ಕೇರಳವನ್ನು ಹಿಂದಿಕ್ಕುತ್ತಿದೆಯೇ ಉತ್ತರ ಭಾರತ! ವಿದೇಶದಿಂದ ಹಣ ಹರಿದು ಬರಲು ಕಾರಣವೇನು ಗೊತ್ತಾ?

ಆಕ್ಸಿಸ್ ಮ್ಯೂಚುವಲ್ ಫಂಡ್ ವರದಿಯ ಪ್ರಕಾರ, ದಕ್ಷಿಣ ಭಾರತದ ರಾಜ್ಯಗಳು ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಪಡೆಯುವ ಸಂಬಳದ ನಡುವಿನ ಅಂತರವು ಕಡಿಮೆಯಾಗುತ್ತಿದೆ. ಇದರಿಂದಾಗಿ ದಕ್ಷಿಣ ಭಾರತದ ರಾಜ್ಯಗಳಿಂದ ವಿದೇಶಕ್ಕೆ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.

Written by - Bhavishya Shetty | Last Updated : Aug 27, 2022, 04:30 PM IST
    • ಉತ್ತರ ಭಾರತದಲ್ಲಿ ಎನ್ ಆರ್ ಐಗಳಿಂದ ಬರುವ ಆದಾಯ ಹೆಚ್ಚಾಗುತ್ತಿದೆ
    • ಆಕ್ಸಿಸ್ ಮ್ಯೂಚುವಲ್ ಫಂಡ್ ವರದಿಯಲ್ಲಿ ಬಹಿರಂಗವಾದ ಮಾಹಿತಿ
    • ಕರ್ನಾಟಕದಲ್ಲೂ ಎನ್ ಆರ್ ಐ ರವಾನೆ ಪಾಲು ಕಡಿಮೆ
ಕೇರಳವನ್ನು ಹಿಂದಿಕ್ಕುತ್ತಿದೆಯೇ ಉತ್ತರ ಭಾರತ! ವಿದೇಶದಿಂದ ಹಣ ಹರಿದು ಬರಲು ಕಾರಣವೇನು ಗೊತ್ತಾ? title=
NRI News

ದೇಶದ ಹೊರಗೆ ಕೆಲಸ ಮಾಡುವ ಹೆಚ್ಚಿನ ಜನರು ಕೇರಳ ರಾಜ್ಯದವರು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ರಾಜ್ಯವು ವಿದೇಶದಿಂದ ಹೆಚ್ಚಿನ ಆದಾಯವನ್ನು ಪಡೆಯುತ್ತದೆ. ಆಕ್ಸಿಸ್ ಮ್ಯೂಚುವಲ್ ಫಂಡ್‌ನ ವರದಿಯ ಪ್ರಕಾರ, ಉತ್ತರ ಪ್ರದೇಶ, ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಹೊರಗೆ ಆದಾಯ ಗಳಿಸುವ ಎನ್‌ಆರ್‌ಐಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ವರದಿಯು ಆರ್‌ಬಿಐ ಅಧ್ಯಯನವನ್ನು ಉಲ್ಲೇಖಿಸಿದೆ.

ಆಕ್ಸಿಸ್ ಮ್ಯೂಚುವಲ್ ಫಂಡ್ ವರದಿಯ ಪ್ರಕಾರ, ದಕ್ಷಿಣ ಭಾರತದ ರಾಜ್ಯಗಳು ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಪಡೆಯುವ ಸಂಬಳದ ನಡುವಿನ ಅಂತರವು ಕಡಿಮೆಯಾಗುತ್ತಿದೆ. ಇದರಿಂದಾಗಿ ದಕ್ಷಿಣ ಭಾರತದ ರಾಜ್ಯಗಳಿಂದ ವಿದೇಶಕ್ಕೆ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. 

