ಅನಿವಾಸಿ ಭಾರತೀಯರು ಪಿಪಿಎಫ್ ಖಾತೆ ತೆರೆಯಬೇಕೇ? ಈ ನಿಯಮ ಅನುಸರಿಸಿ

ಎನ್‌ಪಿಎಸ್‌ ಎಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ ಎಂದರ್ಥ. 18 ರಿಂದ 60 ವರ್ಷ ವಯಸ್ಸಿನ ಎಲ್ಲಾ ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು.   

Written by - Bhavishya Shetty | Last Updated : Apr 20, 2022, 06:00 PM IST
  • ಅನಿವಾಸಿ ಭಾರತೀಯರು ಪಿಪಿಎಫ್ ಖಾತೆಗಳನ್ನು ತೆರೆಯಬಹುದು
  • ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದು
  • ಎನ್‌ಆರ್‌ಐಗಳಿಗೆ ಸಹಕಾರಿಯಾಗುವ ಅಂಶಗಳು ಇಲ್ಲಿವೆ
ಅನಿವಾಸಿ ಭಾರತೀಯರು ಪಿಪಿಎಫ್ ಖಾತೆ ತೆರೆಯಬೇಕೇ? ಈ ನಿಯಮ ಅನುಸರಿಸಿ title=
NRI Policy

ಅನಿವಾಸಿ ಭಾರತೀಯರು ಪಿಪಿಎಫ್ ಖಾತೆಗಳನ್ನು ತೆರೆಯಲು ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. 
ಪಿಪಿಎಫ್ ಖಾತೆಗಳನ್ನು ತೆರೆಯ 'ನಿವಾಸಿ ಭಾರತೀಯರು ಅನಿವಾಸಿ ಭಾರತೀಯರಾದಾಗ ಅವರ ನಿವಾಸದ ಸ್ಥಿತಿ ಬದಲಾದಾಗುತ್ತದೆ. ಆಗ ಎನ್‌ಪಿಎಸ್‌ ಖಾತೆಯನ್ನು ಮುಚ್ಚಬೇಕಾಗುತ್ತದೆ. ಎನ್‌ಆರ್‌ಐಗಳಾದ ಬಳಿಕ ಮತ್ತೊಂದು ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು. 

ಇದನ್ನು ಓದಿ: ʼಸರ್ ಅಹ್ಮದ್ ಸಲ್ಮಾನ್ ರಶ್ದಿʼ: ಭಾರತ ಮೂಲದ ಕಾದಂಬರಿಕಾರನ ಬಗ್ಗೆ ನಿಮಗೆಷ್ಟು ಗೊತ್ತು?

ಎನ್‌ಪಿಎಸ್‌ ಎಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ ಎಂದರ್ಥ. 18 ರಿಂದ 60 ವರ್ಷ ವಯಸ್ಸಿನ ಎಲ್ಲಾ ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು. 

ಪಿಪಿಎಫ್ ಖಾತೆಯ ಸಂದರ್ಭದಲ್ಲಿ, ಎನ್‌ಆರ್‌ಐ ಹೊಸ ಪಿಪಿಎಫ್ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ. ಆದರೆ ಅವರು ಭಾರತೀಯ ನಿವಾಸಿಯಾಗಿದ್ದಾಗ ಪಿಪಿಎಫ್ ಖಾತೆಯನ್ನು ತೆರೆದಿದ್ದರೆ, ಅವರು ತಮ್ಮ ಸ್ಥಿತಿಯ ಬದಲಾವಣೆಯ ಬಗ್ಗೆ ಬ್ಯಾಂಕ್‌ಗೆ ತಿಳಿಸಬೇಕಾಗುತ್ತದೆ. ಆ ಖಾತೆಯನ್ನು ಅದರ ಮುಕ್ತಾಯದವರೆಗೆ ಹಿಡಿದಿಟ್ಟುಕೊಳ್ಳಬಹುದು. ಸ್ಥಿತಿ ಬದಲಾವಣೆಯ ನಂತರ ಕೊಡುಗೆಯನ್ನು ಮುಂದುವರಿಸಬಹುದು. 

ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದು:
ಭಾರತದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಅನಿವಾಸಿ ಭಾರತೀಯರ ಹೂಡಿಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಾಂಕ್ರಾಮಿಕದಂತಹ ತೊಂದರೆಗಳಿಂದ ವಿದೇಶದಲ್ಲಿರುವ ಭಾರತೀಯರಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ತಾಯ್ನಾಡಿನಲ್ಲಿ ಭೂಮಿ ಅಥವಾ ಸ್ವಂತ ಮನೆ ಹೊಂದಿದ್ದರೆ ಭವಿಷ್ಯದಲ್ಲಿ ಇಲ್ಲೇ ಬಂದು ನೆಲೆಸಬಹುದು ಎನ್ನುವ ಆಲೋಚನೆಯಿಂದ ದೇಶದಲ್ಲಿ ಸ್ವಂತ ಮನೆ ಅಥವಾ ಅಪಾರ್ಟ್‌ಮೆಂಟ್‌ ಅಥವಾ ನಿವೇಶನ ಖರೀದಿಸುವವರು ಹೆಚ್ಚಾಗುತ್ತಿದ್ದಾರೆ. ಆದರೆ ಅನಿವಾಸಿಗಳಾದರೆ ಯಾವ ರೀತಿಯಲ್ಲಿ ಪತ್ರಗಳನ್ನು ತಯಾರಿಸಬೇಕು ಎಂಬುದು ಸ್ವಲ್ವ ಗೊಂದಲವನ್ನು ಉಂಟು ಮಾಡುತ್ತದೆ. 

ಇದನ್ನು ಓದಿ: ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದೇ...? ಇಲ್ಲಿದೆ ಉತ್ತರ

ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದವರು ದೇಶದಲ್ಲಿ ಯಾವುದೇ ವಸತಿ ಅಥವಾ ವಾಣಿಜ್ಯ ಪ್ರಾಪರ್ಟಿ ಖರೀದಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ಅನುಮತಿ ನೀಡಿದೆ. ಇದಕ್ಕಾಗಿ ಕೇಂದ್ರ ಬ್ಯಾಂಕ್‌ನಿಂದ ನಿರ್ದಿಷ್ಟ ಅನುಮತಿ ಪಡೆಯಬೇಕಾಗಿಲ್ಲ.ಈಗಿರುವ ಆರ್‌ಬಿಐ ಕಾನೂನಿನಡಿ ಎನ್‌ಆರ್‌ಐ ಅಥವಾ ಪಿಐಒಗಳು ಎಷ್ಟು ಬೇಕಾದರೂ ವಾಣಿಜ್ಯ ಅಥವಾ ರೆಸಿಡೆನ್ಶಿಯಲ್‌ ಪ್ರಾಪರ್ಟಿಗಳನ್ನು ಖರೀದಿಸಬಹುದು. 

ಭಾರತದ ಆದಾಯ ತೆರಿಗೆ ಕಾನೂನು ಕೂಡ ಹಲವು ರೆಸಿಡೆನ್ಶಿಯಲ್‌ ಅಥವಾ ವಾಣಿಜ್ಯ ಪ್ರಾಪರ್ಟಿ ಹೊಂದಲು ಅವಕಾಶ ನೀಡುತ್ತದೆ. ಎಲ್ಲಾದರೂ ಎನ್‌ಆರ್‌ಐಗಳಿಗೆ ಭಾರತಕ್ಕೆ ಬರಲು ಸಾಧ್ಯವಾಗದೆ ಇದ್ದರೆ ಅಟಾರ್ನಿ ಪವರ್‌ ಇರುವ ಬೇರೆ ವ್ಯಕ್ತಿಗಳ ಮೂಲಕ ದಾಖಲೆ ಪತ್ರಗಳನ್ನು ಸಲ್ಲಿಸಿಯೂ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News