ಜಾನಕಿ ಈಶ್ವರ್‌ ಕಂಠಕ್ಕೆ ಮನಸೋತ ʼದಿ ವಾಯ್ಸ್ ಆಸ್ಟ್ರೇಲಿಯಾ ʼ

ಬಿಲ್ಲಿ ಎಲಿಶ್ ಅವರ ʼಲವ್ಲಿʼ ಎಂಬ ಹಾಡನ್ನು ಜಾನಕಿ ಹಾಡಿದ್ದರು. ಈಕೆಯ ಹಾಡಿಗೆ ಫಿದಾ ಆದ ತೀರ್ಪುಗಾರರು ʼದಿ ವಾಯ್ಸ್ ಆಸ್ಟ್ರೇಲಿಯಾʼಗೆ ಪ್ರವೇಶ ನೀಡಿದರು.  

Written by - Bhavishya Shetty | Last Updated : Apr 24, 2022, 11:44 AM IST
  • ಇಂಡೋ ಆಸ್ಟ್ರೇಲಿಯನ್‌ ಗಾಯಕಿ ಜಾನಕಿ ಈಶ್ವರ್‌
  • ʼಲವ್ಲಿʼ ಹಾಡಿನ ಮೂಲಕ ಗಮನ ಸೆಳೆದಿದ್ದ ಗಾಯಕಿ
  • ʼದಿ ವಾಯ್ಸ್ ಆಸ್ಟ್ರೇಲಿಯಾʼಗೆ ಆಡಿಷನ್‌ ನೀಡಿದ್ದ ಜಾನಕಿ
ಜಾನಕಿ ಈಶ್ವರ್‌ ಕಂಠಕ್ಕೆ ಮನಸೋತ ʼದಿ ವಾಯ್ಸ್ ಆಸ್ಟ್ರೇಲಿಯಾ ʼ title=
Janaki Eswar

ಇಂಡೋ ಆಸ್ಟ್ರೇಲಿಯನ್‌ ಗಾಯಕಿ ಜಾನಕಿ ಈಶ್ವರ್‌ 13 ವರ್ಷದ ಬಾಲಕಿ. ಈಕೆಯ ಸುಮಧುರ ಕಂಠಕ್ಕೆ ಆಸ್ಟ್ರೇಲಿಯನ್‌ ಮೂಲದ ರಿಯಾಲಿಟಿ ಶೋವೊಂದರ ಜಡ್ಜಸ್‌ ಫಿದಾ ಆಗಿದ್ದಾರೆ. ಈಕೆ ಆಗಸ್ಟ್‌ 2021ರಲ್ಲಿ ಆಸ್ಟ್ರೇಲಿಯಾದ ಫೇಮಸ್‌ ರಿಯಾಲಿಟಿ ಶೋ ʼದಿ ವಾಯ್ಸ್ ಆಸ್ಟ್ರೇಲಿಯಾʼಗೆ ಆಡಿಷನ್‌ಗೆಂದು ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ಹಾಡಿನ ಶೈಲಿ ಕೇಳಿದ ತೀರ್ಪುಗಾರರು ಮನಸೋತಿದ್ದಾರೆ. 

ಇದನ್ನು ಓದಿ: ಸೋಶಿಯಲ್‌ ಮೀಡಿಯಾ ಸೆನ್ಶೇಶನ್‌ ನಿಹಾರಿಕಾ ಕುರಿತು ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌

ಬಿಲ್ಲಿ ಎಲಿಶ್ ಅವರ ʼಲವ್ಲಿʼ ಎಂಬ ಹಾಡನ್ನು ಜಾನಕಿ ಹಾಡಿದ್ದರು. ಈಕೆಯ ಹಾಡಿಗೆ ಫಿದಾ ಆದ ತೀರ್ಪುಗಾರರು ʼದಿ ವಾಯ್ಸ್ ಆಸ್ಟ್ರೇಲಿಯಾʼಗೆ ಪ್ರವೇಶ ನೀಡಿದರು. ಅಷ್ಟೇ ಅಲ್ಲದೆ, ಇದು ಬ್ಲೈಂಡ್‌ ಆಡಿಷನ್‌ ಆಗಿತ್ತು. ಈಕೆಯ ಸ್ವರ ಕೇಳುತ್ತಿದ್ದಂತೆ ಮೂಕ ವಿಸ್ಮಿತರಾದ ಜಡ್ಜಸ್‌ ಕಣ್ಣಿನ ಪಟ್ಟಿ ತೆರೆಯುವುದರ ಮೂಲಕ ಸಂತೋಷ ವ್ಯಕ್ತಪಡಿಸಿದರು. ಇನ್ನು ಈ ಆಡಿಷನ್ ವಿಡಿಯೋ ವೈರಲ್ ಆಗಿದ್ದು, ʼದಿ ವಾಯ್ಸ್ ಗ್ಲೋಬಲ್‌ʼನ ಯೂಟ್ಯೂಬ್ ಚಾನೆಲ್‌ನಲ್ಲಿ ಐದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯಾಗಿದೆ. 

