರೆ. ಶಾಲೆಗಳು, ಗ್ರಂಥಾಲಯಗಳು ಮತ್ತು ಇತರ ಅಭಿವೃದ್ಧಿ ಕಾರ್ಯಗಳ ನಿರ್ಮಾಣಕ್ಕಾಗಿ ಅವರು ತಮ್ಮ ಹಳ್ಳಿಗಳಲ್ಲಿ ನಿಯಮಿತವಾಗಿ ದೇಣಿಗೆಗಳನ್ನು ನೀಡುತ್ತಿರುತ್ತಾರೆ. ಆದ್ದರಿಂದ ಅವರು ಗ್ರಾಮಗಳಲ್ಲಿ ಗೌರವ ಮತ್ತು ವಿಶೇಷ ಸ್ಥಾನವನ್ನು ಗಳಿಸಿರುತ್ತಾರೆ. ಇದನ್ನು ಬಳಸಿಕೊಂಡು ಅನಿವಾಸಿ ಗುಜರಾತಿಗಳು ರಾಜ್ಯದಲ್ಲಿ ಪ್ರಚಾರ ನಡೆಸಿ ತಮ್ಮ ಹಳ್ಳಿಗರು ಬಿಜೆಪಿಗೆ ಗರಿಷ್ಠ ಸಂಖ್ಯೆಯಲ್ಲಿ ಮತ ನೀಡುವಂತೆ ಕೇಳಿಕೊಳ್ಳಲಿದ್ದಾರೆ.

ಯುಎಸ್‌ಎಯಲ್ಲಿ ಸುಮಾರು 20 ಲಕ್ಷ ಭಾರತೀಯರು ನೆಲೆಸಿದ್ದಾರೆ. ಅದರಲ್ಲಿ ಸುಮಾರು 11-12 ಲಕ್ಷ ಗುಜರಾತಿಗಳು. ಯುಎಸ್‌ಎಯಲ್ಲಿರುವ ಈ ಎಲ್ಲಾ ಗುಜರಾತಿಗಳು ತಮ್ಮ ತಾಯ್ನಾಡಿನೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದಾರೆ. ಆದ್ದರಿಂದ ಹೆಚ್ಚು ಹೆಚ್ಚು ಜನರು ಬರಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಅಂದಾಜಿನ ಪ್ರಕಾರ ಇಲ್ಲಿಗೆ ಪ್ರಚಾರಕ್ಕೆ ಬರುವ ಅನಿವಾಸಿ ಭಾರತೀಯರ ಸಂಖ್ಯೆ 25,000 ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಟೆಕ್ ಕಂಪನಿಗಳಲ್ಲಿ ಮುಂದುವರೆದ ಉದ್ಯೋಗಿಗಳ ವಜಾ ಪ್ರಕ್ರಿಯೆ: ಗೊಂದಲದಲ್ಲಿ NRIಗಳು

ಎನ್‌ಆರ್‌ಐಗಳು ಭಾರತದಲ್ಲಿ ಮತ ಚಲಾಯಿಸುವಂತಿಲ್ಲ. ಏಕೆಂದರೆ ಅವರು ಈಗ ಇತರ ದೇಶಗಳ ಪ್ರಜೆಗಳಾಗಿದ್ದರೂ, ಅವರು ತಮ್ಮ ದೇಶಕ್ಕೆ ಏನನ್ನಾದರೂ ನೀಡಬೇಕೆಂದು ಭಾವಿಸುತ್ತಾರೆ. ಆದ್ದರಿಂದ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ತಮ್ಮ ಕೆಲಸ ಮತ್ತು ವ್ಯವಹಾರದಿಂದ ವಿರಾಮ ತೆಗೆದುಕೊಂಡು ಚುನಾವಣೆಯ ಸಮಯದಲ್ಲಿ ಪ್ರಚಾರ ಮಾಡುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News