BMTC number in Tesla: ಟೆಸ್ಲಾ ಕಾರಿಗೆ BMTC ನಂಬರ್ ನೋಂದಣಿ: ಇದು ವಿದೇಶಿ ಕನ್ನಡಿಗನ ಬಾಲ್ಯದ ಮನಮುಟ್ಟುವ ಕಥೆ!

BMTC number in Tesla: ಕಾರಿಗೆ ಬಸ್ ನಂಬರ್ ನೋಂದಣಿ ಮಾಡಿಸಿಕೊಂಡವರ ಹೆಸರು ಚೆಂಗಪ್ಪ, ಇವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡಿಗ. ಬೆಂಗಳೂರಿನಲ್ಲಿ ತಾನು ಓದುತ್ತಿದ್ದ ಸಂದರ್ಭದಲ್ಲಿ ಪ್ರತಿದಿನ ಪ್ರಯಾಣ ಮಾಡುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಇವರಿಗೆ ಎಲ್ಲಿಲ್ಲದ ಅಭಿಮಾನ.

Written by - Bhavishya Shetty | Last Updated : May 7, 2023, 01:30 PM IST
    • ಕಾರಿಗೆ ಬಸ್ ನಂಬರ್ ನೋಂದಣಿ ಮಾಡಿಸಿಕೊಂಡವರ ಹೆಸರು ಚೆಂಗಪ್ಪ
    • ಇವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡಿಗ.
    • ತಾನು ಓದುತ್ತಿದ್ದ ಸಂದರ್ಭದಲ್ಲಿ ಪ್ರತಿದಿನ ಪ್ರಯಾಣ ಮಾಡುತ್ತಿದ್ದ ಬಿಎಂಟಿಸಿ ಬಸ್ ಎಂದರೆ ಇವರಿಗೆ ಎಲ್ಲಿಲ್ಲದ ಅಭಿಮಾನ
BMTC number in Tesla: ಟೆಸ್ಲಾ ಕಾರಿಗೆ BMTC ನಂಬರ್ ನೋಂದಣಿ: ಇದು ವಿದೇಶಿ ಕನ್ನಡಿಗನ ಬಾಲ್ಯದ ಮನಮುಟ್ಟುವ ಕಥೆ! title=
BMTC number plate in Tesla Car

BMTC number in Tesla: ಹಳೆಯ ಬೆಂಗಳೂರು, ಅಂದಿನ ಬಸ್ ಪ್ರಯಾಣಗಳು ಅನೇಕ ಜನರಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಆ ಬಾಲ್ಯದ ನೆನೆಪುಗಳನ್ನು ನೀವು ಆಗಾಗ್ಗೆ ಮಾತನಾಡುವಾಗ ಹಂಚಿಕೊಳ್ಳಬಹುದು. ಇನ್ನು ಕೆಲವರು ತಮ್ಮ ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕಲು ಫೋಟೋಗಳನ್ನು ಸಹ ನೋಡಿಕೊಳ್ಳುತ್ತಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ತಮ್ಮ ಬಾಲ್ಯದ ಸಂದರ್ಭದಲ್ಲಿ ಬಸ್ ಚಲಾಯಿಸುತ್ತ ಅವರ ಇಷ್ಟದ ಬಸ್ ಡ್ರೈವರ್ ಗೆ ಗೌರವ ಸೂಚಿಸುವಂತೆ ಆ ಬಸ್ ನಂಬರ್ ನೋಂದಣಿಯನ್ನು ತಮ್ಮ ಟೆಸ್ಲಾ ಕಾರಿಗೂ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನೀವು ಹಿಂದುವಾಗಿ ʼಭಜರಂಗಿʼ ಹೆಸರಿನಲ್ಲಿ ನಟಿಸಿದ್ದೀರಿ, ಭಜರಂಗದಳ ನಿಷೇಧಿಸುವ ಬಗ್ಗೆ ನಿಮ್ಮ ನಿಲುವು ಏನು?

ಕಾರಿಗೆ ಬಸ್ ನಂಬರ್ ನೋಂದಣಿ ಮಾಡಿಸಿಕೊಂಡವರ ಹೆಸರು ಚೆಂಗಪ್ಪ, ಇವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡಿಗ. ಬೆಂಗಳೂರಿನಲ್ಲಿ ತಾನು ಓದುತ್ತಿದ್ದ ಸಂದರ್ಭದಲ್ಲಿ ಪ್ರತಿದಿನ ಪ್ರಯಾಣ ಮಾಡುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಇವರಿಗೆ ಎಲ್ಲಿಲ್ಲದ ಅಭಿಮಾನ. ಆ ಚಾಲಕ ಎಂದರೂ ಸಹ  ಇವರಿಗೆ ಬಲು ಪ್ರೀತಿ. ಇದಕ್ಕಾಗಿಯೇ ಚೆಂಗಪ್ಪ ತಮ್ಮ ನೂತನ ಟೆಸ್ಲಾ ಕಾರಿಗೆ ಬಿಎಂಟಿಸಿ ನೋಂದಣಿ ಸಂಖ್ಯೆಯನ್ನೇ ಅಳವಡಿಸಿದ್ದಾರೆ.