 

 

ಇನ್ನು ದಿ ವಾಯ್ಸ್‌ ಆಸ್ಟ್ರೇಲಿಯಾ ಆಡಿಷನ್‌ಗೆ ಆಗಮಿಸುವಾಗ ಈಕೆ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಲಯಾಳಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದರು. ಇದೇ ವೇಳೆ ಭಾರತೀಯ ಸಂಸ್ಕೃತಿಯೊಂದಿಗೆ ಅವರ ಬಾಂಧವ್ಯದ ಬಗ್ಗೆಯೂ ಮಾತನಾಡಿದ್ದಾರೆ. 

ಕೇರಳ ಮೂಲದ ಜಾನಕಿ: 
ಜನಪ್ರಿಯ ರಿಯಾಲಿಟಿ ಶೋ ದಿ ವಾಯ್ಸ್‌ನಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ಸ್ಪರ್ಧಿ ಜಾನಕಿ. ಈಕೆಯ ಪೋಷಕರು ಕೇರಳ ಮೂಲದದವರಾಗಿದ್ದು, 2007ರಲ್ಲಿ ಆಸ್ಟೇಲಿಯಾಕ್ಕೆ ತೆರಳಿ ಅಲ್ಲಿಯೇ ವಾಸವಾಗಿದ್ದಾರೆ. ಇನ್ನು 2009ರಲ್ಲಿ ಮೆಲ್ಬೋರ್ನ್‌ನಲ್ಲಿ ಜನಿಸಿದ ಜಾನಕಿ ತನ್ನ 6 ನೇ ವಯಸ್ಸಿನಲ್ಲಿ ಕರ್ನಾಟಕ ಸಂಗೀತ ಕಲಿಯಲು ಪ್ರಾರಂಭಿಸಿದ್ದಾರೆ. 

ಜಾನಕಿಯವರ ತಂದೆ ಮೆಲ್ಬೋರ್ನ್‌ನ ಮಲಯಾಳಂ ಮಾತನಾಡುವ ಸಮುದಾಯದಲ್ಲಿ ಗಾಯಕರಾಗಿದ್ದಾರೆ. ಅಷ್ಟೇ ಅಲ್ಲದೆ, ಇವರ ಚಿಕ್ಕಪ್ಪ ಅರುಣ್ ಗೋಪನ್ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ: NRI : ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರ್ತಿ ಶಾಂತಿ ಸೇಥಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

ಜಾನಕಿ ಗೀತರಚನೆಗಾರರಾಗಿಯೂ ಕೆಲವೊಂದು ಆಲ್ಬಂಗಳನ್ನು ರಚಿಸಿದ್ದಾರೆ. ʼದಿ ಕ್ಲೌನ್ʼ ಮತ್ತು ʼಐ ಹ್ಯಾವ್ ಬೀನ್ ವೇಟಿಂಗ್ʼನಂತಹ ತನ್ನದೇ ಆದ ಕವರ್ ಸಾಂಗ್‌ಗಳನ್ನು ರಚಿಸಿದ್ದಾರೆ. ದಿ ಕ್ಲೌನ್ ಕವರ್‌ ಸಾಂಗ್‌ 2020 ರ ಲಾಕ್‌ಡೌನ್‌ ಸಮಯದಲ್ಲಿ ಬಿಡುಗಡೆ ಮಾಡಲಾಗಿತ್ತು. ಐ ಹ್ಯಾವ್ ಬೀನ್ ವೇಟಿಂಗ್ ಅನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲಾಗಿದೆ. ಇನ್ನು ಎ.ಆರ್ ರೆಹಮಾನ್ ಅವರ ಭೂಮಿ ಭೂಮಿ ಕವರ್ ಸಾಂಗ್‌ನ್ನು ಈಕೆ ಹಾಡಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. 

ಜಾನಕಿಗೆ ಹಾಡುವುದಷ್ಟೇ ಅಲ್ಲ. ಗಿಟಾರ್, ಪಿಟೀಲು, ಉಕುಲೇಲ್ ನುಡಿಸುವುದರಲ್ಲೂ ನಿಸ್ಸೀಮರು. ಮಲಯಾಳಂ, ಹಿಂದಿ ಮತ್ತು ತಮಿಳು ಹಾಡುಗಳನ್ನು ಕೇಳುವ ಜಾನಕಿಗೆ ಭಾರತೀಯ ಹಾಡುಗಳೆಂದರೆ ಅಚ್ಚುಮೆಚ್ಚಂತೆ. 13ರ ಹರೆಯದ ಜಾನಕಿ ಶೀಘ್ರದಲ್ಲೇ ಮಲಯಾಳಂ ಚಿತ್ರಕ್ಕೂ ಕಂಠದಾನ ಮಾಡಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News