ರಾಗಿಯನ್ನು ನಿತ್ಯ ಖಾಲಿ ಹೊಟ್ಟೆಗೆ ಹೀಗೆಯೇ ತಿನ್ನಿ, ಹೊಟ್ಟೆ - ಸೊಂಟದ ಭಾಗ ಸ್ಲಿಂ ಆಗಿಯೇ ಇರುವುದು

Benefits of Sprouting Ragi : ಮೊಳಕೆಯೊಡೆದ ರಾಗಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಈ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. 
 

ಬೆಂಗಳೂರು : Benefits of Sprouting Ragi : ರಾಗಿಯನ್ನು 'ಸೂಪರ್‌ಫುಡ್' ಎಂದು  ಕರೆಯಲಾಗುತ್ತದೆ.   ಇದು  ಇತರ ಧಾನ್ಯಗಳಿಗಿಂತ 10 ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ರಾಗಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮುಖ್ಯವಾಗಿ ಮೊಳಕೆ ಬರಿಸಿದ ರಾಗಿಯನ್ನು ಸೇವಿಸಿದರೆ ಬೊಜ್ಜು ಕಡಿಮೆಯಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮೊಳಕೆಯೊಡೆದ ರಾಗಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ರಾಗಿ ಮೊಳಕೆಯೊಡೆದ ನಂತರ, ಅದರಲ್ಲಿರುವ ಕ್ಯಾಲ್ಸಿಯಂ ಮಟ್ಟವು ಸುಮಾರು 20 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಇದಲ್ಲದೆ, ಅದರಲ್ಲಿ ಇತರ ಪೋಷಕಾಂಶಗಳ ಮಟ್ಟವೂ ಹೆಚ್ಚಾಗುತ್ತದೆ. ಹಾಗಾಗಿ ಮೂಳೆಗಳ ಆರೋಗ್ಯಕ್ಕೆ ಮೊಳಕೆ ಬಂದ ರಾಗಿಯನ್ನು ಸೇವಿಸಿ.    

2 /5

ರಾಗಿ ಮೊಳಕೆಯೊಡೆಯುವುದರಿಂದ ಕಬ್ಬಿಣದ ಅಂಶವು ಸುಮಾರು 10 ಪಟ್ಟು ಹೆಚ್ಚಾಗುತ್ತದೆ. ಸಾಮಾನ್ಯ  ರಾಗಿಯು 100 ಗ್ರಾಂಗೆ ಸುಮಾರು 5 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಆದರೆ ಮೊಳಕೆಯೊಡೆದ ನಂತರ, ಅದರಲ್ಲಿನ  ಕಬ್ಬಿಣದ ಅಂಶವು ಪ್ರತಿ ಗ್ರಾಂಗೆ ಸುಮಾರು 51 ಮಿಗ್ರಾಂ ನಷ್ಟಾಗುತ್ತದೆ. 

3 /5

ಮೊಳಕೆಯೊಡೆದ ರಾಗಿಯನ್ನು ಸೇವಿಸುವುದರಿಂದ, ನಿಮ್ಮ ದೇಹವು ಸಾಕಷ್ಟು ಉತ್ಕರ್ಷಣ ನಿರೋಧಕಗಳನ್ನು ಪಡೆಯುತ್ತದೆ. ಉತ್ಕರ್ಷಣ ನಿರೋಧಕಗಳು ನಮ್ಮ ದೇಹವನ್ನು ಫ್ರೀ  ರಾಡಿಕಲ್ ಗಳಿಂದ ರಕ್ಷಿಸುತ್ತದೆ. ಇದರಿಂದ ತ್ವಚೆಯ ಸೌಂದರ್ಯವೂ ಹೆಚ್ಚುತ್ತದೆ. 

4 /5

ಮೊಳಕೆಯೊಡೆದ ರಾಗಿಯನ್ನು ತಿನ್ನುವುದರಿಂದ, ದೇಹಕ್ಕೆ ಅಗತ್ಯವಾದ  ಪೋಷಕಾಂಶಗಳು ಸಿಗುತ್ತವೆ. ಇದಲ್ಲದೆ, ಈ ಧಾನ್ಯವು ವಿಟಮಿನ್ ಬಿ 12 ನಲ್ಲಿ ಸಮೃದ್ಧವಾಗಿದೆ.

5 /5

ಮೊಳಕೆ ಬರಿಸಿದ ರಾಗಿಯಿಂದ ತಯಾರಿಸಿದ ಗಂಜಿ ಕುಡಿಯುವುದರಿಂದ   ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಇದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಮೊಳಕೆಯೊಡೆದ ರಾಗಿಯಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದ್ದು, ಇದು ನಿಮ್ಮ ದೇಹವನ್ನು ಆರಾಮವಾಗಿ ಇಡಲು ಸಹಾಯ ಮಾಡುತ್ತದೆ.