ಇದನ್ನೂ ಓದಿ: Post Office ಗ್ರಾಹಕರಿಗೆ ಸಿಹಿ ಸುದ್ದಿ : ಕೇವಲ ₹1500 ಠೇವಣಿ ಮಾಡಿದ್ರೆ 35 ಲಕ್ಷ ಲಾಭ 

ವರದಿಯ ಪ್ರಕಾರ, ನಾವು ಕೇರಳದ ಬಗ್ಗೆ ಮಾತನಾಡಿದರೆ, 2017 ರಲ್ಲಿ, ಅದರ GDP ಯಲ್ಲಿ ವಿದೇಶಿ ಆದಾಯದ ಪಾಲು ಶೇಕಡಾ 10 ರಷ್ಟಿತ್ತು. ಇದು 2021 ರ ಹಣಕಾಸು ವರ್ಷದಲ್ಲಿ ಶೇಕಡಾ 7.5 ಕ್ಕೆ ಇಳಿದಿದೆ. ಕರ್ನಾಟಕದಲ್ಲೂ ಎನ್ ಆರ್ ಐ ರವಾನೆ (ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ರವಾನೆ ಮಾಡುವ ಹಣ) ಪಾಲು ಕಡಿಮೆಯಾಗುತ್ತಿದೆ.

ಇನ್ನೊಂದೆಡೆ ಉತ್ತರ ಭಾರತದ ರಾಜ್ಯಗಳ ಜಿಡಿಪಿಯಲ್ಲಿ ಹಣ ರವಾನೆಯ ಪಾಲು ಹೆಚ್ಚುತ್ತಿದೆ. ಕೊರೊನಾದಿಂದಾಗಿ, ದೆಹಲಿ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳ ಜಿಡಿಪಿ ಮತ್ತು ಅಲ್ಲಿನ ಕುಟುಂಬಗಳು ಅನುಭವಿಸಿದ ತೀವ್ರ ಹಿನ್ನಡೆಗೆ ಹಣ ರವಾನೆಯಿಂದ ಬೆಂಬಲ ಸಿಕ್ಕಿದೆ.

RBI ಅಧ್ಯಯನದಲ್ಲಿ ಮತ್ತೊಂದು ಪ್ರವೃತ್ತಿ ಹೊರಹೊಮ್ಮಿದೆ. ಅಧ್ಯಯನದ ಪ್ರಕಾರ, ಹಣ ರವಾನೆಯಲ್ಲಿ ಉತ್ತರ ಅಮೆರಿಕದ ಪಾಲು ಹೆಚ್ಚುತ್ತಿದೆ. 

ಇದನ್ನೂ ಓದಿ: 2022-23 ರಲ್ಲಿ ಭಾರತದ ಆರ್ಥಿಕತೆಯು ಶೇ 7.4ರಷ್ಟು ಹೆಚ್ಚಳ: ನಿರ್ಮಲಾ ಸೀತಾರಾಮನ್ ಹೇಳಿಕೆ

ಆಕ್ಸಿಸ್ ಮ್ಯೂಚುಯಲ್ ಫಂಡ್ ವರದಿಯ ಪ್ರಕಾರ, ಗರಿಷ್ಠ ಹಣ ರವಾನೆಗಳು ಈಗ US ನಿಂದ ಬರುತ್ತವೆ. ಅದು ಸುಮಾರು 23.4 ಶೇಕಡಾ. ಆದರೆ UAE ಈಗ ಒಟ್ಟು ರವಾನೆಯಲ್ಲಿ 18 ಶೇಕಡಾ ಪಾಲನ್ನು ಹೊಂದಿದ್ದು, ಎರಡನೇ ಸ್ಥಾನಕ್ಕೆ ಕುಸಿದಿದೆ. ಇದರಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಹಣ ರವಾನೆಯಲ್ಲಿನ ಪಾಲು ಕಡಿಮೆಯಾಗುತ್ತಿದೆ ಮತ್ತು ಈಗ ಖಾಸಗಿ ವಲಯದ ಬ್ಯಾಂಕ್‌ಗಳ ಪಾಲು ಶೇಕಡಾ 53 ಕ್ಕೆ ಏರಿದೆ, ಭಾರತದಲ್ಲಿ ವಿದೇಶಿ ಬ್ಯಾಂಕ್‌ಗಳ ಪಾಲು ಕೂಡ ಹೆಚ್ಚುತ್ತಿದೆ ಎಂದು ಈ ವರದಿಯಲ್ಲಿ ನಿರೀಕ್ಷಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News