NRI ಬ್ಯುಸಿನೆಸ್ ಮ್ಯಾನ್ ಅಟ್ಲಾಸ್ ಗ್ರೂಪ್ ಅಧ್ಯಕ್ಷ ಎಂಎಂ ರಾಮಚಂದ್ರನ್ ನಿಧನ

'ಅಟ್ಲಾಸ್' ರಾಮಚಂದ್ರನ್ ಎಂದೂ ಕರೆಯಲ್ಪಡುವ ಉದ್ಯಮಿ ರಾಮಚಂದ್ರನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಉದ್ಯಮಿ ದುಬೈನಲ್ಲಿ ಸಾರ್ವಜನಿಕ ವೇದಿಕೆಗಳು ಮತ್ತು ಸಾಂಸ್ಕೃತಿಕ ಕೂಟಗಳಲ್ಲಿ ಸಕ್ರಿಯರಾಗಿದ್ದರು. ಅನಿವಾಸಿ ಮಲಯಾಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿಜಯನ್ ತಿಳಿಸಿದ್ದಾರೆ.

Written by - Bhavishya Shetty | Last Updated : Oct 3, 2022, 11:25 PM IST
    • ಎನ್‌ಆರ್‌ಐ ಉದ್ಯಮಿ ಮತ್ತು ಅಟ್ಲಾಸ್ ಗ್ರೂಪ್ ಅಧ್ಯಕ್ಷ ಎಂಎಂ ರಾಮಚಂದ್ರನ್ ನಿಧನ
    • ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಎನ್‌ಆರ್‌ಐ ಉದ್ಯಮಿ
    • ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ
NRI ಬ್ಯುಸಿನೆಸ್ ಮ್ಯಾನ್ ಅಟ್ಲಾಸ್ ಗ್ರೂಪ್ ಅಧ್ಯಕ್ಷ ಎಂಎಂ ರಾಮಚಂದ್ರನ್ ನಿಧನ title=
NRI

ಅಕ್ಟೋಬರ್ 2 ರಂದು ದುಬೈನಲ್ಲಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಎನ್‌ಆರ್‌ಐ ಉದ್ಯಮಿ ಮತ್ತು ಅಟ್ಲಾಸ್ ಗ್ರೂಪ್ ಅಧ್ಯಕ್ಷ ಎಂಎಂ ರಾಮಚಂದ್ರನ್ ನಿಧನರಾಗಿದ್ದಾರೆ. ಸುದ್ದಿ ತಿಳಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ. 

ಇದನ್ನೂ ಓದಿ: NRI News: ಈ ಬಾರಿಯ ತನ್ನ ನೀತಿ ಸಮಿತಿ ಸಭೆಯಲ್ಲಿ FCNR ಸ್ವಾಪ್ ವಿಂಡೋ ಪರಿಚಯಿಸುತ್ತಾ RBI?

'ಅಟ್ಲಾಸ್' ರಾಮಚಂದ್ರನ್ ಎಂದೂ ಕರೆಯಲ್ಪಡುವ ಉದ್ಯಮಿ ರಾಮಚಂದ್ರನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಉದ್ಯಮಿ ದುಬೈನಲ್ಲಿ ಸಾರ್ವಜನಿಕ ವೇದಿಕೆಗಳು ಮತ್ತು ಸಾಂಸ್ಕೃತಿಕ ಕೂಟಗಳಲ್ಲಿ ಸಕ್ರಿಯರಾಗಿದ್ದರು. ಅನಿವಾಸಿ ಮಲಯಾಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿಜಯನ್ ತಿಳಿಸಿದ್ದಾರೆ. 

ಇದನ್ನೂ ಓದಿ: NRI News: ಅಮೇರಿಕಾದಲ್ಲಿ ಹೆಚ್-1ಬಿ ವಿಸಾಗಳ ಸ್ಟಾಂಪಿಂಗ್ ಗೆ ಶಿಫಾರಸು ಮಾಡಿದ ಅಧ್ಯಕ್ಷೀಯ ಆಯೋಗ

1942 ರಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಜನಿಸಿದ ರಾಮಚಂದ್ರನ್ ಅವರು ಆಭರಣ ವ್ಯವಹಾರಕ್ಕೆ ತೆರಳುವ ಮೊದಲು ಬ್ಯಾಂಕ್ ಉದ್ಯೋಗಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇನ್ನು ರಾಮಚಂದ್ರನ್ ಅವರು ಸಿನಿಮಾ ನಿರ್ಮಾಣದ ಜೊತೆಗೆ ಕೆಲವೊಂದು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News