NRI News: ಅಮೇರಿಕಾದಲ್ಲಿ ಹೆಚ್-1ಬಿ ವಿಸಾಗಳ ಸ್ಟಾಂಪಿಂಗ್ ಗೆ ಶಿಫಾರಸು ಮಾಡಿದ ಅಧ್ಯಕ್ಷೀಯ ಆಯೋಗ

NRI News: H-1B ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು US ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.

Written by - Nitin Tabib | Last Updated : Sep 30, 2022, 12:45 PM IST
  • ಏಷ್ಯನ್ ಅಮೆರಿಕನ್ನರು ಮತ್ತು ಪೆಸಿಫಿಕ್ ದ್ವೀಪವಾಸಿಗಳ ಕುರಿತಾದ ಅಧ್ಯಕ್ಷೀಯ ಆಯೋಗವು
  • ಅಮೆರಿಕಾದೊಳಗೆ H-1B ವೀಸಾಗಳ ಸ್ಟಾಂಪಿಂಗ್ ಗಾಗಿ ಮಾಡಲಾದ ಶಿಫಾರಸನ್ನು ಸರ್ವಾನುಮತದಿಂದ ಅನುಮೋದಿಸಿದೆ,
  • ಸಾವಿರಾರು ವಿದೇಶಿ ವೃತ್ತಿಪರರಿಗೆ ಅದರಲ್ಲಿಯೂ ವಿಶೇಷವಾಗಿ ಭಾರತೀಯರಿಗೆ ಇದರಿಂದ ದೊಡ್ಡ ಪರಿಹಾರ ಸಿಗಲಿದೆ.
NRI News: ಅಮೇರಿಕಾದಲ್ಲಿ ಹೆಚ್-1ಬಿ ವಿಸಾಗಳ ಸ್ಟಾಂಪಿಂಗ್ ಗೆ ಶಿಫಾರಸು ಮಾಡಿದ ಅಧ್ಯಕ್ಷೀಯ ಆಯೋಗ title=
NRI News

NRI News: ಏಷ್ಯನ್ ಅಮೆರಿಕನ್ನರು ಮತ್ತು ಪೆಸಿಫಿಕ್ ದ್ವೀಪವಾಸಿಗಳ ಕುರಿತಾದ ಅಧ್ಯಕ್ಷೀಯ ಆಯೋಗವು ಅಮೆರಿಕಾದೊಳಗೆ H-1B ವೀಸಾಗಳ ಸ್ಟಾಂಪಿಂಗ್ ಗಾಗಿ ಮಾಡಲಾದ ಶಿಫಾರಸನ್ನು ಸರ್ವಾನುಮತದಿಂದ ಅನುಮೋದಿಸಿದೆ, ಇದೀಗ ಅಧ್ಯಕ್ಷ ಜೋ ಬಿಡೆನ್ ಈ ಕ್ರಮವನ್ನು ಅಂಗೀಕರಿಸಿದರೆ, ಸಾವಿರಾರು ವಿದೇಶಿ ವೃತ್ತಿಪರರಿಗೆ ಅದರಲ್ಲಿಯೂ ವಿಶೇಷವಾಗಿ ಭಾರತೀಯರಿಗೆ ಇದರಿಂದ ದೊಡ್ಡ ಪರಿಹಾರ ಸಿಗಲಿದೆ.

H-1B ವೀಸಾ ಒಂದು ವಲಸೆ ರಹಿತ ವೀಸಾ ಆಗಿದ್ದು, ಇದು US ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.

