‘ಶ್ರೀ ಸಾಂಸ್ಕೃತಿಕ ಕಲಾಸಾರಥಿ’ಗೆ ಎರಡು ವರ್ಷ ಪೂರ್ಣ: ಎನ್‌ಆರ್‌ಐಗಳಿಂದ ವಿಶೇಷ ಕಾರ್ಯಕ್ರಮ ಆಯೋಜನೆ

ಪ್ರಾಚೀನ ತೆಲುಗು ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಕಲೆಗಳ ವಿನೂತನ ಕಾರ್ಯಕ್ರಮಗಳನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಲು ಈ ಸಂಸ್ಥೆಯು ವಿಶಿಷ್ಟವಾಗಿ ಕಾರ್ಯ ನಿರ್ವಹಿಸಿದೆ. 

Written by - Bhavishya Shetty | Last Updated : Aug 2, 2022, 01:24 PM IST
  • ಸಿಂಗಾಪುರದ ‘ಶ್ರೀ ಸಾಂಸ್ಕೃತಿಕ ಕಲಾಸಾರಥಿ’ ಸಂಸ್ಥೆ
  • ಸಿಂಗಾಪುರದ ತೆಲುಗು ಸೌರಭವನ್ನು ಜಾಗತಿಕವಾಗಿ ಹರಡುತ್ತಿರುವ ಸಂಸ್ಥೆ
  • ಅನೇಕ ತೆಲುಗು ಗಣ್ಯರು ಈ ಸಂಸ್ಥೆಯನ್ನು ಹಾಡಿ ಕೊಂಡಾಡಿದ್ದಾರೆ
‘ಶ್ರೀ ಸಾಂಸ್ಕೃತಿಕ ಕಲಾಸಾರಥಿ’ಗೆ  ಎರಡು ವರ್ಷ ಪೂರ್ಣ: ಎನ್‌ಆರ್‌ಐಗಳಿಂದ ವಿಶೇಷ ಕಾರ್ಯಕ್ರಮ ಆಯೋಜನೆ  title=
Sri Samskrithika Kalasarathi

ಸಿಂಗಾಪುರದ ‘ಶ್ರೀ ಸಾಂಸ್ಕೃತಿಕ ಕಲಾಸಾರಥಿ’ ಸಂಸ್ಥೆಯು ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕಾರಿ ಸದಸ್ಯರು ‘ನಮ್ಮ ಎರಡು ವರ್ಷದ ಪಯಣ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. 

ಇದನ್ನೂ ಓದಿ: ಮೃತದೇಹವನ್ನು ಒಂಟಿಯಾಗಿ ಬಿಡಬಾರದು: ಪುರಾಣಗಳಲ್ಲಿ ಈ ಬಗ್ಗೆ ಹೇಳಿದ್ದೇನು ಗೊತ್ತಾ?

ಸಿಂಗಾಪುರದ ತೆಲುಗು ಸೌರಭವನ್ನು ಜಾಗತಿಕವಾಗಿ ಹರಡುತ್ತಿರುವ 'ಶ್ರೀ ಸಾಂಸ್ಕೃತಿಕ ಕಲಾಸಾರಥಿ' ಸಂಸ್ಥೆಯು ಸ್ಥಾಪನೆಯಾದ ಮೊದಲ ದಿನದಿಂದಲೂ ಉತ್ತಮ ಕೆಲಸಗಳನ್ನು ಮಾಡಿಕೊಂಡುಬಂದಿದೆ. ಇಲ್ಲಿರುವ ಜನರ ತೆಲುಗು ಸಾಹಿತ್ಯ ಸಂಪತ್ತಿನ ಬಗ್ಗೆ ಜಗತ್ತಿಗೆ ಪಸರಿಸಿದ್ದಲ್ಲದೆ ಕಲಾವಿದರು ಮತ್ತು ಬರಹಗಾರರನ್ನು ಬೆಳಕಿಗೆ ತಂದಿದ್ದಕ್ಕಾಗಿ ಅನೇಕ ತೆಲುಗು ಗಣ್ಯರು ಈ ಸಂಸ್ಥೆಯನ್ನು ಹಾಡಿ ಕೊಂಡಾಡಿದ್ದಾರೆ. 

ಪ್ರಾಚೀನ ತೆಲುಗು ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಕಲೆಗಳ ವಿನೂತನ ಕಾರ್ಯಕ್ರಮಗಳನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಲು ಈ ಸಂಸ್ಥೆಯು ವಿಶಿಷ್ಟವಾಗಿ ಕಾರ್ಯ ನಿರ್ವಹಿಸಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಕಾವುತ್ತೂರು ರತ್ನಕುಮಾರ್, ಕಾರ್ಯಕಾರಿಣಿ ಸದಸ್ಯರಾದ ರಾಧಿಕಾ ಮಂಗಿಪುಡಿ, ಊಲಪಲ್ಲಿ ಭಾಸ್ಕರ್, ಚಾಮಿರಾಜು ರಾಮಾಂಜನೇಯುಲು ಭಾಗವಹಿಸಿ ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.

ಇದನ್ನೂ ಓದಿ: ಇದು ಪ್ರೀತಿಯ ವಿಷ್ಯ : ಪ್ರೇಮಿಗಳ ವಿಡಿಯೋ ವೈರಲ್

ಜಾಗತಿಕ ಸಂಸ್ಥೆಗಳು ಮತ್ತು ಅವುಗಳ ಸಂಘಟಕರಾದ ವಾಂಗುರಿ ಫೌಂಡೇಶನ್ ಆಫ್ ಅಮೆರಿಕಾ, ವಂಶಿ ಇಂಟರ್‌ನ್ಯಾಶನಲ್, ತಾನಾ, ಮಲೇಷಿಯನ್ ತೆಲುಗು ಅಸೋಸಿಯೇಷನ್, ನಾನ್-ಸ್ಟೇಟ್ ತೆಲುಗು ಸಮಾಖ್ಯ, ವೀಧಿ ಅರುಗು ನಾರ್ವೆ, ಸೌತ್ ಆಫ್ರಿಕನ್ ತೆಲುಗು ಅಸೋಸಿಯೇಷನ್, ತೆಲುಗು ಬುಕ್ ಆಫ್ ರೆಕಾರ್ಡ್ಸ್ ಇತ್ಯಾದಿ ಸಂಸ್ಥೆಗಳಿಗೆ ಇದೇ ಸಂದರ್ಭದಲಿ ಕೃತಜ್ಞತೆ ಸಲ್ಲಿಸಿದರು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News