ಈ ಬಗ್ಗೆ ಅನಿವಾಸಿ ಕನ್ನಡಿಗರಾಗಿರುವ ಶ್ರೀವತ್ಸ ಜೋಶಿ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ; “1990ರ ದಶಕದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಿಂದ ಯಶವಂತಪುರಕ್ಕೆ ಸಂಚರಿಸುತ್ತಿದ್ದ KA-01 F 232' ನೋಂದಣಿ ಸಂಖ್ಯೆಯ ಬಸ್ ನಲ್ಲಿ ಚೆಂಗಪ್ಪ ಎಂಬವರು ಶಾಲೆಗೆ ತೆರಳುತ್ತಿದ್ದರು. ಅವರಿಗೆ ಈ ಹಳೆಯ ಬಿಎಂಟಿಸಿ ಹಾಗೂ ಅದರ ಚಾಲಕ ಧನಪಾಲ್ ಎಂದರೆ ತುಂಬಾ ಇಷ್ಟ. ಹೀಗಾಗಿ ಅವರು ಖರೀದಿಸಿ ತಮ್ಮ ಹೊಸ ಟೆಸ್ಲಾ ಕಾರಿಗೆ 'KA1F232' ನಂಬರ್ ಪ್ಲೇಟ್ ಹಾಕಿಸಿದ್ದಾರೆ” ಎಂದು ಹೇಳಿದ್ದಾರೆ.

ಇನ್ನು ಚೆಂಗಪ್ಪ ಟೆಸ್ಲಾ ಕಾರಿನೊಂದಿಗೆ ನಿಂತು ವಿಡಿಯೋವೊಂದನ್ನು ಮಾಡಿದ್ದು, ಬಿಎಂಟಿಸಿ ಬಸ್ ಚಾಲಕ ಧನಪಾಲ್ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದಾರೆ. “ಧನಪಾಲ್ ಅವರು ನಿವೃತ್ತಿ ಹೊಂದುತ್ತಿದ್ದು, ಅವರಿಗೆ ಅಭಿನಂದನೆಗಳು. ನಿಮ್ಮನ್ನು ಭೇಟಿಯಾಗಿದ್ದು 401 B ರೂಟ್ ಬಸ್ಸಿನಲ್ಲಿ. ಈಗ ಸರಿ ಸುಮಾರು 31 ವರ್ಷಗಳಾಗಿದೆ. ಎಷ್ಟೇ ಒತ್ತಡವಿದರೂ ಪ್ರಾಮಾಣಿಕವಾಗಿ ನಿಮ್ಮ ಕೆಲಸವನ್ನು ಮಾಡಿತ್ತಿದ್ದವರು ನೀವು. ಈಗ ನಾನು ನನ್ನ ಹೊಸ ಕಾರಿಗೆ ಆ ಬಿಎಂಟಿಸಿ ಬಸ್ ನ ನೋಂದಣಿ ಸಂಖ್ಯೆಯನ್ನೇ ಹಾಕಿಸಿದ್ದೇನೆ” ಎಂದು ಹೇಳಿದ್ದಾರೆ.

ಇನ್ನು ಈ ವಿಡಿಯೋ ಕಂಡ ಧನಪಾಲ್, “ವಿದ್ಯಾರಣ್ಯಪುರ ನಿಲ್ದಾಣದಿಂದ ಯಶವಂತಪುರಕ್ಕೆ ಹೋಗುತ್ತಿದ್ದ ಶಾಲಾ ಹುಡುಗರ ಗುಂಪೊಂದು ನನಗೆ ಸ್ಪಷ್ಟವಾಗಿ ನೆನಪಿದೆ. ಅವರೆಲ್ಲರೂ ನನ್ನ ಡ್ರೈವಿಂಗ್ ಸೀಟಿನ ಬಳಿ ಕುಳಿತುಕೊಳ್ಳುತ್ತಿದ್ದರು” ಎಂದು ಏಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾದ ಧನಪಾಲ್ ಭಾವುಕರಾಗಿ ಹೇಳಿದ್ದಾರೆ.

" ವೀಡಿಯೊವನ್ನು ನೋಡಿದಾಗ ನನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ಹುಡುಗ ತುಂಬಾ ವರ್ಷಗಳ ನಂತರವೂ ನನ್ನನ್ನು ನೆನಪಿಸಿಕೊಂಡಿದ್ದಾನೆ” ಎಂದು ಹೇಳಿದರು.

ಇದನ್ನೂ ಓದಿ:ಈ ಆರೋಗ್ಯ ಸಮಸ್ಯೆಗಳನ್ನು ನಿರ್ನಾಮ ಮಾಡುತ್ತದೆ ದ್ರಾಕ್ಷಿ ಹಣ್ಣು !ಆದರೆ ತಿನ್ನುವ ಸಮಯ ಬಹಳ ಮುಖ್ಯ !

ಚೆಂಗಪ್ಪ ಅವರು ಮಾತನಾಡಿದ್ದು, “31 ವರ್ಷಗಳು ಕಳೆದಿವೆ ಎಂದು ನನಗೆ ನಂಬಲಾಗುತ್ತಿಲ್ಲ. ಆದರೆ ರಸ್ತೆಯ ಒತ್ತಡದ ನಡುವೆಯೂ ನಮ್ಮನ್ನು ಶಾಲೆಗೆ ಕರೆದೊಯ್ಯುವಾಗ ನೀವಾಡುತ್ತಿದ್ದ ನಿಮ್ಮ ಪ್ರೀತಿಯ ಮಾತುಗಳು ಮತ್ತು ಪ್ರಾಮಾಣಿಕತೆ ನನಗೆ ಇನ್ನೂ ನೆನಪಿದೆ. ನಿಮ್ಮ ಕೆಲಸದ ಮೇಲಿನ ಗೌರವದ ಸಂಕೇತವಾಗಿ ನಾನು ನಮ್ಮ ಹಳೆಯ ರೂಟ್ 401B ಬಸ್‌ ನ ನೋಂದಣಿ ಫಲಕದಿಂದ ಕೊನೆಯ ನಾಲ್ಕು ಅಕ್ಷರಗಳಾದ F232 ಅನ್ನು ನನ್ನ ಕಾರಿನ ನೋಂದಣಿಯಾಗಿ ಆಯ್ಕೆ ಮಾಡಿದ್ದೇನೆ" ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News