ಪ್ರಸ್ತುತ ಯಾವುದೇ ಓರ್ವ ಉದ್ಯೋಗಿಯ ಹೆಚ್-ಬಿ1 ಸ್ಟೇಟಸ್ ಅನ್ನು ಸಕ್ರೀಯಗೊಳಿಸುವ ಮೊದಲು ಯುಎಸ್ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ ಕಚೇರಿಯಲ್ಲಿ ವಿಸಾ ಸ್ಟಾಂಪ್ ಗಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ಬುಧವಾರ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಏಷ್ಯನ್ ಅಮೆರಿಕನ್ನರು, ಸ್ಥಳೀಯ ಹವಾಯಿಗಳು ಮತ್ತು ಪೆಸಿಫಿಕ್ ದ್ವೀಪವಾಸಿಗಳ ಮೇಲಿನ ಅಧ್ಯಕ್ಷರ ಸಲಹಾ ಆಯೋಗದಿಂದ ಈ ಹೆಜ್ಜೆ ಇಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಗಮನಾರ್ಹವಾಗಿ, ಅವರಲ್ಲಿ ಬಹುತೇಕ ಜನರು ಹೊಸ ಅಥವಾ H-1B ವೀಸಾಗಳ ನವೀಕರಣಕ್ಕಾಗಿ ಕಾಯುತ್ತಿರುವಂತಹ ದೇಶಗಳಲ್ಲಿ ದೀರ್ಘ ವೀಸಾ ಅರ್ಜಿ ನೇಮಕಾತಿಗಳಿಂದಾಗಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ

ಪ್ರಸ್ತುತ ಈ ವೇಟಿಂಗ್ ಪಿರಿಯಡ್ ಒಂದು ವರ್ಷಕ್ಕಿಂತ ಹೆಚ್ಚು ಇರುವ ಭಾರತದಲ್ಲಿ, ಆಯೋಗದ ಸದಸ್ಯರಾದ ಭಾರತೀಯ ಅಮೇರಿಕನ್ ಅಜಯ್ ಜೈನ್ ಭುಟೋರಿಯಾ ಅವರು ಈ ಶಿಫಾರಸು ಮಾಡಿದ್ದಾರೆ.

"ನಮ್ಮ ವಲಸೆ ಪ್ರಕ್ರಿಯೆಯ ಭಾಗವಾಗಿ, H-1B ವೀಸಾ ಹೊಂದಿರುವವರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲಸ ಮಾಡಲು ಮತ್ತು ನಮ್ಮ ಆರ್ಥಿಕತೆಯ ಬೆಳವಣಿಗೆ, ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶವನ್ನು ನೀಡಲಾಗಿದೆ," ಎಂದು ಸಭೆಯಲ್ಲಿ ಭುಟೋರಿಯಾ ಆಯೋಗದ ಸದಸ್ಯರಿಗೆ ತಿಳಿಸಿದ್ದಾರೆ. ಶ್ವೇತಭವನದಿಂದ ಈ ಸಭೆಯ ನೇರ ಪ್ರಸಾರ ನಡೆಸಲಾಗಿದೆ.

ಇದನ್ನೂ ಓದಿ-NRI News: ಈ ಬಾರಿಯ ತನ್ನ ನೀತಿ ಸಮಿತಿ ಸಭೆಯಲ್ಲಿ FCNR ಸ್ವಾಪ್ ವಿಂಡೋ ಪರಿಚಯಿಸುತ್ತಾ RBI?

ಆಯೋಗದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟ ಭಟುರಿಯಾ, H-1B ವೀಸಾ ಹೊಂದಿರುವವರು, ಅದರ ನವೀಕರಣದ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ನವೀಕರಣದ ಸಮಯದಲ್ಲಿ ಅಥವಾ ಅವರು ವಿದೇಶಕ್ಕೆ ಪ್ರಯಾಣಿಸುವಾಗ ಬಲವಂತವಾಗಿ ಕುಟುಂಬದಿಂದ ಬೇರ್ಪಡುತ್ತಾರೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-NRI News: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಸಾಗರೋತ್ತರ ಶಿಕ್ಷಣಕ್ಕೆ ಧಕ್ಕೆ

ಸಿಲಿಕಾನ್ ವ್ಯಾಲಿಯಿಂದ ಹೊರಗಿರುವ ಭಟುರಿಯಾ ಓರ್ವ ಯಶಸ್ವಿ ಉದ್ಯಮಿಯಾಗಿದ್ದು, ತಮ್ಮ ಮೊದಲ ದಿನದಿಂದಲೇ ಅಧ್ಯಕ್ಷ ಜೋ ಬಿಡೆನ್ ಪ್ರಚಾರ ಅಭಿಯಾನದ  ಬೆಂಬಲಿಗರಾಗಿದ್ದಾರೆ ಎಂಬುದು ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News